Advertisement
ಒನ್ ಪ್ಲಸ್ 9 ಪ್ರೊ 8 ಜಿಬಿ ಮತ್ತು 12 ಜಿಬಿ ರ್ಯಾಮ್ ಆಯ್ಕೆಗಳಲ್ಲಿ ಲಭ್ಯವಿದೆ. ಮತ್ತು ಮಾರ್ನಿಂಗ್ ಮಿಸ್ಟ್, ಪೈನ್ ಗ್ರೀನ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಯೊಂದಿಗೆ ಲಭ್ಯವಿದೆ ಮತ್ತು ಡೈನಾಮಿಕ್ ರಿಫ್ರೆಶ್ ರೇಟ್ ಗಳನ್ನು ನೀಡುವ ಸ್ಮಾರ್ಟ್ 120Hz ವೈಶಿಷ್ಟ್ಯದೊಂದಿಗೆ AMOLED ಡಿಸ್ಪ್ಲೇ ಹೊಂದಿದೆ. ಒನ್ ಪ್ಲಸ್ 9 ಪ್ರೊ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ.
Related Articles
Advertisement
ಒನ್ ಪ್ಲಸ್ 9 ಪ್ರೊ ವಿಶೇಷತೆಗಳೆನು..?
ಡ್ಯುಯಲ್-ಸಿಮ್ (ನ್ಯಾನೊ) ಒನ್ ಪ್ಲಸ್ 9 ಪ್ರೊ 6.7-ಇಂಚಿನ ಕ್ಯೂ ಎಚ್ ಡಿ + (1,440×3,216 ಪಿಕ್ಸೆಲ್‌ಗಳು) ಫ್ಲೂಯಿಡ್ ಡಿಸ್ಪ್ಲೇ 2.0 ಅಮೋಲೆಡ್ ಡಿಸ್ಪ್ಲೇ ಯನ್ನು ಸ್ಮಾರ್ಟ್ 120 ಹೆಚ್ ಡಿ ವೈಶಿಷ್ಟ್ಯದೊಂದಿಗೆ 1Hz ನಡುವಿನ ರಿಫ್ರೆಶ್ ರೇಟ್ ನ್ನು ಕ್ರಿಯಾತ್ಮಕವಾಗಿ ಬದಲಾಯಿಸುತ್ತದೆ. ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಅನ್ನು ಹೊಂದಿದೆ, ಜೊತೆಗೆ 12GB ವರೆಗೆ LPDDR 5 RAM ಅನ್ನು ಹೊಂದಿದೆ.
ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 789 ಪ್ರೈಮರಿ ಸೆನ್ಸಾರ್ F / 1.8 ಲೆನ್ಸ್ ಹೊಂದಿದೆ, 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 766 ಸೆಕೆಂಡರಿ ಸೆನ್ಸಾರ್ ನೊಂದಿಗೆ ಅಳವಡಿಸಲಾಗಿದೆ, ಇದು ಅಲ್ಟ್ರಾ-ವೈಡ್-ಆಂಗಲ್ F/ 2.2 ಫ್ರೀ ಫಾರ್ಮ್ ಲೆನ್ಸ್ ಅನ್ನು ಹೊಂದಿದೆ. ಕ್ಯಾಮೆರಾ ಸೆಟಪ್ 8 ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಮೋನೊಕ್ರೋಮ್ ಸೆನ್ಸಾರ್ ನನ್ನು ಸಹ ಹೊಂದಿದೆ. ಇನ್ನು, ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ.
ಒನ್ ಪ್ಲಸ್ 9 ಪ್ರೊ 128 ಜಿಬಿ ಮತ್ತು 256 ಜಿಬಿ ಯು ಎಫ್ ಎಸ್ 3.1 ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ. ಫೋನ್ 5 ಜಿ, 4 ಜಿ ಎಲ್ ಟಿ ಇ, ವೈ-ಫೈ 6, ಬ್ಲೂಟೂತ್ ವಿ 5.2, ಜಿಪಿಎಸ್ / ಎ-ಜಿಪಿಎಸ್, ಎನ್ ಎಫ್ ಸಿ, ಮತ್ತು ಕನೆಕ್ಟಿವಿಟಿ ಮುಂಭಾಗದಲ್ಲಿ ಯುಎಸ್ ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ನನ್ನು ಒಳಗೊಂಡಿದೆ. 4,500mha ಬ್ಯಾಟರಿಯನ್ನು ಹೊಂದಿ ನೋಡಲು ಅತ್ಯಾಕರ್ಷಕವಾಗಿದೆ.
ಓದಿ : ಕರ್ತವ್ಯ ಲೋಪದ ಹಿನ್ನೆಲೆ: ತಿಕೋಟಾ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯೆ, ವಾರ್ಡನ್ ಗೆ ನೋಟಿಸ್