Advertisement

ಹೆಮ್ಮಾಡಿ ಸಮೀಪ ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿ : ಮಹಿಳೆ ಸ್ಥಳದಲ್ಲೇ ಸಾವು

09:42 PM Mar 29, 2021 | Team Udayavani |

ಕುಂದಾಪುರ: ಟೈರ್ ಸ್ಫೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು,ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಸಂಜೆ 6.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿಯ ಹೇಮಾಪುರ ಮಠದ ಸಮೀಪ ಸಂಭವಿಸಿದೆ.

Advertisement

ಉಡುಪಿಯ ಕೆಮ್ಮಣ್ಣು ಗ್ರಾಮದ ಹೂಡೆ ತೋನ್ಸೆಯ ನಿವಾಸಿ ಸಿಬ್ಗಾತುಲ್ಲಾ (38) ಅವರ ಪತ್ನಿ ಸುಹಾನ (30) ಮೃತ ದುರ್ದೈವಿ. ಕಾರಿನಲ್ಲಿದ್ದ ಸಿಬ್ಗಾತುಲ್ಲಾ ಹಾಗೂ 3 ತಿಂಗಳ ಚಿಕ್ಕ ಮಗು ಸಹಿತ ನಾಲ್ವರು ಮಕ್ಕಳು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಭಟ್ಕಳದಿಂದ ಉಡುಪಿಗೆ ಕಡೆಗೆ ಬರುತ್ತಿದ್ದಾಗ ಹೆಮ್ಮಾಡಿ ಸಮೀಪ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ, ಈ ಅವಘಡ ಸಂಭವಿಸಿದೆ. ಸುಹಾನ ಅವರ ತಾಯಿ ಮನೆ ಭಟ್ಕಳವಾಗಿದ್ದು, ಅಲ್ಲಿಗೆ ಹೋಗಿ ವಾಪಾಸ್ ಉಡುಪಿಗೆ ಬರುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸುವಲ್ಲಿ ಹೈವೇ ಪ್ಯಾಟ್ರೋಲ್ ಪೊಲೀಸರು ನೆರವಾದರು. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next