Advertisement

ಪ್ರಾಥಮಿಕ ಸಂಪರ್ಕಿತರ ಪರೀಕ್ಷೆ ಒಂದೇ ಬಾರಿ

05:19 PM May 25, 2020 | Suhan S |

ಕೊಪ್ಪಳ: ಕೋವಿಡ್ ಸೋಂಕಿತ ವ್ಯಕ್ತಿಯ ಜೊತೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಸರ್ಕಾರ ಮೊದಲು ಎರಡೆರೆಡು ಬಾರಿ ಪರೀಕ್ಷೆಗೆ ಒಳಪಡಿಸುತ್ತಿತ್ತು. ಆದರೆ ಇನ್ಮುಂದೆ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಪರೀಕ್ಷೆಯನ್ನು ಒಂದೇ ಬಾರಿ ಮಾಡಲಿದೆ.

Advertisement

ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೂ ಕೆಲ ದಿನಗಳ ಹಿಂದೆ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳಲ್ಲೇ ಒಂದೊಮ್ಮೆ ಪಾಸಿಟಿವ್‌, ಮತ್ತೂಮ್ಮೆ ನೆಗೆಟಿವ್‌ ವರದಿ ಬಂದಿದ್ದರಿಂದ ಅವರನ್ನು 2-3 ಬಾರಿ ಪರೀಕ್ಷೆಗೆ ಒಳಪಡಿಸಿ ನಿಗಾದಲ್ಲಿರಿಸಲಾಗುತ್ತಿತ್ತು. ಇದು ಸರ್ಕಾರಕ್ಕೂ ತಲೆನೋವಾಗಿತ್ತು.

ಸೋಂಕಿತ ವ್ಯಕ್ತಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಮೊದಲ ಬಾರಿ ಪರೀಕ್ಷೆಗೆ ಒಳಪಡಿಸಿ ಅವರನ್ನು ಕ್ವಾರಂಟೈನ್‌ ನಲ್ಲಿರಿಸಿ, 2ನೇ ಬಾರಿ ಅವರ ಗಂಟಲು ದ್ರವ ಪರೀಕ್ಷೆ ಮಾಡುತ್ತಿತ್ತು. ಮೊದಲ ನೆಗೆಟಿವ್‌ ಬಂದಿದ್ದರೆ, ಎರಡನೇ ಬಾರಿ ಪಾಸಿಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತು ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳ ಮೇಲೆಯೇ ಹೆಚ್ಚು ನಿಗಾ ಇರಿಸಲಾರಂಭಿಸಿತು. ಪ್ರಾಥಮಿಕ ಸಂಪರ್ಕಿತರನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಿ ಗಂಟಲು ದ್ರವ ಪಡೆದು ವರದಿ ಪಡೆಯಬೇಕೆಂದು ಸರ್ಕಾರ ನಿಯಮ ಜಾರಿಗೊಳಿಸಿತ್ತು. ಪ್ರಸ್ತುತ ಸರ್ಕಾರ ನಿಯಮವನ್ನು ಬದಲಿಸಿದ್ದು, ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಪರೀಕ್ಷೆಯನ್ನು ಒಂದೇ ಬಾರಿ ಮಾಡಿದರೆ ಸಾಕು, ಅದರಲ್ಲಿ ವರದಿ ನೆಗೆಟಿವ್‌ ಬಂದರೆ, ಅವರನ್ನು ಕ್ವಾರಂಟೈನ್‌ನಲ್ಲಿಸಿರಿ ನಂತರ ಬಿಡುಗಡೆ ಮಾಡಲು ನಿರ್ಧರಿಸಿದೆ. ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳಿಗೆ 2ನೇ ಬಾರಿ ಟೆಸ್ಟ್‌ ಮಾಡುವ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧಾರಕ್ಕೆ ಬಂದಿದ್ದು, ಮೇ 22ರಂದು ಎಲ್ಲ ಜಿಲ್ಲೆಗಳಿಗೆ ಆದೇಶ ಮಾಡಿದೆ.

183 ಜನ ಪ್ರಾಥಮಿಕ ಸಂಪರ್ಕಿತರು: ಜಿಲ್ಲೆಯಲ್ಲಿ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕಿತರಿದ್ದಾರೆ. ಈ ಪೈಕಿ 183 ಜನರು ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ. ಇವರಲ್ಲಿ ಕೆಲವರ ಗಂಟಲು ದ್ರವ ಎರಡೆರಡು ಬಾರಿ ಪರೀಕ್ಷೆಗೆ ಒಳಪಡಿಸಿದೆ. ಎರಡೂ ಬಾರಿ ನೆಗೆಟಿವ್‌ ಬಂದಿದ್ದರಿಂದ ಅವರನ್ನ ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಿದೆ. ಬಾದಾಮಿ ಗರ್ಭಿಣಿ ಕೇಸ್‌ನಲ್ಲಿ ಸಂಪರ್ಕಕ್ಕೆ ಬಂದಿದ್ದ ಜಿಲ್ಲೆಯ ನಿಲೋಗಲ್‌ ಗ್ರಾಮದ 18 ಜನರ ಗಂಟಲು ದ್ರವ ಎರಡು ಬಾರಿ ಪಡೆದು ಪರೀಕ್ಷೆ ಮಾಡಿತ್ತು. ಪ್ರಾಥಮಿಕ ಸಂಪರ್ಕಿತರಿಗೆ ಒಂದೇ ಬಾರಿ ಪರೀಕ್ಷೆ ಸಾಕೆಂದಿರುವ ಸರ್ಕಾರದ ನಿಯಮ ಜಿಲ್ಲಾಡಳಿತಕ್ಕೂ ನೆರವಾಗಿದೆ. ಜಿಲ್ಲಾಡಳಿತ 183 ಜನರ ವರದಿಯನ್ನು ಒಂದು ಬಾರಿ ಪಡೆದಿದ್ದು ಎಲ್ಲರ ವರದಿ ನೆಗಟಿವ್‌ ಎಂದು ಬಂದಿವೆ.

ಜಿಲ್ಲೆಯಲ್ಲಿ ಈ ಮೊದಲು ಪ್ರಾಥಮಿಕ ಸಂಪರ್ಕಿತರಿಂದ ಎರಡು ಬಾರಿ ಗಂಟಲು ದ್ರವ ಪಡೆದು ಪರೀಕ್ಷೆಗೊಳಪಡಿಸಿತ್ತು. ಆದರೆ ಸರ್ಕಾರ ಮೇ 22ಕ್ಕೆ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಒಂದೇ ಬಾರಿ ಪಡೆದು ಪರೀಕ್ಷೆಗೆ ಒಳಪಡಿಸಿ ಎಂದು ನಿರ್ದೇಶನ ನೀಡಿದ್ದರಿಂದ ಇನ್ಮುಂದೆ ಒಂದೇ ಬಾರಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ 183 ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್‌ ಎಂದು ಬಂದಿವೆ. –ಸುನೀಲ್‌ ಕುಮಾರ, ಕೊಪ್ಪಳ ಜಿಲ್ಲಾಧಿಕಾರಿ

Advertisement

 

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next