Advertisement

ಆರೋಗ್ಯ ಕಾರ್ಡ್‌ ನೋಂದಣಿ ಚುರುಕು

07:51 PM Jan 01, 2022 | Team Udayavani |

ದಾವಣಗೆರೆ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸುವ ಆಯುಷ್ಮಾನ್‌ ಭಾರತ್‌- ಆರೋಗ್ಯಕರ್ನಾಟಕ ಕಾರ್ಡ್‌ (ಎಬಿ-ಎಆರ್‌ಕೆ ) ನೋಂದಣಿ ಪ್ರಕ್ರಿಯೆಗೆ ಜಿಲ್ಲಾಡಳಿತ ಚುರುಕು ಮೂಡಿಸಿದ್ದು ಕಾರ್ಡ್‌ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ನಾಲ್ಕು ಲಕ್ಷ ಸಮೀಪಿಸುತ್ತಿದೆ. ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಜಿಲ್ಲೆಯಲ್ಲಿ ಬಹಳ ನಿಧಾನಗತಿಯಲ್ಲಿ ಸಾಗಿತ್ತು.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ನೋಂದಣಿಯಲ್ಲಿ ಗಣನೀಯ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿತು. ಜಿಲ್ಲಾಧಿಕಾರಿಯವರು ಪ್ರತಿ ತಿಂಗಳು ಕನಿಷ್ಠ 80ಸಾವಿರ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಮಾಡುವ ಗುರಿಯೊಂದಿಗೆಕೆಲಸಮಾಡಲು ಸೂಚಿಸಿದಪರಿಣಾಮಈಗ ಅಲ್ಲಲ್ಲಿ ಶಿಬಿರಗಳ ಮೂಲಕ ಕಾರ್ಡ್‌ ನೋಂದಣಿ ಮಾಡಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಲು ಈ ಮೊದಲು ಎಬಿ-ಎಆರ್‌ಕೆ ಕಾರ್ಡ್‌ನೊಂದಿಗೆ ಬಿಪಿಎಲ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ಕೇಳಲಾಗುತ್ತಿತ್ತು. ತುರ್ತು ಸಂದರ್ಭದಲ್ಲಿ ಈ ಎಲ್ಲ ದಾಖಲೆಗಳನ್ನು ಕೊಡಲಾಗದು ಎಂಬ ಕಾರಣಕ್ಕಾಗಿಯೇ ಅನೇಕರು ಎಬಿ-ಎಆರ್‌ಕೆ ಕಾರ್ಡ್‌ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈಗ ಸರ್ಕಾರ ಉಚಿತ ಚಿಕಿತ್ಸೆ ನೀಡಲು ಎಬಿ-ಎಆರ್‌ಕೆ ಕಾರ್ಡ್‌ ಒಂದನ್ನೇ ದಾಖಲೆಯನ್ನಾಗಿ ಪರಿಗಣಿಸಬೇಕು ಎಂಬ ಹೊಸ ನಿಯಮ ಮಾಡಿದ್ದರಿಂದ ಜನರು ಸಹ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿಗೆ ಆಸಕ್ತಿ ತೋರುತ್ತಿದ್ದಾರೆ.

ಕ್ಷಿಪ್ರ ಪ್ರಗತಿ ಪ್ರಯತ್ನ: ಆರೋಗ್ಯ ಇಲಾಖೆಯ ಅಂಕಿ-ಅಂಶಗಳನ್ನು ಗಮನಿಸಿ ಹೇಳುವುದಾದರೆ ಜಿಲ್ಲೆಯಲ್ಲಿ ಯೋಜನೆ (2018ರಿಂದ ) ಆರಂಭವಾದಾಗಿನಿಂದಇಲ್ಲಿಯವರೆಗೆ390809ಜನರುಎಬಿ-ಎಆರ್‌ ಕೆ ಕಾರ್ಡ್‌ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿರುವ 2020ರ ಜನಸಂಖ್ಯೆ ಆಧರಿಸಿದರೆ ಕಾರ್ಡ್‌ ನೋಂದಣಿಯಲ್ಲಿ ಶೇ.20ರಷ್ಟು ಪ್ರಗತಿಯಾಗಿದ್ದು ಬಿಪಿಎಲ್‌ ಕುಟುಂಬದವರನ್ನಷ್ಟೇ ಪರಿಗಣಿಸಿದರೆ ಈ ಪ್ರಗತಿ ಅಂದಾಜು ಶೇ. 40ಆಗಲಿದೆ. ಆರೋಗ್ಯ ಇಲಾಖೆ ಈಗ ಅಲ್ಲಲ್ಲಿ ಶಿಬಿರಗಳನ್ನು ನಡೆಸುವ ಮೂಲಕ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿಯಲ್ಲಿ ಕ್ಷಿಪ್ರ ಪ್ರಗತಿಸಾಧಿಸಲು ಮುಂದಾಗಿದೆ. ಒಟ್ಟಾರೆ ಆಮೆಗತಿಯಲ್ಲಿ ಸಾಗಿದ್ದ ಎಬಿ-ಎಆರ್‌ ಕೆ ಕಾರ್ಡ್‌ ನೋಂದಣಿ ಜಿಲ್ಲೆಯಲ್ಲಿ ವೇಗ ಪಡೆದುಕೊಂಡಿದ್ದು ನೋಂದಣಿ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ¨

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next