Advertisement
ರಾಜಧಾನಿಗೆ ವಾಪಸಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ ಅನ್ನುವಾಗಲೇ ವಿಶ್ರಾಂತಿ ಗೃಹದಿಂದ ಆಚೆ ಬಂದು ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದ. ವಿಶ್ರಾಂತಿ ಗೃಹದ ಮೇಲೆ ಹಾರುತ್ತಿದ್ದ ರಾಜಲಾಂಛನವಿದ್ದ ಬಾವುಟ, ಒಂದು ಕಡೆಗೆ ವಾಲಿಕೊಂಡಿರುವುದು ಅವನ ಕಣ್ಣಿಗೆ ಬಿತ್ತು. ಕೂಡಲೇ ಕಾವಲಿನವರನ್ನು ಕರೆದ ಅಕºರ್ ತಾನು ಕಂಡದ್ದನ್ನು ಅವನಿಗೂ ತೋರಿಸಿ “”ರಾಜಲಾಂಛನವಿರುವ ಆ ಬಾವುಟ ಸರಿಯಾಗಿ ಹಾರುತ್ತಿಲ್ಲ. ಯಾಕೆ ಹಾಗಾಗಿದೆ ಎಂದು ಕೂಡಲೇ ಹೋಗಿ ನೋಡಿಕೊಂಡು ಬಾ” ಎಂದು ಆಜ್ಞಾಪಿಸಿದ.
“”ಜಹಾಂಪನಾ… ನಿಮ್ಮ ಆದೇಶವನ್ನು ತಪ್ಪದೇ ಪಾಲಿಸುತ್ತೇನೆ. ಆದರೆ… ಒಂದು ಸಂಶಯವಿದೆ. ತಾವೂ ಸೇರಿದಂತೆ ಸಮಸ್ತ ಪರಿವಾರ ವೂ ದೆಹಲಿಗೆ ವಾಪಾಸಾಗಲು ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ರಾಜಲಾಂಛನವಿರುವ ಬಾವುಟವನ್ನು ತೆರವು ಮಾಡಲೇಬೇಕಲ್ಲವೆ?” ಕಾವಲಿನವನು ಅನುಮಾನದಿಂದಲೇ ಕೇಳಿದ.
Related Articles
“”ಅಪ್ಪಣೆ ಜಹಾಂಪನಾ. ನಿಮ್ಮ ಆದೇಶನ್ನು ಈಗಲೇ ತಿಳಿಸಿ ಬರುತ್ತೇನೆ” ಎನ್ನುತ್ತಾ ಕಾವಲಿನವನು ಹೊರಟು ನಿಂತ.
Advertisement
“”ಒಂದು ನಿಮಿಷ ನಿಲ್ಲು. ಮತ್ತೂಂದು ಮಾತನ್ನೂ ಹೇಳಬೇಕಿದೆ. ಆ ಗುಬ್ಬಿಯ ಗೂಡಿಗೆ, ಗೂಡಲ್ಲಿರುವ ಮೊಟ್ಟೆಗಳಿಗೆ ಹಾಗೂ ತಾಯಿ ಗುಬ್ಬಿಗೆ ಬೇರೆ ಪಕ್ಷಿಗಳಿಂದ ಅಥವಾ ಮನುಷ್ಯರಿಂದ ಯಾವುದೇ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು. ಇದು ಅಕºರ್ ದೊರೆಯ ಆದೇಶವೆಂದೂ ರಕ್ಷಣಾ ಅಧಿಕಾರಿಗೆ ತಿಳಿಸತಕ್ಕದ್ದು”“”ಅಪ್ಪಣೆ ಮಹಾಸ್ವಾಮಿ. ಈ ಮಾತುಗಳನ್ನೂ ತಿಳಿಸುವೆೆ. ನಾನಿನ್ನು ಹೊರಡಬಹುದೆ?” ಆ ಸೇವಕ ವಿನಯದಿಂದಲೇ ಕೇಳಿಕೊಂಡ. “”ಮತ್ತೂಂದು ಮಾತು ಹೇಳಲು ಮರೆತಿದ್ದೆ” ಅನ್ನುತ್ತಾ, ರಾಜಲಾಂಛನದ ಬಾವುಟವಿದ್ದ ದಿಕ್ಕನ್ನೇ ನೋಡುತ್ತ ಅಕºರ್ ಹೇಳಿದ. “”ಇನ್ನು ಕೆಲವೇ ದಿನಗಳಲ್ಲಿ ಆ ಗುಬ್ಬಿಗೂಡಿನಲ್ಲಿರುವ ಮೊಟ್ಟೆಗಳಿಂದ ಮರಿಗಳು ಹೊರ ಬರುತ್ತವೆ. ಅವು ಚೆನ್ನಾಗಿ ಬೆಳೆದು ಸ್ವತಂತ್ರವಾಗಿ ಹಾರಾಡಲು ಕಲಿಯುವವರೆಗೂ ರಾಜಪರಿವಾರದವರಿಗೆಂದು ನಿರ್ಮಿಸಿರುವ ಈ ಮನೆಯನ್ನಾಗಲಿ, ಈ ಮನೆಯ ಮೇಲ್ಭಾಗದಲ್ಲಿ ಹಾರಾಡುತ್ತಿರುವ ಧ್ವಜಸ್ತಂಭವನ್ನಾಗಲಿ, ಆ ಗುಬ್ಬಿ ಗೂಡನ್ನೇ ಆಗಲಿ ಯಾರಿಂದಲೂ ಸಣ್ಣದೊಂದು ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು. ಇದು ಅಕºರ್ ದೊರೆಯ ಆದೇಶ”
ಇಷ್ಟು ಹೇಳಿದ ನಂತರ ಅಕºರನ ಮೊಗದ ಮೇಲೆ ಮಂದಹಾಸವೊಂದು ತೇಲಿತು. ಗುಬ್ಬಿಗೂಡು, ನೂರು ಚುಕ್ಕಿಗಳ ಮೊಟ್ಟೆ. ಅದನ್ನು ಸೀಳಿಕೊಂಡು ಹೊರಬಂದು ಆ———… ಎಂದು ಬಾಯೆ¤ರೆವ ಮರಿ. ಮಕ್ಕಳಿಗೆ ಎಲ್ಲೆಲ್ಲಿಂದಲೋ ಆಹಾರ ತಂದುಕೊಡುವ ತಾಯಿ ಹಕ್ಕಿ ನಂತರ ಅವುಗಳಿಗೆ ಹಾರಾಡಲು, ಹೋರಾಡಲು, ಬಾಳಲು ಕಲಿಸುವ ಬಾಳೆಂಬ ಪಾಠಶಾಲೆ… ಎಷ್ಟು ಸುಂದರ ಅಲ್ಲವೇ ಈ ಜಗತ್ತು- ಅಂದುಕೊಳ್ಳುತ್ತಲೇ ಆತ ಅಂತಃಪುರದ ಕಡೆಗೆ ಹೆಜ್ಜೆ ಹಾಕಿದ. – ಎ. ಆರ್. ಮಣಿಕಾಂತ್