Advertisement
ಬಟ್ಟೆ ಅಂಗಡಿಯಲ್ಲಿ ಹೋಗಿ ಕಣ್ಣು ಹಾಯಿಸುವುದೇ ಹೊಸತೇನಿದೆ ಅಂತ. ಕ್ರಾಪ್ ಟಾಪ್‌ನಲ್ಲಿ ವೈವಿಧ್ಯವನ್ನು ಧರಿಸಿ ಖುಷಿಪಟ್ಟಾಗಿದೆ. ಅದೇ ಕ್ರಾಪ್ ಟಾಪ್ ಹುಡುಗಿಯರ ಫೇವರಿಟ್ ದಿರಿಸಾಗಿಯೂ ಪ್ರಸಿದ್ಧಿಯಾಗಿದೆ. ಆದರೆ ಈಗ ಅದೇ ಕ್ರಾಪ್ ಟಾಪ್ ಸ್ವಲ್ಪ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದೆ. ಅದೇ ವನ್ ಶೋಲ್ಡರ್ ಕ್ರಾಪ್ ಟಾಪ್.
ವನ್ ಶೋಲ್ಡರ್ ಕ್ರಾಪ್ ಟಾಪ್ ಸದ್ಯಕ್ಕೆ ಫ್ಯಾಶನ್ ಲೋಕದಲ್ಲಿ ಹೊಸತು. ಇದು ನೋಡಲೂ ಆಕರ್ಷಕವಾಗಿ ಕಾಣುವುದರಿಂದ ಶುಭ ಸಮಾರಂಭಗಳಿಗೆ ಧರಿಸುವುದು ಹೆಚ್ಚು ಸೂಕ್ತ. ಕೇವಲ ಕ್ರಾಪ್ ಟಾಪ್ ಮಾತ್ರವಲ್ಲ ಟೀ ಶರ್ಟ್, ಜೀನ್ಸ್ ಟಾಪ್, ಕುರ್ತಾ ಟಾಪ್‌ಗಳಲ್ಲಿಯೂ ವನ್ ಶೋಲ್ಡರ್ ಇರುವುದು ಸದ್ಯಕ್ಕೆ ಟ್ರೆಂಡ್ ಆಗಿದೆ. ಆದರೆ ವನ್ ಶೋಲ್ಡರ್ ಕ್ರಾಪ್ ಟಾಪ್ ಇವೆಲ್ಲಕ್ಕಿಂತ ವಿಭಿನ್ನವಾಗಿದ್ದು, ಪ್ರತಿಯೊಬ್ಬರಿಗೂ ಚೆನ್ನಾಗಿ ಒಪ್ಪುತ್ತದೆ. ಉದ್ದನೆ ಮತ್ತು ತೆಳ್ಳನೆ ಶರೀರ ಹೊಂದಿರುವವರಿಗೆ ಈ ಮಾದರಿಯ ಡ್ರೆಸ್ ಉತ್ತಮ ಆಯ್ಕೆಯಾಗಿದೆ. ಬಹುತೇಕ ಬಾಲಿವುಡ್ ನಟಿಯರು ಈಗಾಗಲೇ ಇಂತಹ ಧಿರಿಸು ತೊಟ್ಟು ವಿವಿಧ ಕಾರ್ಯಗಳಲ್ಲಿ ಮಿಂಚಿದ್ದಾರೆ. ಇನ್ನು ಕಿರು ತೆರೆ ಕಲಾವಿದರಿಗೂ ಮೆಚ್ಚಿನ ದಿರಿ ಸಾಗಿದ್ದು, ಬಹುತೇಕ ಹಿಂದಿ, ಕನ್ನಡ ಕಲಾವಿದರು ಹಲವು ಧಾರವಾಹಿಗಳಲ್ಲಿ ಇಂತಹ ದಿರಿಸು ತೊಟ್ಟು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸಾಂಪ್ರದಾಯಿಕ ದಿರಿಸಿಗೆ ವಿದೇಶಿ ಟಚ್ ಕೊಟ್ಟಿರುವ ಒನ್ ಶೋಲ್ಡರ್ ಕ್ರಾಪ್ ಡ್ರೆಸ್ ಈಗ ಯುವತಿಯರ ಹಾಟ್ ಫೇವರೆಟ್ ಲಿಸ್ಟ್ ನಲ್ಲಿದೆ.
Related Articles
ವನ್ ಶೋಲ್ಡರ್ ಕ್ರಾಪ್ ಟಾಪ್ ನೋಡಲು ಆಕರ್ಷಕವಾಗಿದ್ದರೂ, ಬೇಕಾಬಿಟ್ಟಿಯಾಗಿ ಆಯ್ಕೆ ಮಾಡಿದರೆ ಹಣ ಪೋಲು ಮಾಡಿದಂತಾಗುತ್ತದೆ. ಅದಕ್ಕಾಗಿ ಆಯ್ಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಪ್ಲೈನ್ ಮಾದರಿಯಲ್ಲಿರುವ ಟಾಪ್ ಗಳನ್ನು ಖರೀದಿಸದಿರುವುದೇ ಉತ್ತಮ. ಟಾಪ್‌ನ ಮೇಲ್ಭಾಗದಲ್ಲಿ ಅಂದರೆ ಕುತ್ತಿಗೆಯ ಭಾಗದಲ್ಲಿ ಡಿಸೈನ್ಡ್ ಮತ್ತು ವರ್ಕ್ ಹೊಂದಿರುವ ಟಾಪ್ ಗಳು ಹೆಚ್ಚು ಆಕರ್ಷಕವಾಗಿ ಕಾಣುವುದಲ್ಲದೆ, ಸಮಾರಂಭಗಳಿಗೆ ಹೇಳಿ ಮಾಡಿಸಿದ ಉಡುಗೆಯಾಗಿವೆ. ಆದ್ದರಿಂದ ಇಂತಹವುಗಳೇ ಆಯ್ಕೆಯಲ್ಲಿ ಮೊದಲ ಸ್ಥಾನದಲ್ಲಿರಲಿ. ಮಾರುಕಟ್ಟೆಯಲ್ಲಿ ಸುಮಾರು ಎರಡು ಸಾವಿರ ರೂ. ಗಳಿಂದ ಬೆಲೆ ನಿಗದಿಯಾಗಿರುತ್ತದೆ. ಆನ್‌ಲೈನ್ ಸೈಟ್‌ಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ಬಟ್ಟೆಗಳು ಲಭ್ಯವಿವೆ. ಆದರೆ ಗುಣಮಟ್ಟ ಮತ್ತು ದಿರಿಸಿನ ಸೂಕ್ತ ಆಯ್ಕೆಯ ದೃಷ್ಟಿಯಿಂದ ಬಟ್ಟೆ ಶಾಪ್‌ಗಳಲ್ಲೇ ಖರೀದಿಸುವುದು ಉತ್ತಮ.
Advertisement
ಇದು ಈಗಿನ ಟ್ರೆಂಡ್ಹೌದು. ಫ್ಯಾಶನ್ ಲೋಕದಲ್ಲಿ ಈಗೇನಿದ್ದರೂ ವನ್ ಶೋಲ್ಡರ್ ಕ್ರಾಪ್ ಟಾಪ್ ಜಮಾನ. ಏನಿದು ವನ್ ಶೋಲ್ಡರ್? ಎರಡೂ ಶೋಲ್ಡರ್ ಫೀಟ್ ಇಲ್ಲದಿದ್ದರೆ ಆ ದಿರಿಸನ್ನು ಧರಿಸುವುದಾದರೂ ಹೇಗೆ ಎಂದು ಚಿಂತಿತರಾಗಬೇಡಿ. ಏಕೆಂದರೆ ಸದ್ಯ ಇದೇ ಫ್ಯಾಶನ್. ಕ್ರಾಪ್ ಟಾಪ್‌ನಲ್ಲಿ ಒಂದು ಶೋಲ್ಡರ್ ಸ್ಲೀವ್‌ಲೆಸ್ ಅಥವಾ ತ್ರೀ ಫೋರ್ತ್ ಹ್ಯಾಂಡ್ ಮಾದರಿಯಲ್ಲಿ ಸ್ಟಿಚ್ ಆಗಿರುತ್ತದೆ. ಆದರೆ ಇನ್ನೊಂದು ಕೈಯಲ್ಲಿ ಸ್ಲೀವ್‌ಲೆಸ್ ಮಾದರಿಯಲ್ಲಿ ಸ್ಟಿಚ್ ಆಗಿರುತ್ತದೆ. ಅದೂ ಹೆಗಲಿಗಿಂತ ಸ್ವಲ್ಪ ಕೆಳಭಾಗದಲ್ಲಿ ಮತ್ತು ಮೊಣಕೈಗಿಂತ ಸ್ವಲ್ಪ ಮೇಲ್ಭಾಗದಲ್ಲಿ ಡಿಸೈನ್ಡ್ ಬಟ್ಟೆಯ ಪೀಸ್‌ನ್ನು ಕೂರಿಸಲಾಗುತ್ತದೆ. ಟಾಪ್ ಮತ್ತು ಲಾಂಗ್ ಸ್ಕರ್ಟ್ ಪ್ರತ್ಯೇಕವಾಗಿದ್ದು, ಕ್ರಾಪ್ ಟಾಪ್‌ನ ಒಂದು ಭಾಗ ಸ್ಕರ್ಟ್‌ಗೆ ತಾಗಿಕೊಂಡಿದ್ದರೆ, ಇನ್ನೊಂದು ಭಾಗ ಸೊಂಟಕ್ಕಿಂತ ಮೇಲ್ಭಾಗದಲ್ಲಿರುತ್ತದೆ. ಧನ್ಯಾ ಬಾಳೆಕಜೆ