Advertisement
ಈ ಬಗ್ಗೆ ಶನಿವಾರ ಮಾತನಾಡಿದ ಇರಾನ್ ಸಶಸ್ತ್ರ ಪಡೆಗಳ ವಕ್ತಾರ ಬ್ರಿಗೆಡಿಯರ್ ಜನರಲ್ ಅಬೋಲ್ಫಜಲ್ ಶೆಕಾರ್ಚಿ, ಸದ್ಯ ಈ ಭಾಗದಲ್ಲಿ ಸನ್ನಿವೇಶ ಇರಾನ್ ಪರವಾಗಿದೆ. ಒಂದು ವೇಳೆ ನಮ್ಮ ಶತ್ರುವು ಒಂದೇ ಒಂದು ಬುಲೆಟ್ ನಮ್ಮ ಮೇಲೆ ಹಾರಿಸಿದರೂ ಅದರಿಂದಾಗಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿ ಅಗ್ನಿಗಾಹುತಿಯಾಗುತ್ತದೆ ಎಂದಿದ್ದಾರೆ. ಇನ್ನು, ಅಮೆರಿಕದ ಯಾವುದೇ ದಾಳಿಗೂ ನಾವು ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ ಎಂದು ಇರಾನ್ ಹೇಳಿದೆ.
ಅಮೆರಿಕ ಮತ್ತು ಇರಾನ್ ಮಧ್ಯದ ಸಂಘರ್ಷ ತಾರಕಕ್ಕೇರುತ್ತಿರುವುದರಿಂದಾಗಿ ಭಾರತದ ನಾಗರಿಕ ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ. ಇರಾನ್ ವಾಯುಮಾರ್ಗವನ್ನು ಬಿಟ್ಟು, ಪರ್ಯಾಯ ಮಾರ್ಗವನ್ನು ಬಳಸಲು ನಿರ್ಧರಿಸಲಾಗಿದೆ. ಈ ಸಂಬಂಧ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ ಡಿಜಿಸಿಎ ಪ್ರಕಟನೆ ಹೊರಡಿಸಿದೆ.