Advertisement

ಡ್ರೆಸ್‌ ಕೋಡ್‌; ದೇಶ ಮುಖ್ಯವೋ, ಧರ್ಮ ಮುಖ್ಯವೋ; ಮದ್ರಾಸ್‌ ಹೈಕೋರ್ಟ್‌ ಪ್ರಶ್ನೆ 

12:08 PM Feb 11, 2022 | Team Udayavani |

ಚೆನ್ನೈ: ಕರ್ನಾಟಕದಲ್ಲಿ ಶುರುವಾದ ಹಿಜಾಬ್‌ ವಿವಾದ ದೇಶವ್ಯಾಪಿ ಆವರಿಸಿರುವುದರ ಬಗ್ಗೆ ಮದ್ರಾಸ್‌ ಹೈಕೋರ್ಟ್‌ ಖೇದ ವ್ಯಕ್ತಪಡಿಸಿದೆ. ದೇಶ ಮುಖ್ಯವೋ, ಧರ್ಮ ಮುಖ್ಯವೋ ಎಂಬ ಪ್ರಶ್ನೆಯನ್ನೂ ಕೇಳಿದೆ.

Advertisement

ಇದನ್ನೂ ಓದಿ:ಬಾಡಿ ಮಸಾಜ್‌ ಮಾಡಿಸಿಕೊಳ್ಳುವ ಚಟ: ಮಸಾಜ್‌ ಮಾಡುವವರಿಗೆ ಟಿಪ್ಸ್ ನೀಡಲು ಮನೆ ಕಳ್ಳತನ

ತಮಿಳುನಾಡಿನ ದೇಗುಲಗಳಿಗೆ ಆಗಮಿಸುವ ಭಕ್ತರಿಗೆ ಡ್ರೆಸ್‌ ಕೋಡ್‌ ಕಡ್ಡಾಯಗೊಳಿಸಬೇಕು. ಅನ್ಯ ಧರ್ಮೀ ಯರಿಗೆ ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕೆ ನಿಷೇಧ ಹೇರಬೇಕು. ದೇಗುಲಗಳ ಆವರಣಗಳಲ್ಲಿ ವ್ಯಾಪಾರ, ವ್ಯವಹಾರಗಳನ್ನೂ ನಿಷೇಧಿಸಬೇಕು ಎಂದು ಕೋರಿ ರಂಗರಾಜನ್‌ ನರಸಿಂಹನ್‌ ಎಂಬವರು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ, ಹಿಜಾಬ್‌ ವಿವಾದ ಪ್ರಸ್ತಾವವಾಯಿತು.

ಹಿಜಾಬ್‌ ಪರ-ವಿರೋಧ ಚರ್ಚೆಗಳ ಬಗ್ಗೆ ಖೇದ ವ್ಯಕ್ತಪಡಿಸಿದ ಪ್ರಭಾರಿ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ಭಂಡಾರಿ ಹಾಗೂ ನ್ಯಾ| ಡಿ. ಭರತ ಚಕ್ರವರ್ತಿ ಅವರುಳ್ಳ ನ್ಯಾಯಪೀಠ, ಡ್ರೆಸ್‌ ಕೋಡ್‌ ಬಗ್ಗೆ ಕೆಲವು ಶಕ್ತಿಗಳು ವಿವಾದ ಎಬ್ಬಿಸಿದ್ದಾರೆ. ಕೆಲವರು ಹಿಜಾಬ್‌ ಬೇಕು ಎಂದಾದರೆ, ಕೆಲವರು ಟೋಪಿ ಬೇಕು ಎನ್ನುತ್ತಿದ್ದಾರೆ ಇಡೀ ಒಂದು ದೇಶ, ಧರ್ಮದ ಆಧಾರ  ದಲ್ಲಿ ವಿಭಜನೆಗೊಂಡಿದೆ. ಇದು ನಿಜಕ್ಕೂ ಅಚ್ಚರಿಯ ವಿಚಾರ ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next