Advertisement
ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಒನ್ ಪ್ಲಸ್ ಕಂಪೆನಿಯದು ವಿಶಿಷ್ಟವಾದ ಹೆಸರು. ಅತ್ಯುನ್ನತ ದರ್ಜೆಯ ಪ್ರೊಸೆಸರ್, ಹೆಚ್ಚಿನ ರ್ಯಾಮ್, ಉತ್ತಮ ಕ್ಯಾಮರಾ, ಉತ್ತಮ ಗುಣಮಟ್ಟವುಳ್ಳ ಅಗ್ರಶ್ರೇಣಿಯ (ಫ್ಲಾಗ್‌ಶಿಪ್) ಮೊಬೈಲ್‌ಗಳೆಲ್ಲ ಸಾಮಾನ್ಯ ಬಳಕೆದಾರರರ ಕೈಗೆಟುಕುವುದಿಲ್ಲ ಎಂಬ ನಂಬಿಕೆಯನ್ನು ತೊಡೆದು ಹಾಕಿ, ಸಾಮಾನ್ಯರಿಗೂ ಅಗ್ರಶ್ರೇಣಿ (ಫ್ಲಾಗ್‌ಶಿಪ್) ಮೊಬೈಲ್‌ಗಳು ದೊರಕುವಂತೆ ಮಾಡಿದ್ದು ಈ ಕಂಪೆನಿ. 2014ರಲ್ಲಿ ಇದರ ಮೊದಲ ಫ್ಲಾಗ್‌ಶಿಪ್ ಫೋನ್ ಒನ್ ಪ್ಲಸ್ ಒನ್ ಬಂದಾಗ , ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಕ್ರಾಂತಿಯನ್ನೇ ಮಾಡಿತು. 19 ಸಾವಿರ ರೂ.ಗಳಿಗೇ ಫ್ಲಾಗ್‌ಶಿಪ್ ಫೋನ್ ನೀಡಿ ಘಟನಾಘಟಿ ಕಂಪೆನಿಗಳಿಗೆ ಆತಂಕ ಸೃಷ್ಟಿಸಿತು. 2015ರಲ್ಲಿ ಒನ್‌ಪ್ಲಸ್ ಎಕ್ಸ್ ಎಂಬ ಮಧ್ಯಮ ದರ್ಜೆಯ ಫೋನ್ ಅನ್ನು ಈ ಕಂಪೆನಿ ಬಿಡುಗಡೆ ಮಾಡಿದ್ದು ಬಿಟ್ಟರೆ ಇದುವರೆಗೂ ಪ್ರತಿ ವರ್ಷ ಕೇವಲ ಫ್ಲಾಗ್‌ಶಿಪ್ ಫೋನ್‌ಗಳನ್ನೇ ನೀಡುತ್ತಾ ಬಂದಿದೆ. ಪ್ರತಿ ವರ್ಷ ಒಂದೇ ಫೋನ್ ಬಿಡುಗಡೆ ಮಾಡುತ್ತಿದ್ದ ಒನ್‌ಪ್ಲಸ್ 2016ರ ನಂತರ ಒಂದು ಫೋನ್ ಬಿಡುಗಡೆ ಮಾಡಿ, ಕೆಲ ತಿಂಗಳ ನಂತರ ಆ ಫೋನ್‌ನ ಕೆಲವು ತಾಂತ್ರಿಕ ಅಂಶಗಳನ್ನು ಬದಲಿಸಿ ಅದರ ಟಿ ಆವೃತ್ತಿ ಬಿಡಲಾರಂಭಿಸಿತು. ಸಾಮಾನ್ಯವಾಗಿ ಪ್ರತಿ ವರ್ಷ ಮೇ ಅಥವಾ ಜೂನ್‌ನಲ್ಲಿ ತನ್ನ ಹೊಸ ಫೋನನ್ನು ಒನ್‌ಪ್ಲಸ್ ಜಗತ್ತಿನಾದ್ಯಂತ ಬಿಡುಗಡೆ ಮಾಡುತ್ತದೆ.
Related Articles
Advertisement
ಕ್ಯಾಮರಾ ವಿಭಾಗಕ್ಕೆ ಬಂದರೆ ಹಿಂಬದಿಯ ಕ್ಯಾಮರಾ ಮೂರು ಲೆನ್ಸ್ ಹೊಂದಿದೆ. ಒನ್‌ಪ್ಲಸ್‌ನಲ್ಲಿ ಇದೇ ಮೊದಲ ಬಾರಿಗೆ ಟ್ರಿಪಲ್ ಲೆನ್ಸ್ ಬಳಸಲಾಗಿದೆ. ಇದರಲ್ಲಿ 48 ಎಂಪಿ ಮುಖ್ಯ ಲೆನ್ಸ್ 8 ಎಂಪಿ ಟೆಲೆಫೋಟೋ ಲೆನ್ಸ್ ! 16 ಎಂಪಿ ವೈಡ್ ಆ್ಯಂಗಲ್ ಲೆನ್ಸ್‌ಗಳಿವೆ. ಸೆಲ್ಫಿà ಕ್ಯಾಮರಾ 16 ಮೆ.ಪಿ. ಒಂದು ಲೆನ್ಸ್ ಹೊಂದಿದೆ.
ಇದು ಸ್ನಾಪ್‌ಡ್ರಾಗನ್ 855 ಫ್ಲಾಗ್‌ಶಿಪ್ (ಅಗ್ರಶ್ರೇಣಿಯ) ಎಂಟು ಕೋರ್‌ಗಳ, 2.84 ಗಿಗಾಹಟ್ಜ್ ಶಕ್ತಿಯ ಪ್ರೊಸೆಸರ್ ಹೊಂದಿದೆ. 128 ಜಿಬಿ ಆಂತರಿಕ ಸಂಗ್ರಹ 6 ಜಿಬಿ ರ್ಯಾಮ್ ಹಾಗೂ 256 ಜಿಬಿ ಆಂತರಿಕ ಸಂಗ್ರಹ ಮತ್ತು 8 ಜಿಬಿ ರ್ಯಾಮ್ ಹಾಗೂ 12 ರ್ಯಾಮ್ ಮತ್ತು 256 ಜಿಬಿ ಸಂಗ್ರಹ ಉಳ್ಳ ಮೂರು ಆವೃತ್ತಿಯನ್ನು ಹೊಂದಿದೆ. ಸ್ಟಾಕ್ ಅಂಡ್ರಾಯ್ಡಗೆ ಸನಿಹವಾದ ಒನ್ ಪ್ಲಸ್ ಸೃಷ್ಟಿಯ ಆಕ್ಸಿಜನ್ ಆಪರೇಟಿಂಗ್ ಸಿಸ್ಟಂ ಅನ್ನು ಇದು ಒಳಗೊಂಡಿದೆ.
4000 ಎಂಎಎಚ್ ಬ್ಯಾಟರಿ ಹೊಂದಿದ್ದು, ಇದಕ್ಕೆ ಫಾಸ್ಟ್ ಚಾರ್ಜ್‌ಗಿಂತಲೂ ವೇಗವಾಗಿ ಚಾರ್ಜ್ ಆಗುವ ರ್ಯಾಪ್ ಚಾರ್ಜರ್ ನೀಡಲಾಗಿದೆ. ಇದು 20 ನಿಮಿಷದಲ್ಲಿ ಶೇ. 50ರಷ್ಟು ಬ್ಯಾಟರಿ ಚಾರ್ಜ್ ಮಾಡುತ್ತದೆಂದು ಕಂಪೆನಿ ತಿಳಿಸಿದೆ.
ಸುರಕ್ಷತೆಗಾಗಿ ಪರದೆಯ ಮೇಲೆ ಬೆರಳಚ್ಚು, ಪರದೆಯ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗಾಜು, ಎರಡು 4ಜಿ ಸಿಮ್ ಸ್ಲಾಟ್, ಸಿಟೈಪ್ ಕೇಬಲ್ ಇದೆ. ಇದರ ದರ ಹಿಂದಿನ ಒನ್‌ಪ್ಲಸ್ ಫೋನ್‌ಗಳಿಗಿಂತ ಹೆಚ್ಚಾಗಿದೆ. ಆದರೆ ಆಪಲ್, ಸ್ಯಾಮ್‌ಸಂಗ್ ಫ್ಲಾಗ್‌ಶಿಪ್ ಫೋನ್‌ಗಳಿಗೆ ಹೋಲಿಸಿದರೆ ಕಡಿಮೆ ಇದೆ. ದರ 6ಜಿಬಿ 128 ಜಿಬಿಗೆ 48,999 ರೂ., 8ಜಿಬಿ 256 ಜಿಬಿಗೆ 52999 ರೂ., 12 ಜಿಬಿ 256 ಜಿಬಿಗೆ 57,999 ರೂ. ಅಮೇಜಾನ್.ಇನ್ ನಲ್ಲಿ ಲಭ್ಯ.
ಒನ್ ಪ್ಲಸ್ 7: ಒನ್ ಪ್ಲಸ್ 7 ಪ್ರೊ ತುಂಬಾ ದುಬಾರಿಯಾಯಿತು ಎಂದುಕೊಳ್ಳುವವರಿಗಾಗಿ ಒನ್ ಪ್ಲಸ್ 7 ಅನ್ನು ಕಂಪೆನಿ ಇದರ ಜೊತೆ ಬಿಡುಗಡೆ ಮಾಡಿತು. ಇದರಲ್ಲೂ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಇದೆ. 48 ಮೆಪಿ ಕ್ಯಾಮರಾ ಇದೆ. ಆದರೆ ಮೂರು ಲೆನ್ಸ್ ಬದಲು ಎರಡು ಲೆನ್ಸ್ ಅಳವಡಿಸಲಾಗಿದೆ. ಸೆಲ್ಫಿàಗೆ 16 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಇದು 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹಾಗೂ 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸಂಗ್ರಹದ ಎರಡು ಆವೃತ್ತಿ ಹೊಂದಿದೆ.
ಇದು 6.41 ಇಂಚಿನ, ಫುಲ್ ಎಚ್‌ಡಿ (1080*2340) ಅಮೋಲೆಡ್ ಡಿಸ್‌ಪ್ಲೇ, ಇದರಲ್ಲಿ ಸೆಲ್ಫಿà ಕ್ಯಾಮರಾ ಫೋನಿನ ಮುಂಭಾಗದ ಮೇಲೆ ನೀರಿನ ಹನಿಯಂಥ ನಾಚ್ ಒಳಗೆ ಇದೆ. ಇದರಲ್ಲೂ ಪರದೆಯ ಮೇಲೆ ಬೆರಳಚ್ಚು ಸೌಲಭ್ಯಇದ್ದು, 3700 ಎಂಎಎಚ್ ಬ್ಯಾಟರಿ ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ. ಟೈಪ್ ಸಿ ಕೇಬಲ್ ಇದೆ. ಎರಡು ಸಿಮ್ ಹೊಂದಿದೆ. 7 ಮತ್ತು 7 ಪ್ರೊ ಮಾಡೆಲ್‌ಗಳಲ್ಲಿ 3.5 ಎಂಎಂ ಆಡಿಯೋ ಜಾಕ್ ಇಲ್ಲ ಎಂಬುದನ್ನು ಗಮನಿಸಬೇಕು.