ಭವಾನಿಪಟ್ನ : ಮೂರು ದಿನಗಳ ಹಿಂದೆ ಕಾಳಹಂಡಿಯಲ್ಲಿ ಮಾವೋ ಉಗ್ರರು ಅಪಹರಿಸಿ ಒಯ್ದಿದ್ದ ಮೂವರು ಗ್ರಾಮಸ್ಥರ ಪೈಕಿ ಒಬ್ಟಾತನ ಶವವು ಜಿಲ್ಲೆಯ ಕಾರ್ಲಪತ್ ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೈತುಂಬ ಗುಂಡೇಟು ಪಡೆದಿದ್ದ ಬನಮಾಲಿ ನಾಯಕ್ (32) ಎಂಬಾತನ ಶವವು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿರುವಂತೆಯೇ ಮಾವೋ ಉಗ್ರರು ಇನ್ನಿಬ್ಬರು ಗ್ರಾಮಸ್ಥರನ್ನು ಬಿಡುಗಡೆ ಮಾಡಿದ್ದಾರೆ ಎಂದು ಕಾಳಹಂಡಿ ಎಸ್‌ಪಿ ಬೃಜೇಶ್ ರಾಯ್ ತಿಳಿಸಿದ್ದಾರೆ.
ಗುಂಡಿಕ್ಕಿ ಸಾಯಿಸಲಾಗಿರುವ ಬನಮಾಲಿ ನಾಯಕ್ ಶವದ ಪಕ್ಕದಲ್ಲಿ “ಇದು ನಮ್ಮದೇ ಕೃತ್ಯ’ ಎಂದು ಹೇಳುವ ಕಾಗದದ ತುಂಡೊಂದು ದೊರಕಿದೆ.
20ಕ್ಕೂ ಅಧಿಕ ಸಶಸ್ತ್ರ ಮಾವೋ ಉಗ್ರರು, “ಪೊಲೀಸ್ ಮಾಹಿತಿದಾರರು’ ಎಂಬ ಶಂಕೆಯಲ್ಲಿ ಮೂವರು ಗ್ರಾಮಸ್ಥರನ್ನು ಕಳೆದ ಮಾರ್ಚ್ 15ರಂದು ಅಪಹರಿಸಿದ್ದರು.
ಮಾವೋ ಉಗ್ರರಿಗಾಗಿ ಪೊಲೀಸರ ವ್ಯಾಪಕ ಶೋಧ ಕಾರ್ಯಾಚರಣೆ ಸಾಗಿದೆ.