Advertisement

ಶಿವಮೊಗ್ಗ ಕ್ಷೇತ್ರದಲ್ಲೊಂದು ಹಸಿರು ಮತಗಟ್ಟೆ

06:00 AM Nov 03, 2018 | Team Udayavani |

ತೀರ್ಥಹಳ್ಳಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ 
ಮತಗಟ್ಟೆಯೊಂದನ್ನು ಮಲೆನಾಡಿನ ಹಸಿರು ಸೊಪ್ಪುಗಳಿಂದ ಅಲಂಕರಿಸಲಾಗಿದೆ. ಮತದಾನ ಜಾಗೃತಿಗಾಗಿ ಹಲವಾರು 
ಕಾರ್ಯಕ್ರಮ ಗಳನ್ನು ನಡೆಸಿದ ನಂತರ ಈಗ ಮತದಾರರನ್ನು ಆಕರ್ಷಿಸಲು ಮತಗಟ್ಟೆಯನ್ನು ವಿಶಿಷ್ಟವಾಗಿ ಸಜ್ಜುಗೊಳಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪದ ಹುರುಳಿ ಮತಕೇಂದ್ರವನ್ನು ಮಲೆನಾಡಿನ ಸೊಪ್ಪು ಗಳಿಂದ ಅಲಂಕರಿಸಲಾಗಿದೆ. ಅಲ್ಲದೆ, ಮತಗಟ್ಟೆಗೆ ಬರುವ ಮತದಾರರಿಗೆ ಬಿಸಿಲು ತಾಗದಂತೆ ಚಪ್ಪರ ಹಾಕಲಾಗಿದೆ.

Advertisement

ಪರಿಶಿಷ್ಟ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಹುರುಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿದೆ. ಮತಗಟ್ಟೆಯ ಹೊರಗಡೆ ಚಪ್ಪರ ಹಾಕಲಾಗಿದ್ದು, ವರಾಂಡಕ್ಕೆ ಬೈನೆ ಮರದಸೊಪ್ಪಿನಿಂದ ಗೋಡೆ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next