Advertisement
ವಿಚಿತ್ರದ ಸಂಗತಿ ಎಂದರೇ ಎಷ್ಟ್ತ್ತೋ ಜನರು ರೇಡಿಯೋವನ್ನು ನೋಡಿಯೇ ಇಲ್ಲಾ, ಅದು ಹೇಗಿರುತ್ತೆ? ಎಂಬ ಪ್ರಶ್ನೆ ಅವರ ತಲೆಯಲ್ಲಿ ಮೂಡುತ್ತದೆ.
Related Articles
Advertisement
ನನಗಿನ್ನೂ ನೆನಪಿದೆ. ನಾನು ಚಿಕ್ಕವಳಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಚಿತ್ರಗೀತೆಗಳು, ಲೇಖನ, ಕಥೆ, ಸಂಭಾಷಣೆ, ಆರೋಗ್ಯದ ಬಗ್ಗೆ ಮಾಹಿತಿ, ವಾರ್ತಾಪ್ರಸಾರ, ಕ್ರೀಡಾ ವಿಚಾರ ಹೀಗೆ ಹಲವಷ್ಟು ವಿಷಯದ ಬಗ್ಗೆ ಕೇವಲ ಧ್ವನಿಯಿಂದಾಗಿ ಎಷ್ಟ್ತ್ತೋ ಜನರು ಜ್ಞಾನವನ್ನು ಪಡೆದುಕೊಳ್ಳುತ್ತಿದ್ದರು. ಹಾಗೆ ಶಾಲೆಯಲ್ಲಿಯೂ ಕೂಡ ಮಕ್ಕಳಿಗೆ ವಾರದಲ್ಲಿ 3 ದಿನ ವಾದರು ರೇಡಿಯೋ ಕಾರ್ಯಕ್ರಮವನ್ನು ನಡೆಸುತ್ತಿದ್ದರು.
ರೇಡಿಯೋದ ಉಪಯೋಗವೆಂದರೇ ಕಡಿಮೆ ವೆಚ್ಚವನ್ನು ಭರಿಸುವ ಸಾಧನ, ಸುಲಭವಾಗಿ ಸ್ಥಳ ಬದಲಾಯಿಸಬಹುದು. ಏಕಾಗ್ರತೆ ಹೆಚ್ಚಿಸುತ್ತದೆ, ಯಾವುದೇ ಅಂತರ್ಜಾಲದ ಅವಶ್ಯಕತೆ ಇರುವುದಿಲ್ಲ ಹೀಗೆ ಹಲವಾರು ರೀತಿಯಲ್ಲಿ ರೇಡಿಯೋ ಉಪಯೋಗಿಯಾಗಿದೆ.
ಮೊದಲೆಲ್ಲಾ ಜನರು ಟಿವಿ ಇಲ್ಲದ ವೇಳೆಯಲ್ಲಿ ರೇಡಿಯೋವನ್ನು ಗುಂಪಿನಲ್ಲಿ ಕೂತು, ಚರ್ಚೆ ನಡೆಸುತ್ತಾ, ಸಂಗೀತ ಕೇಳಿ ಖುಷಿಪಡುತ್ತಿದ್ದರು. ಈಗಲೂ ಕೂಡ ಕೆಲವೊಂದಿಷ್ಟು ಜನರು ಕಾರಿನಲ್ಲಿ fm ಅನ್ನು ಕೇಳುತ್ತಾ ಹೊಸ- ಹೊಸ ವಿಚಾರವನ್ನು ತಿಳಿಯುತ್ತಾ ಮನೋರಂಜನೆಯನ್ನು ಪಡೆಯುತ್ತಾರೆ.
ರೇಡಿಯೋವಿನಲ್ಲಿ ಎಲ್ಲ ಭಾಷೆಯನ್ನು ಕೇಳಬಹುದು.ಅಲ್ಲದೇ, 2ನೇ ವಿಶ್ವಯುದ್ದದ ಸಮಯದಲ್ಲಿ, ರೇಡಿಯೋ ಮಿಲಿಟರಿ ಮತ್ತು ಸಾರ್ವಜನಿಕರಿಗೆ ಸಂವಹನದ ಪ್ರಮುಖವಾಗಿ ರೇಡಿಯೋ ಸಾಧನವಾಯಿತು ಎನ್ನಬಹುದು.
ಮನಸ್ಸಿಗೆ ಬೇಸರದ ಸಂಗತಿ ಎಂದರೇ ಇಷ್ಟೆಲ್ಲಾ ಉಪಯೋಗಕಾರಿಯಾಗಿರುವ ‘ರೇಡಿಯೋ ‘ವನ್ನು ಜನರು ಮೂಲೆಗುಂಪಾಗಿ ಕಾಣುತ್ತಿರುವ ವಿಚಾರ, ಆದರೇ ಸಂವಹನದ ಮಾಧ್ಯಮದಲ್ಲಿ ಯಾವುದೇ ರೀತಿಯಿಂದಲೂ ಹಾನಿ ಉಂಟುಮಾಡದೇ ಇರುವಂತಹ ಮಾಧ್ಯಮ ಎಂದರೇ ಅದು ‘ರೇಡಿಯೋ’ ಎಂದರೇ ತಪ್ಪಾಗಲಾರದು.
-ವಿದ್ಯಾ
ಎಂಜಿಎಂ ಕಾಲೇಜು, ಉಡುಪಿ