2015ನೇ ವರ್ಷಕ್ಕೆ ಸಂಬಂಧಿಸಿ ಈ ಅಧ್ಯಯನ ನಡೆದಿದೆ. ಇದೇ ಮೊದಲ ಬಾರಿಗೆ ಗರ್ಭಿಣಿಯರ ಆರೋಗ್ಯದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ನಡೆಸಲಾಗಿರುವ ಅಧ್ಯಯನ ಇದಾಗಿದೆ. 15-49 ವಯೋಮಿತಿಯ ಪ್ರತಿ 1 ಸಾವಿರ ಮಹಿಳೆಯರಿಗೆ 47 ಮಂದಿ ಗರ್ಭಪಾತಕ್ಕೆ ಒಳಗಾಗುತ್ತಾರೆ. ಇದು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದರೆ ಕಡಿಮೆ ಮತ್ತು ನೇಪಾಳ ಮತ್ತು ಬಾಂಗ್ಲಾಗೆ ಹೋಲಿಸಿದರೆ ಹೆಚ್ಚು.
2015ರಲ್ಲಿ 1.56 ಕೋಟಿ ಗರ್ಭಪಾತಗಳು ನಡೆದಿವೆ. ಅದರಲ್ಲಿ ಅರ್ಧದಷ್ಟು ಅಂದರೆ ಶೇ.48ರಷ್ಟು ಪ್ರಕರಣಗಳು ಉದ್ದೇಶಪೂರ್ಕವಲ್ಲದ ಗರ್ಭಪಾತವಾಗಿವೆ. 80 ಲಕ್ಷ ಮಹಿಳೆಯರು ಗರ್ಭಪಾತಕ್ಕಾಗಿ ಸುರಕ್ಷಿತವಲ್ಲದ ವಿಧಾನಗಳನ್ನು ಬಳಸಿದ್ದಾರೆ. ಹೀಗಾಗಿ, ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಅಧ್ಯಯನದ ಸಹ ಸಂಯೋಜಕ ಚಂದ್ರಶೇಖರ್, 2015ರಲ್ಲಿ ಸರ್ಕಾರದ ಗಮನಕ್ಕೆ ಬಂದಿರುವ ಪ್ರಕರಣಗಳಿಗಿಂತ ಐದು ಪಟ್ಟು ಹೆಚ್ಚು ಕೇಸುಗಳು ನಮಗೆ ಸಿಕ್ಕಿವೆ ಎಂದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಮತ್ತು ದಾದಿಯರು, ವ್ಯವಸ್ಥೆಗಳನ್ನು ಒದಗಿಸಿದರೆ ಗರ್ಭಪಾತ ತಡೆಯಬಹುದು ಎಂದು ಚಂದ್ರಶೇಖರ್ ಹೇಳಿದ್ದಾರೆ. ಗರ್ಭಪಾತ ವಿರೋಧಿ ಕಾನೂನು ದೇಶದಲ್ಲಿ ಕಠಿಣವಾಗಿದ್ದು, 20 ವಾರಗಳಿಗಿಂತ ಮೇಲ್ಪಟ್ಟ ಗರ್ಭವನ್ನು ಮಾತ್ರ ಅದೂ ತಾಯಿಯ ಜೀವಕ್ಕೆ ತೊಂದರೆಯಾಗಲಿದೆ ಎಂದು ದೃಢಪಟ್ಟರೆ ಮಾತ್ರ ತೆಗೆಯುವ ಅವಕಾಶ ಇದೆ.
Advertisement