Advertisement

ಪ್ರತಿ 530 ಮುಸ್ಲಿಮರಿಗೊಂದು ಮಸೀದಿ

09:35 AM Nov 28, 2019 | Hari Prasad |

ಬೀಜಿಂಗ್‌: ಮುಸ್ಲಿಂ ಸಮುದಾಯದ ಜನರೇ ಹೆಚ್ಚಾಗಿರುವ ಚೀನದ ಕ್ಸಿನ್‌ಜಿಯಾಂಗ್‌ ಪ್ರದೇಶದಲ್ಲಿ ಜನಾಂಗೀಯ ಹತ್ಯೆ ನಡೆಸಲಾಗಿದೆ. ಜತೆಗೆ ವಿನಾಕಾರಣ ಲಕ್ಷಾಂತರ ಮಂದಿಯನ್ನು ಬಂಧಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದರ ಜತೆಗೆ ಪ್ರತಿ 530 ಮಂದಿಗೆ ಒಂದು ಮಸೀದಿ ಮಾತ್ರ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಸೋರಿಕೆಯಾಗಿರುವ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಆದರೆ ವರದಿಗಳನ್ನು ಚೀನ ಸರಕಾರ ಸಾರಾಸಗಟಾಗಿ ತಿರಸ್ಕರಿಸಿದೆ.

Advertisement

ಇದೇ ವೇಳೆ ಈ ಪ್ರದೇಶದಲ್ಲಿನ ನೈಜ ಸ್ಥಿತಿ ತಿಳಿಯಲು ಅಂತಾರಾಷ್ಟ್ರೀಯ ನಿಯೋಗದ ಭೇಟಿಗೆ ಅವಕಾಶ ನೀಡಬೇಕು ಎಂದು ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌, ಜರ್ಮನಿ ಇನ್ನಿತರ ರಾಷ್ಟ್ರಗಳು ಒತ್ತಾಯಿಸಿವೆ. ಹಿಂಸೆ ಹಾಗೂ ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮೂರು ವರ್ಷಗಳಲ್ಲಿ ಗಣನೀಯವಾಗಿ ಅಪರಾಧಗಳ ಸಂಖ್ಯೆ ಕ್ಷೀಣಿಸಿದೆ ಎಂದು ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next