Advertisement

ವಿಜಯಪುರದ ಮತ್ತೋರ್ವನಿಗೆ ಸೋಂಕು ದೃಢ: ಜಿಲ್ಲೆಯಲ್ಲಿ 44ಕ್ಕೇರಿದ ಸಂಖ್ಯೆ

08:27 AM May 02, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢವಾಗಿದೆ.  ಶುಕ್ರವಾರ ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲಿಟಿನ್ ನಲ್ಲಿ ಜಿಲ್ಲೆಯ ಮತ್ತೋರ್ವನಿಗೆ ಸೋಂಕು ದೃಢಪಟ್ಟಿದೆ.

Advertisement

ಮೊದಲ ಸೋಂಕಿತೆ ಸೋಂಕಿತ ಸಂಖ್ಯೆ 221ರ ಸಂಪರ್ಕದಿಂದ 45 ವರ್ಷದ ವ್ತಕ್ತಿಗೆ (ಪಿ510) ಸೋಂಕು ಹರಡಿತ್ತು. ಈ ಸೋಂಕಿತನ ಸಂಪರ್ಕದಿಂದ ಶುಕ್ರವಾರ ಪ್ರಕಟವಾದ ವರದಿಯಲ್ಲಿ 54 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಈತನನ್ಪಿನು 577 ಎಂದು ಗುರುತಿಸಲಾಗಿದೆ.  ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 44 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 24 ಜನರಿಗೆ ಸೋಂಕು ತಾಗಿರುವುದು ಧೃಢವಾಗಿದೆ. ಇದರಿಂದ ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಇದರಲ್ಲಿ 251 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 22 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಮತ್ತು ಓರ್ವ ಸೋಂಕಿತ ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next