Advertisement

ಚಾಮರಾಜನಗರದಲ್ಲಿ ಒಂದು ತಿಂಗಳು ಗಣಿಗಾರಿಕೆ ಸ್ಥಗಿತ: ವಿ.ಸೋಮಣ್ಣ

04:43 PM Mar 05, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಗಣಿಗಾರಿಕೆಯನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆದ ಪತ್ರಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನೇತೃತ್ವದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಲಾಗಿದ್ದು, ಅಕ್ರಮ-ಸಕ್ರಮವಾಗಿ ನಡೆಯುತ್ತಿರುವ ಎಲ್ಲಾ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಬದ್ಧವಾಗಿದ್ದರೆ ಅವುಗಳಿಗೆ ಅವಕಾಶ ನೀಡಲಾಗುತ್ತದೆ. ಅಕ್ರಮ ಕಂಡು ಬಂದರೆ ಸ್ಥಳದಲ್ಲೆ ಅಂತವರ ಪರವಾನಗಿ ರದ್ದು ಪಡಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: 10 ಗಂಟೆ ಕಾರ್ಯಾಚರಣೆ ನಂತರ ಓರ್ವನ ಶವ ಹೊರಕ್ಕೆ

ಜಿಲ್ಲೆಯ ಎಲ್ಲಾ ಗಣಿಗಾರಿಕಾ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸಮಿತಿ ತಂಡ ನಾಳೆಯಿಂದ ತೆರಳಲಿದ್ದು, ಇದರಲ್ಲಿ ಯಾರೆ ಇದ್ದರು, ಎಷ್ಟೇ ಪ್ರಭಾವಿಗಳಾಗಿದ್ದರೂ ಸಹ ಹಸ್ತಕ್ಷೇಪ ಇರುವುದಿಲ್ಲ. ಕಾನೂನು ಚೌಕಟ್ಟಿನಡಿಯಲ್ಲಿಯೇ ಕ್ರಮ ವಹಿಸಲಾಗುವುದು ಎಂದರು.

ಮಡಹಳ್ಳಿ ಕ್ವಾರಿ ಗಣಿಗಾರಿಕೆ ಶಾಶ್ವತ ಸ್ಥಗಿತ

Advertisement

ಮಡಹಳ್ಳಿ ಕ್ವಾರಿ ಪರವಾನಗಿ ಪಡೆದಿದ್ದ ಮಹೇಂದ್ರಪ್ಪ ಅವರ ಲೈಸನ್ಸ್ ರದ್ದು ಗೊಳಿಸಲಾಗಿದ್ದು, ಶಾಶ್ವತವಾಗಿ ಈ ಸ್ಥಳದಲ್ಲಿ ಗಣಿಗಾರಿಕೆಗೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next