Advertisement

ಹಾಸ್ಟೆಲ್‌ನೊಳಗಿನ ಒಂದು ಕ್ಷಣ

07:20 AM May 11, 2018 | |

ಅದು ನನ್ನ ಬಿಸಿಎ 5ನೇ ಸೆಮಿಸ್ಟರ್‌. ಸೆಮಿಸ್ಟರ್‌ ಎಕ್ಸಾಮ್ ಸಮೀಪಿಸುತ್ತಿದ್ದ ಕಾರಣ, ಮಧ್ಯಾಹ್ನದ ಸ್ಪೆಷಲ… ಕ್ಲಾಸನ್ನು ಘೋಷಿಸಿಯೇ ಬಿಟ್ಟರು ನಮ್ಮ ಮಿಸ್ಸು. ಕ್ಲಾಸ್‌ನಲ್ಲಿ ಬೆಸ್ಟ್ ಸ್ಟೂಡೆಂಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೇಲೆ ಕ್ಲಾಸ್‌ ಬಂಕ್‌ ಮಾಡಲು ಸಾಧ್ಯವೇ ಹೇಳಿ? ಎಲ್ಲರೂ ಹಾಸ್ಟೆಲ್‌ ಸ್ಟೂಡೆಂಟ್ಸ್‌ ಆದ್ರೆ ನಾನು ಒಬ್ಬಳೇ ಲೋಕಲ… ಸ್ಟೂಡೆಂಟ್‌. ಲಂಚ್‌ ಬೇರೆ ತಂದಿರಲಿಲ್ಲ. ಕ್ಯಾಂಟೀನ್‌ ಒಂದೇ ಗತಿ ಅಂದುಕೊಂಡೆ. ಆದ್ರೆ ಒಬ್ಬಳೇ ಹೋಗೋಕೆ ನನಗೇನೋ ಬೇಜಾರು. ಆದಕ್ಕೆ ನನ್ನ ಹಾಸ್ಟೆಲ್‌ ಫ್ರೆಂಡ್‌ಗೆ ನನ್ನ ಜೊತೆ ಬರೋಕೆ ಕನ್ವೆ… ಮಾಡಿದ್ರೆ ಅವಳು ನನನ್ನೇ ಹಾಸ್ಟೆಲಲ್ಲಿ ಊಟಕ್ಕೆ ಕರೆಯೋದೇ?

Advertisement

ನನಗೆ ವಾರ್ಡನ್‌ ಅಂದ್ರೆ ಏನೋ ಭಯ. ನನ್ನ ಹಾಸ್ಟೆಲ್‌ ಫ್ರೆಂಡ್ಸ್‌ ಎಲ್ಲಾ ವಾರ್ಡನ್‌ ಅಂದ್ರೆ ಗುಮ್ಮ ಅನ್ನೋ ಇಮೇಜನ್ನ ನನ್ನ ತಲೇಲಿ ಕ್ರಿಯೇಟ… ಮಾಡಿದ್ರು. ಇನ್ನು ಬೇರೆ ದಾರಿಯೇ ಇಲ್ಲ ಅದ್ಕೊಂಡು ಮನಸ್ಸಿಲ್ಲದ ಮನಸಲ್ಲಿ “ಹೂಂ’ ಅಂದೆ. ಹಾಸ್ಟೆಲ್‌ ತಲುಪಲು 10 ನಿಮಿಷ ನಡೆದುಕೊಂಡು ಹೋಗಬೇಕಿತ್ತು. ಬಿಸಿಲು ಬೇರೆ ಇತ್ತು. 

ಹಾಗೋ ಹೀಗೋ ಹಾಸ್ಟೆಲ್‌ ತಲುಪುವಷ್ಟರಲ್ಲಿ  ಸಾಕಾಗಿ ಹೋಗಿತ್ತು. ನನ್ನ ಫ್ರೆಂಡ್‌ ಎರಡು ಪ್ಲೇಟ… ತೆಗೊಂಡು ನನಗೂ ಅವಳಿಗೂ ಊಟ ತರಲು ಹೋದಳು. ಅದೊಂದು ದೊಡ್ಡ ಹಾಲ್‌ ಎಲ್ಲರೂ ಅವರವರ ಪ್ಲೇಟ… ಮುಂದೆ ಕೂತ್ಕೊಂಡು ಊಟ ಮಾಡುತ್ತಿದ್ದರು. ನಾನು ಅಲ್ಲೇ ಇದ್ದ ಒಂದು ಟೇಬಲ್‌ ಸೆಲೆಕr… ಮಾಡಿ ಕುಳಿತೆ. ಲೋಕಲ್‌ ಸ್ಟೂಡೆಂಟ್ಸ… ಹಾಸ್ಟೆಲ್‌ಗೆ ಬರೋದು ತುಂಬಾ ಕಡಿಮೆ. ಹಾಗಾಗಿ ಎÇÉಾ ನನ್ನ ಫ್ರೆಂಡ್ಸ್‌ ನನ್ನನ್ನು ಎಲಿಯನ್‌ ತರಹ ನೋಡ್ತಾ ಇದ್ರು!

ನನ್ನ  ಫ್ರೆಂಡ್‌ ಅಷ್ಟರಲ್ಲಿ ಊಟ ತಂದಳು. ಅವಳಿಗೆ ಧನ್ಯವಾದ ಹೇಳಿ ಊಟ ಮಾಡಿದೆ. ನನಗಂತೂ ಆ ಹಸಿವೆಗೆ ಊಟ ಅಮೃತ ಸಿಕ್ಕಂತಾಯ್ತು. ಊಟ ಆದಮೇಲೆ ಅರ್ಧ ತಾಸು ಇತ್ತು ಕ್ಲಾಸಿಗೆ. ಅದಕ್ಕೆ ಅವಳು ನನ್ನನ್ನ ರೂಮ…ಮೇಟ್‌ಗಳನ್ನ ಭೇಟಿ ಮಾಡಿಸೋಕೆ ಕರೆದುಕೊಂಡು ಹೋದಳು. ಕಾರಿಡಾರ್‌ನಲ್ಲಿ ನಡೆದುಕೊಂಡು ಬರಬೇಕಾದರೆ ಇರಲಿಲ್ಲ. ಏಲ್ಲರೂ ಮೊಬೈಲ್‌ ಅನ್ನೋ ಪ್ರಪಂಚದಲ್ಲಿ ಮುಳುಗಿದ್ದರು. ಹೇಗೋ ಅವಳ ರೂಮಿಗೆ ಬಂದುಬಿಟ್ಟೆ . ಅಲ್ಲೂ ಅದೇ ಕತೆ! ಅವಳ ರೂಮ್ ಮೇಟ್ಸ…ನ ಭೇಟಿ ಮಾಡಿಸಬೇಕಾದರೆ ಎಲ್ಲರೂ ಒಮ್ಮೆ  “ಹಾಯ…’ ಹೇಳಿ, ಸ್ಮೈಲ್‌ ಕೊಟ್ಟು ಮತ್ತೆ ಮೊಬೈಲ್‌ಗೆ ಶರಣಾದ್ರು. 

    ಒಬ್ಬಳು ನೋಟಿಫಿಕೇಶನ್‌ ನೋಡ್ತಾ ಇದ್ರೆ, ಇನ್ನೊಬ್ಬಳು ಚಾಟಿಂಗ್‌ನಲ್ಲಿ ಬ್ಯುಸ್ಸಿ, ಒಬ್ಬಳು ಕಾಲ…ನಲ್ಲಿ ಬ್ಯುಸ್ಸಿ ಇದ್ರೆ, ಇನ್ನೊಬ್ಬಳು ವೀಡಿಯೋ ಕಾಲ್‌ನಲ್ಲಿ  ಬ್ಯುಸ್ಸಿ. ಇವರೆಲ್ಲರ ಜೊತೆ ಹೇಗಿರುತ್ತಾಳ್ಳೋ ಇವಳು ಅಂತ ಅನ್ನಿಸಿತ್ತು ನನಗೆ. 10 ನಿಮಿಷ ಮೊಬೈಲ್‌ನ ಪಕ್ಕಕ್ಕೆ ಇಟ್ಟು ಮಾತಾಡೋಕೆ ಆಗುವುದಿಲ್ಲವೆ? ಅಷ್ಟೊಂದು ಟೆಕ್ನೋಲಜಿಗೆ ಅಡಿಕ್ಟ್  ಆಗೋದು ಸರಿನಾ? ಅಂತ ಯೋಚಿಸಿ ಸಮಯ ನೋಡಿದ್ರೆ ಕ್ಲಾಸಿಗೆ ಆಗಲೇ ತಡವಾಗಿತ್ತು. ತಡವಾದರೆ ಅಟೆಂಡೆನ್ಸ್ ಇಲ್ಲ ಅಂತಾರೆ ನಮ್ಮ ಮಿಸ್‌. ಅದಕ್ಕೆ ಬೇಗ ಬೇಗ ನಡೆದುಕೊಂಡು ಕ್ಲಾಸ್‌ಗೆ ತಲುಪಿದೆವು.

Advertisement

ಪ್ರಗತಿ ಆಳ್ವಾಸ್‌ ಕಾಲೇಜು, ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next