Advertisement

ಬಿಜೆಪಿ ಅಮ್ಮ ಮಗನ ಪಕ್ಷವಲ್ಲ

06:55 AM Mar 11, 2018 | Team Udayavani |

ಮುಂಬಯಿ: ಕಾಂಗ್ರೆಸ್ಸನ್ನು ಪರೋಕ್ಷವಾಗಿ ಟೀಕಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಬಿಜೆಪಿ ಅಮ್ಮ ಮಗನ ಪಕ್ಷವಲ್ಲ ಎಂದಿದ್ದಾರೆ. ಆಂಗ್ಲ ಸುದ್ದಿವಾಹಿನಿಯ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದ ಗಡ್ಕರಿ, ಬಿಜೆಪಿಯದ್ದು ಒನ್‌ ಮ್ಯಾನ್‌ ಶೋ ಅಲ್ಲ. ಇದು ವಾಜಪೇಯಿ, ಅಡ್ವಾಣಿ ಅಥವಾ ಅಮಿತ್‌ ಷಾರ ಪಕ್ಷವಲ್ಲ. ಪ್ರಧಾನಿ ಮೋದಿ ಅವರ ಪಕ್ಷವೂ ಅಲ್ಲ. ಇದು ಪಕ್ಷಕ್ಕಾಗಿ ಕೆಲಸ ಮಾಡುವ ಲಕ್ಷಗಟ್ಟಲೆ ಕಾರ್ಯಕರ್ತರ ಪಕ್ಷ ಎಂದಿದ್ದಾರೆ.

Advertisement

ಮೋದಿ ಒನ್‌ ಮ್ಯಾನ್‌ ಶೋ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಅವರಿಗೆ ಅವಮಾನ ಮಾಡಲಾಗುತ್ತಿದೆ. ಮೋದಿ ದಿನಕ್ಕೆ 18 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೃಷ್ಟಿಕೋನವಿದೆ ಮತ್ತು ಬದ್ಧತೆಯಿದೆ. ಇದೇ ಕಾರಣಕ್ಕೆ ಎಲ್ಲ ಸಚಿವಾಲಯದಿಂದಲೂ ವಿವರ ಪಡೆದು ಸೂಕ್ತ ಸಲಹೆ ನೀಡುತ್ತಾರೆ. ನನಗೆ ಅವರ ಹಲವು ನಿರ್ಧಾರಗಳ ನಾನು ಭಿನ್ನಾಭಿಪ್ರಾಯವನ್ನು ತಿಳಿಸಿದ್ದೇನೆ. ಹೀಗೆ ಮಾಡಬೇಡಿ ಎಂದು ಹೇಳಿದ್ದೇನೆ. ಒಂದು ಸನ್ನಿವೇಶದಲ್ಲಿ ನಿಮ್ಮ ನಿರ್ಧಾರದಿಂದ ರೈತರು ತೊಂದರೆಯಾಗುತ್ತಿದೆ ಎಂದಿದ್ದೆ. ತಕ್ಷಣವೇ ಕೃಷಿ ಸಚಿವರು ಮತ್ತು ಇತರ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಚರ್ಚಿಸಲು ನನ್ನ ಬಳಿಗೆ ಕಳುಹಿಸಿದರು. 

ನನ್ನ ಅಭಿಪ್ರಾಯವನ್ನು ಅವರು ಪಡೆದು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದೂ ಹೇಳಿದ್ದಾರೆ ಗಡ್ಕರಿ. ನಾನು 2019ರ ಲೋಕಸಭೆ ಚುನಾವಣೆಯ ವೇಳೆ ಪ್ರಧಾನಿ ಅಭ್ಯರ್ಥಿಯಲ್ಲ. ನಾನು ಪ್ರಧಾನಿಯಾಗಲು ಬಯಸಿಲ್ಲ. ನಾನು ಏನನ್ನೂ ಕೇಳಲು ಹೋಗಿಲ್ಲ.ಯಾರು ಪ್ರಧಾನಿಯಾಗುತ್ತಾರೆ ಎಂಬುದಕ್ಕಿಂತ ನನಗೆ ನನ್ನ ದೇಶದ ಭವಿಷ್ಯ ಮುಖ್ಯ ಎಂದು ಗಡ್ಕರಿ ಹೇಳಿದ್ದಾರೆ.

ನಾನೇನೂ ದೊಡ್ಡ ನಾಯಕನಲ್ಲ. ವೇದಾಂತಿಯೂ ಅಲ್ಲ. ಇಂಜಿನಿ ಯರಾಗಲೀ, ಆರ್ಥಿಕ ತಜ್ಞನಾಗಲೀ ಅಲ್ಲ. ನನ್ನ ಸಮಾಜ ಮತ್ತು ದೇಶಕ್ಕೆ ನಾನು ಎಷ್ಟು ಉತ್ತಮವಾಗಿ ಕೆಲಸ ಮಾಡಬಹುದೋ ಅಷ್ಟನ್ನು ಮಾತ್ರ ನಾನು ಮಾಡುತ್ತಿದ್ದೇನೆ. ನಾನು ರಸ್ತೆಯಲ್ಲಿ ನಡೆದು ಹೋಗುತ್ತಿದ್ದೇನೆ. ನನ್ನ ಸೂರು ಎಲ್ಲಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next