Advertisement

Adani Issue: ಕೇಂದ್ರ ಸರ್ಕಾರದ ವಿರುದ್ಧ ಜೈರಾಮ್ ರಮೇಶ್ ತೀವ್ರ ವಾಗ್ದಾಳಿ

04:25 PM Sep 09, 2023 | Team Udayavani |

ನವದೆಹಲಿ: ಅದಾನಿ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿ 20 ಥೀಮ್ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಆದರೆ ಪ್ರಧಾನಿ ನರೇಂದ್ರ ಮೋದಿ ಅವರು “ಒಬ್ಬ ಮನುಷ್ಯ, ಒಬ್ಬರಲ್ಲಿ ನಂಬಿಕೆ ಹೊಂದಿದ್ದಾರೆಂದು ತೋರುತ್ತಿದೆ” ಎಂದು ಟೀಕಿಸಿದರು.

ಯುಎಸ್ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಉದ್ಯಮಿ ಗೌತಮ್ ಅದಾನಿ ಸಮೂಹದ ಉದ್ಯಮಗಳ ಅಕ್ರಮ ವ್ಯವಹಾರ ಹಾಗೂ ತಿರುಚಿದ ಷೇರು ಮಾರುಕಟ್ಟೆ ದರಗಳನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ.

ಅದಾನಿ ಗ್ರೂಪ್ ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಲಾದ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ ಮತ್ತು ತನ್ನ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿಕೊಂಡಿದೆ.

2023ರ ಜಿ20 ಶೃಂಗಸಭೆ ದೆಹಲಿಯಲ್ಲಿ ಆರಂಭವಾಗುತ್ತಿದ್ದಂತೆ, ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಸಮುದಾಯದ ಹಿಂದಿನ ಸಭೆಗಳಲ್ಲಿ ಮೋದಿ ಅವರು ನೀಡಿದ ಹಲವು ಉಪದೇಶಗಳನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ ಎಂದರು.

Advertisement

2014 ರ ಬ್ರಿಸ್ಬೇನ್ ಜಿ- 20 ಸಭೆಯಲ್ಲಿ ಆರ್ಥಿಕ ಅಪರಾಧಿಗಳ ಪತ್ತೆ ಮತ್ತು ಭ್ರಷ್ಟರ ಕಾರ್ಯಗಳನ್ನು ಮರೆಮಾಚುವ ಬ್ಯಾಂಕಿಂಗ್ ನೀತಿ ಮತ್ತು ಅಂತಾರಾಷ್ಟ್ರೀಯ ನಿಯಮಗಳನ್ನು ರದ್ದುಗೊಳಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಕೋರಿದ್ದ ಪ್ರಧಾನಿ ಮೋದಿ, 2018 ರ ಬ್ಯೂನಸ್ ಐರಿಸ್ ಜಿ 20 ಶೃಂಗಸಭೆಯಲ್ಲಿ ಪರಾರಿಯಾಗಿರುವ ಆರ್ಥಿಕ ಅಪರಾಧಗಳ ವಿರುದ್ಧ ಕ್ರಮ ಮತ್ತು ಆಸ್ತಿ ಮರುಪಡೆಯುವಿಕೆಗಾಗಿ ಒಂಬತ್ತು ಅಂಶಗಳ ಕಾರ್ಯಸೂಚಿಯನ್ನು ಮಂಡಿಸಿದರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next