Advertisement

ಡೊನಾಲ್ಡ್ ಟ್ರಂಪ್ ಅಹಮದಾಬಾದ್ ರೋಡ್ ಶೋಗೆ ಒಂದು ಲಕ್ಷ ಜನ; 70 ಲಕ್ಷ ಅಲ್ಲ

06:31 PM Feb 22, 2020 | keerthan |

ಅಹಮದಾಬಾದ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಹಮದಾಬಾದ್ ರೋಡ್ ಶೋನಲ್ಲಿ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಇಲ್ಲಿನ ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Advertisement

ಟ್ರಂಪ್ ಅವರನ್ನು ಸ್ವಾಗತಿಸಲು ಸುಮಾರು 70 ಲಕ್ಷ ಜನರು ರೋಡ್ ಶೋನಲ್ಲಿ ಭಾಗವಹಿಸುತ್ತಾರೆ ಎಂದು ಹಿಂದೆ ಸುದ್ದಿಯಾಗಿತ್ತು. ಇದೇ ಮಾತನ್ನು ಟ್ರಂಪ್ ಅವರು ಕೂಡಾ ಹೇಳಿದ್ದರು. ಇದೇ ಕಾರಣಕ್ಕೆ ನಗರ ಸಭೆ ಅಧಿಕಾರಿಗಳು, ರೋಡ್ ಶೋನಲ್ಲಿ 70 ಲಕ್ಷ ಜನರು ಭಾಗವಹಿಸುವುದಲ್ಲ, ಒಂದು ಲಕ್ಷ ಜನರು ಭಾಗವಹಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 24ರಂದು ಅಹಮದಾಬಾದ್ ನಲ್ಲಿ ರೋಡ್ ಶೋ ನಡೆಸಲಿದ್ದಾರೆ. 22 ಕಿ.ಮೀ ದೂರದ ಈ ರೋಡ್ ಶೋನಲ್ಲಿ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ನಗರ ಸಭೆ ಕಮಿಷನರ್ ವಿಜಯ್ ನೆಹ್ರಾ ಹೇಳಿದ್ದಾರೆ.

ಸಬರಮತಿ ಆಶ್ರಮದಿಂದ ಮೊಟೇರಾ ಸರ್ದಾರ್ ವಲ್ಲಭ ಭಾಯ್ ಕ್ರಿಕೆಟ್ ಸ್ಟೇಡಿಯಂ ವರೆಗೆ ಈ ರೋಡ್ ಶೋ ನಡೆಯಲಿದೆ. ನಂತರ ಮೊಟೇರಾ ಸ್ಟೇಡಿಯಂನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next