Advertisement

ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ ರಾಕೆಟ್‌ ದಾಳಿ: 1 ಸಾವು

11:55 AM Nov 13, 2018 | Team Udayavani |

ಜೆರುಸಲೇಂ : ಪ್ಯಾಲೆಸ್ತೀನ್‌ ಗಾಜಾ ಪಟ್ಟಿಯಿಂದ ಉಡಾಯಿಸಿದ ಒಂದು ಡಜನ್‌ ರಾಕೆಟ್‌ಗಳ ಪೈಕಿ ಒಂದು ರಾಕೆಟ್‌ ದಕ್ಷಿಣ ಇಸ್ರೇಲ್‌ನ ಕಟ್ಟಡದ ಮೇಲೆರಗಿ ಅದನ್ನು ಧ್ವಂಸಗೊಳಿಸಿದ್ದು ಕಟ್ಟಡದ ಅವಶೇಷಗಳಡಿಯಿಂದ 40ರ ಹರೆಯದ ಒಬ್ಬ ವ್ಯಕ್ತಿಯ ಶವವನ್ನು ಹೊರ ತೆಗೆಯಲಾಗಿದೆ ಎಂದು ತುರ್ತು ಸೇವಾ ದಳ ತಿಳಿಸಿದೆ.

Advertisement

ಇಸ್ರೇಲ್‌ ನ ವಿಶೇಷ ಪಡೆ ಗಾಜಾ ಎನ್‌ಕ್ಲೇವ್‌ ನಲ್ಲಿ ಕೈಗೊಂಡಿದ್ದ ಕಾರ್ಯಾಚರಣೆಗೆ ಪ್ರತಿಯಾಗಿ ನಿನ್ನೆ ಸೋಮವಾರದಿಂದೀಚೆಗೆ ಗಾಜಾ ಪಟ್ಟಿಯಿಂದ ಹನ್ನೆರಡಕ್ಕೂ ಅಧಿಕ ರಾಕೆಟ್‌ಗಳನ್ನು ದಕ್ಷಿಣ  ಇಸ್ರೇಲ್‌ ಮೇಲೆ ಉಡಾಯಿಸಲಾಗಿದೆ. ಈ ದಾಳಿಗೆ  ಮೊದಲ ವ್ಯಕ್ತಿ ಬಲಿಯಾಗಿರುವುದನ್ನು ದೃಢಪಡಿಸಲಾಗಿದೆ. 

ರಾಕೆಟ್‌ ದಾಳಿಯಿಂದ ಧ್ವಂಸಗೊಂಡ ಕಟ್ಟಡದ ಅವಶೇಷಗಳಡಿಯಿಂದ ತೀವ್ರ ಗಾಯಗೊಂಡ ಓರ್ವ ಮಹಿಳೆಯನ್ನು ಕೂಡ ಮೇಲಕ್ಕೆತ್ತಲಾಗಿದ್ದು ಆಕೆಯ ಸ್ಥಿತಿ ಚಿಂತಾಜನಕವಿದೆ ಎಂದು ತುರ್ತು ಸೇವಾ ದಳದ ವಕ್ತಾರ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next