ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಡಿದುಕೊಳ್ಳುವುದಾಗಿ ಎಐಎಡಿಎಂಕೆ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಪ್ರತಿಕ್ರಿಯಿಸಿದ್ದು ಎರಡು ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಂಧವ್ಯ ಕಡಿದುಕೊಂಡ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸ್ಟಾಲಿನ್ ‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’ ಪಕ್ಷ ಎಂದು ಕಿಡಿಕಾರಿದ್ದಾರೆ.
ಎಐಎಡಿಎಂಕೆ ಬಿಜೆಪಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡರೂ, 2024 ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ವಿಜಯಶಾಲಿಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಮತ್ತೆ ಹೇಳಿಕೆ ನೀಡಿದ ಸ್ಟಾಲಿನ್ ಎಐಎಡಿಎಂಕೆ ಮತ್ತು ಬಿಜೆಪಿ ಜಗಳವಾಡುವುದು ಮೊದಲ ಬಾರಿಯಲ್ಲ ಆದರೆ ಚುನಾವಣೆಯ ಸಮಯದಲ್ಲಿ, ಅವರು ಮತ್ತೆ ಒಂದಾಗುತ್ತಾರೆ ಏಕೆಂದರೆ ಒಬ್ಬರು ದರೋಡೆಕೋರರು ಮತ್ತು ಇನ್ನೊಬ್ಬರು ಕಳ್ಳರು” ಎಂದು ಅವರು ಹೇಳಿದರು.
ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ನಂತರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆಗಿನ ತನ್ನ ಸಂಬಂಧವನ್ನು ಎಐಎಡಿಎಂಕೆ ಮುರಿದುಕೊಂಡಿದೆ, ಬಿಜೆಪಿಯು ಎಐಎಡಿಎಂಕೆಯ ಮಾಜಿ ನಾಯಕರ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡುತ್ತಿದೆ ಎಂದು ಹೇಳಿದೆ.
ಎಐಎಡಿಎಂಕೆಯ ಹಿರಿಯ ನಾಯಕರು ದೆಹಲಿಯಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಬಿಜೆಪಿಯ ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಅವರ “ಆಕ್ರಮಣಕಾರಿ ಶೈಲಿಯ ರಾಜಕೀಯ” ದಿಂದ ರಾಜ್ಯದ ನೆಲದ ಪರಿಸ್ಥಿತಿಯ ಬಗ್ಗೆ ತಿಳಿಸಿದ ಕೆಲವು ದಿನಗಳ ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: Bengaluru Bandh: ಗಡಿಯಲ್ಲಿ ಕರ್ನಾಟಕ ಪ್ರವೇಶಿಸುವ ತಮಿಳುನಾಡು ನೋಂದಣಿ ವಾಹನ ನಿರ್ಬಂಧ