Advertisement

ಕಾಂಗೋದಲ್ಲಿ ತಾಂಡವಾಡುತ್ತಿರುವ ಹಸಿವು : ವಿಶ್ವ ಸಂಸ್ಥೆಯಿಂದ ಎಚ್ಚರಿಕೆ  

01:29 PM Apr 08, 2021 | Team Udayavani |

ಯುನೈಟೆಡ್ ನೇಷನ್ಸ್ :  ಕಾಂಗೋದಲ್ಲಿ 27 ದಶಲಕ್ಷಕ್ಕೂ ಹೆಚ್ಚು ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿಯೊಂದನ್ನು ಯುಎನ್ ಏಜೆನ್ಸಿಗಳು ಬಹಿರಂಗಗೊಳಿಸಿವೆ.

Advertisement

ಇದು ಆಫ್ರಿಕನ್ ರಾಷ್ಟ್ರದ ಅಂದಾಜು 87 ದಶಲಕ್ಷ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿ ಹಸಿವಿನಿಂದ ಬಳಲುತಿದ್ದಾರೆಂದು ತಿಳಿಸಿದೆ.

ಆಹಾರ ಭದ್ರತಾ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಐಪಿಸಿ ಗುಣಮಟ್ಟದ ಪ್ರಮಾಣದಲ್ಲಿ ಸುಮಾರು 7 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆಂದು ವಿಶ್ಲೇಷಿಸಿದೆ.

ಓದಿ : ಮೇ ತಿಂಗಳಲ್ಲಿ Realme GT 5G ಭಾರತೀಯ ಮಾರುಕಟ್ಟೆಗೆ ಲಗ್ಗೆ..?!

ಅಂದಾಜು 27.3 ಮಿಲಿಯನ್ ಕಾಂಗೋ ಮಂದಿಯನ್ನು ಉಳಿಸಲು, ಆಹಾರ ಲಭ್ಯತೆ ಮತ್ತು ಜೀವನೋಪಾಯವನ್ನು ರಕ್ಷಿಸಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ಏಜೆನ್ಸಿಗಳು ತಿಳಿಸಿವೆ. ಕನಿಷ್ಠ 20 ಪ್ರತಿಶತದಷ್ಟು ಕುಟುಂಬಗಳು ತೀವ್ರ ಮಟ್ಟದಲ್ಲಿ ಆಹಾರ ಸೇವನೆಯ ಕೊರತೆಯನ್ನು ಎದುರಿಸುತ್ತಿವೆ, ಇದರ ಪರಿಣಾಮವಾಗಿ ತೀವ್ರ ಅಪೌಷ್ಟಿಕತೆ ಮತ್ತು ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ ಎಂದು ತಿಳಿಸಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗೋದ WFPಯ ಪ್ರತಿನಿಧಿ ಪೀಟರ್ ಮುಸೊಕೊ, “ಮೊದಲ ಬಾರಿಗೆ ಜನಸಂಖ್ಯೆಯನ್ನು ವಿಶ್ಲೇಷಿಸಲು ಸಾಧ್ಯವಾಯಿತು, ಮತ್ತು ಇದು ಡಿಆರ್‌ಸಿ ( Democratic Republic of the Congo) ನ ಆಹಾರ ಅಭದ್ರತೆಯ ನಿಜ ದರ್ಶನ ತಿಳಿಯಲು ನಮಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

“ಸಂಘರ್ಷ ಪೀಡಿತ ಪೂರ್ವ ಪ್ರಾಂತ್ಯಗಳಾದ ಇಟೂರಿ, ಉತ್ತರ ಮತ್ತು ದಕ್ಷಿಣ ಕಿವು ಮತ್ತು ಟ್ಯಾಂಗನಿಕಾ, ಹಾಗೂ ಕಸೈಸ್‌ನ ಕೇಂದ್ರ ಪ್ರದೇಶಗಳಲ್ಲಿನ ಪರಿಸ್ಥೀತಿ ತೀವ್ರ ಕೆಳಮಟ್ಟದಲ್ಲಿದೆ. ಕಾಂಗೋ ಆರ್ಥಿಕತೆಯ ಕುಸಿತ ಮತ್ತು ಕೋವಿಡ್ 19 ಸಾಂಕ್ರಾಮಿಕದ ಸಾಮಾಜಿಕ-ಆರ್ಥಿಕ ಸ್ಥೀತಿ ಇದಕ್ಕೆ ಮತ್ತಷ್ಟು ಪ್ರಭಾವ ಬೀರಿದೆ ಎಂದು ಎಫ್‌ ಎ ಒ(Food and Agriculture Organization) ಮತ್ತು ಡಬ್ಲ್ಯು ಎಫ್‌ ಪಿ (World Food Programme)   ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಫ್‌ಎಒನ ಕಾಂಗೋ ಪ್ರತಿನಿಧಿ ಅರಿಸ್ಟೈಡ್ ಒಂಗೋನ್ ಒಬಾಮೆ, ಆಹಾರವನ್ನು ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ಪೂರೈಸುವ ಬಗ್ಗೆ ನಾವು ತುರ್ತಾಗಿ ಗಮನ ಹರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಓದಿ : ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲ್ಲ: ಮಾಜಿ ಸಚಿವ ಬಾಬಾಗೌಡ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next