Advertisement
ಹೌದು, ನುರಿತ ವಿಜ್ಞಾನಿಗಳು ನಡೆಸಿದ ಹೊಸ ಅಧ್ಯಯನವೊಂದು ಕೋವಿಡ್ 19 ಲಸಿಕೆ ಪಡೆದ ನಂತರ ಅಡ್ಡಪರಿಣಾಮಗಳನ್ನು ಅನುಭವಿಸುವ ಸಂಭವನೀಯತೆಯ ಬಗ್ಗೆ ವರದಿ ಮಾಡಿದೆ.
Related Articles
Advertisement
ಬಹಳ ಪ್ರಮುಖವಾಗಿ ಕಿಂಗ್ಸ್ ಕಾಲೇಜ್ ಲಂಡನ್ ನ ಸಂಶೋಧಕರು ಈ ಅಧ್ಯಯನಕ್ಕಾಗಿ ಫಿಜರ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳನ್ನು ತೆಗೆದುಕೊಂಡವರನ್ನು ಒಳಪಡಿಸಿಕೊಂಡಿದ್ದು, ಲಸಿಕೆ ತೆಗೆದುಕೊಂಡ 24 ಗಂಟೆಗಳ ಒಳಗೆ ಹೆಚ್ಚಿನ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದು ಮತ್ತು ಸರಾಸರಿ 1 ರಿಂದ 2 ದಿನಗಳವರೆಗೆ ಇರುತ್ತವೆ ಎಂದು ಸಂಶೋಧಕರು ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.
ಈ ಅಧ್ಯಯನ ದಿ ಲ್ಯಾನ್ಸೆಟ್ ಇನ್ ಫೆಕ್ಶಿಯಸ್ ಡಿಸೀಸಸ್ (The Lancet Infectious Diseases) ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದ್ದು, ಯುಕೆ ಲಸಿಕೆ ಅಭಿಯಾನದ ಡೇಟಾದ ಆಧಾರದ ಮೇಲೆ ಅಡ್ಡಪರಿಣಾಮಗಳ ಬಗ್ಗೆ ತಿಳಿಯಲು ಮಾಡಿದ ಮೊದಲ ದೊಡ್ಡ ಅಧ್ಯಯನ ಇದಾಗಿದೆ.
ಇನ್ನು, ಈ ಡೇಟಾವನ್ನು ZOE COVID ಸಿಂಪ್ಟಮ್ ಸ್ಟಡಿ (ರೋಗ ಲಕ್ಷಣಗಳ ಅಧ್ಯಯನ) ಮೊಬೈಲ್ ಅಪ್ಲಿಕೇಶನ್ ನಿಂದ ಪಡೆಯಲಾಗಿದೆ. ಡಿಸೆಂಬರ್ 8, 2020 ಮತ್ತು ಮಾರ್ಚ್ 10, 2021 ರ ತನಕ ಒಂದು ಅಥವಾ ಎರಡು ಡೋಸ್ ಫಿಜರ್ ಲಸಿಕೆ ಅಥವಾ ಅಸ್ಟ್ರಾಜೆನೆಕಾ ಲಸಿಕೆಯನ್ನು ಸ್ವೀಕರಿಸಿದ 6,27,383 ಮಂದಿಯ ಅನುಭವಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸಂಶೋಧಕರು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಓದಿ : ನಾನು ಬದುಕಿದ್ದೇನೆ, ಸತ್ತಿಲ್ಲ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ : ನಟ ದೊಡ್ಡಣ್ಣ