Advertisement

ಅನಾರೋಗ್ಯಕರ ಆಹಾರ ಪದ್ಧತಿಯಿಂದ ಸಾವು : ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

09:55 AM Apr 05, 2019 | Hari Prasad |

ಲಂಡನ್‌: ಸಕ್ಕರೆ ಮತ್ತು ಉಪ್ಪಿನ ಅಂಶ ಹೆಚ್ಚಾಗಿರುವ ಹಾಗೂ ಸಂಸ್ಕರಿತ ಮಾಂಸಗಳಿಂದ ತಯಾರಿಸಿದ ಜಂಕ್‌ ಆಹಾರಗಳ ಸೇವನೆಯಿಂದ ವಿಶ್ವಾದ್ಯಂತ 2017ರಲ್ಲಿ 1 ಕೋಟಿ ಜರು ಸಾವಿಗೀಡಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ರೀತಿಯ ಅಸಂತುಲಿತ ಆಹಾರ ಪದಾರ್ಥಗಳ ಸೇವನೆಯಿಂದ ಹೃದಯದ ಕಾಯಿಲೆ, ಕ್ಯಾನ್ಸರ್‌ ಮತ್ತು ಮಧುಮೇಹದಂತಹ ಕಾಯಿಲೆಗಳು ಹೆಚ್ಚುತ್ತಿದ್ದು ಇವುಗಳಿಂದ ಸಾವುಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ. ಅಸಮರ್ಪಕ ರೀತಿಯ ಆಹಾರ ಸೇವನೆಯಿಂದ ಉಂಟಾಗುವ ಸಾವಿನ ಪ್ರಮಾಣ ಇನ್ನುಳಿದ ಯಾವುದೇ ಕಾರಣಗಳಿಂದ ಉಂಟಾಗುವ ಸಾವಿನ ಪ್ರಮಾಣಕ್ಕಿಂತಲೂ ಹೆಚ್ಚು ಅನ್ನುವುದೇ ಕಳವಳಕಾರಿ ಅಂಶವಾಗಿದೆ.

Advertisement

ಸುಮಾರು 195 ದೇಶಗಳಲ್ಲಿ ಆಧ್ಯಯನ ನಡೆಸಿ ಈ ಸಂಶೋಧನಾ ವರದಿಯನ್ನು ಎಪ್ರಿಲ್‌ 3ರಂದು ಪ್ರಕಟಿಸಲಾಗಿದೆ. ಅಸಂತುಲಿತ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ಅತೀ ಹೆಚ್ಚು ಸಾವು ಸಂಭವಿಸಿರುವುದು ಉಜ್ಬೆಕಿಸ್ಥಾನದಲ್ಲಾಗಿದ್ದರೆ ಕಡಿಮೆ ಸಾವು ಇಸ್ರೇಲ್‌ ನಲ್ಲಾಗಿದೆ. ಇನ್ನು ಈ ಪಟ್ಟಿಯಲ್ಲಿ ಅಮೆರಿಕಾ 43ನೇ ಸ್ಥಾನದಲ್ಲಿದ್ದರೆ, ಇಂಗ್ಲಂಡ್‌ 23, ಚೀನಾ 140 ಹಾಗೂ ಭಾರತ 118ನೇ ಸ್ಥಾನಗಳಲ್ಲಿವೆ.

ಆರೋಗ್ಯಕರ ಆಹಾರ ಪದಾರ್ಥಗಳಾಗಿರುವ ಕಾಳುಗಳು, ಧಾನ್ಯಗಳು, ಹಾಲು ಇತ್ಯಾದಿಗಳ ಸೇವನೆಯ ಸರಾಸರಿ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದು ಸಕ್ಕರೆಭರಿತ ಪಾನೀಯಗಳು, ಸಂಸ್ಕರಿಸಿದ ಮಾಂಸ ಮತ್ತು ಉಪ್ಪಿನ ಸೇವನೆ ಹೆಚ್ಚಾಗಿರುವುದರಿಂದ ಪ್ರತೀ ಐದು ಜನರಲ್ಲಿ ಒಬ್ಬರ ಸಾವಿಗೆ ಈ ರೀತಿಯ ಅಸಂತುಲಿತ ಅನಾರೋಗ್ಯಕರ ಆಹಾರ ಪದ್ಧತಿ ಕಾರಣವಾಗುತ್ತಿದೆ ಎಂಬ ಕಳವಳವನ್ನು ಈ ಸಂಶೋಧನಾ ವರದಿ ವ್ಯಕ್ತಪಡಿಸಿದೆ.

15 ಆಹಾರ ಪದ್ಧತಿ ಅಂಶಗಳನ್ನು ಗಣನೆಗೆ ಪಡೆದುಕೊಂಡು 1990 ರಿಂದ 2017ರವರೆಗಿನ ಆಹಾರ ಪದ್ಧತಿ ವಿಧಾನಗಳ ಮೇಲೆ ನಿಗಾ ಇರಿಸಿ ಹಾಗೆ ಲಭಿಸಿದ ದತ್ತಾಂಶಗಳ ಆಧಾರದಲ್ಲಿ ಈ ಸಂಶೋಧನಾ ವರದಿಯನ್ನು ‘ಗ್ಲೋಬಲ್‌ ಬರ್ಡನ್‌ ಆಫ್ ಡಿಸೀಸ್‌’ ಅಧ್ಯಯನದ ಮೂಲಕ ಕಂಡುಕೊಂಡು ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next