Advertisement
124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 123.10 ಅಡಿ ನೀರು ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 1.70 ಅಡಿ ಮಾತ್ರ ಬಾಕಿ ಇದೆ. ರವಿವಾರ ಸಂಜೆ 8 ಗಂಟೆ ವೇಳೆಗೆ ಜಲಾಶಯಕ್ಕೆ 70,850 ಕ್ಯುಸೆಕ್ ನೀರು ಒಳಹರಿವು ಇತ್ತು. ಹೊರಹರಿವು 52,162 ಕ್ಯುಸೆಕ್ ಇದೆ. 49.452 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 47.106 ಟಿಎಂಸಿ ನೀರು ಸಂಗ್ರಹವಾಗಿದೆ.
ಬಾಗಿನ ಸಲ್ಲಿಕೆ ಆರಂಭ
45 ವರ್ಷಗಳಿಂದ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂಪ್ರದಾಯ ನಡೆದು ಬಂದಿದೆ. ಒಡಲು ತುಂಬಿದ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಸಂಪ್ರದಾಯ ದೇವರಾಜ ಅರಸು ಅವರಿಂದ ಪ್ರಾರಂಭಗೊಂಡಿತು. ಮೊದಲ ಬಾರಿಗೆ 1979ರಲ್ಲಿ ಅರಸು ಅವರು ಬಾಗಿನ ಅರ್ಪಿಸಿದ್ದರು.