ಕುಂದಾಪುರ: ಇಲ್ಲಿಗೆ ಸಮೀಪದ ಎಂಕೋಡಿ ಬೀಚ್‌ನಲ್ಲಿ ಈಜುತ್ತಿದ್ದ ಕೂಲಿ ಕಾರ್ಮಿಕರಿಬ್ಬರು ನೀರಲ್ಲಿ ಮುಳುಗಿದ್ದು, ಅವರಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನನ್ನು ರಕ್ಷಿಸಿದ ಘಟನೆ ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ನಳಗುಂದ ತಾಲೂಕಿನ ಮಂಜು (38) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಂಜು ಹಾಗೂ ಮತ್ತೋರ್ವ ವ್ಯಕ್ತಿ ಈಜಲೆಂದು ಸಮುದ್ರಕ್ಕಿಳಿದಿದ್ದು, ಈ ವೇಳೆ ಅಲೆಗಳ ಅಬ್ಬರಕ್ಕೆ ಮಂಜು ನೀರಲ್ಲಿ ಮುಳುಗಿದ್ದು, ಮತ್ತೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಸ್ಥಳೀಯರಾದ ಹಸೈನಾರ್, ಝೈನ್, ನಾಗರಾಜ್ ಕೋಡಿ, ವೆಂಕಟೇಶ್ ಕೋಡಿ, ಸಲಾಂ ಎಂಬವರು ನೀರಿಗೆ ಹಾರಿ ಇಬ್ಬರನ್ನು ರಕ್ಷಿಸಿ ಮೇಲಕ್ಕೆ ತಂದರು. ಆದರೆ ಅದರಲ್ಲಿ ಮಂಜು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಇವರು ಕುಂದಾಪುರ ಗಾಂಧಿ ಮೈದಾನದಲ್ಲಿ ವಾಸ ಮಾಡಿ ಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ದುಬೈ ದೊರೆ 6ನೇ ಪತ್ನಿ; ಅಂಗರಕ್ಷಕನ ಜತೆಗಿನ ಸಂಬಂಧ ಮುಚ್ಚಿಡಲು ಕೋಟ್ಯಂತರ ಹಣ ಪಾವತಿ!
ಘಟನಾ ಸ್ಥಳಕ್ಕೆ ನಗರ ಠಾಣಾ ಪ್ರಭಾರ ಉಪ ನಿರೀಕ್ಷಕ ಸುಬ್ಬಣ್ಣ ಹಾಗೂ ಸಿಬಂದಿ ಭೇಟಿ ನೀಡಿದ್ದಾರೆ.