ಬೆಳ್ಳಾರೆ: ಪ್ರಕೃತಿ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಹೊಸ ಅನುಭವ ಆಗಲು ಸಾಧ್ಯವಿದ್ದು, ಶಾಲೆಗಳಲ್ಲಿ ಪರಿಸರ ಅಧ್ಯಯನ ಶಿಬಿರ ಆಯೋಜನೆ ಮಾಡುವುದು ಉತ್ತಮ. ವಿದ್ಯಾರ್ಥಿಗಳ ಬೌದ್ಧಿಕ ವಿಕಸನ ದೃಷ್ಟಿಯಿಂದ ವಾಸ್ತವಿಕ ಕಲಿಕೆಯ ಅಗತ್ಯವಿದೆ ಎಂದು ಕೇರಳ ರಾಜ್ಯದ ಅರಿಕ್ಕೋಡ್ ಕೋಯಿಕೋಡ್‌ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರಶಾಂತ್ ಮಾಸ್ತರ್ ಹೇಳಿದರು.
ಅವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ, ಸುವಿಚಾರ ಸಾಹಿತ್ಯ ವೇದಿಕೆ, ಸಿ.ಸಿ.ಆರ್.ಟಿ. ಗ್ರೂಪ್ಸ್ ವತಿಯಿಂದ ತಾಲೂಕಿನ ಆಯ್ದ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪರಿಸರ ಅಧ್ಯಯನ ಶಿಬಿರವನ್ನು ಬಂಟಮಲೆ ಅರಣ್ಯ ಸಮೀಪದ ಪುಳಿಕ್ಕುಕ್ಕು ನದಿಯ ಕಿನಾರೆಯಲ್ಲಿ ಉದ್ಘಾಟಿಸಿ ಮಾತಮಾಡಿದರು.
ಸುವಿಚಾರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಪೇರಾಲ್, ಚಾರಣ ಮತ್ತು ಪ್ರಕೃತಿ ಅಧ್ಯಯನ ಕಾರ್ಯಕ್ರಮಗಳು ತಾಲೂಕಿನ ಎಲ್ಲ ಶಾಲೆಗಳಲ್ಲಿ ನಡೆಯಲಿ ಎಂದರು. ಗ್ರಾ.ಪಂ. ಸದಸ್ಯ ಲೋಕೇಶ್ ಬರಮೇಲು, ಸಂಘಟಕರಾದ ಶಿಕ್ಷಕ ಚಿನ್ನಪ್ಪ ಗೌಡ, ಶಿಕ್ಷಕ ಚಂದ್ರಶೇಖರ, ಪೂವಪ್ಪ ಮಾಸ್ತರ್, ಕುಕ್ಕುಪುಣಿ, ನಿವೃತ್ತ ಶಿಕ್ಷಕ ಕೇಶವ
ಸಿ.ಎ., ಬಿ.ಆರ್.ಪಿ.ಗಳಾದ ಹರಿಪ್ರಸಾದ್, ಲಿಂಗಪ್ಪ ಬೆಳ್ಳಾರೆ, ದೇವಿಪ್ರಸಾದ್, ಕವಿತಾ, ದಾಮೋದರ ನೇರಳ ಉಪಸ್ಥಿತರಿದ್ದರು. 150 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು. ಬಂಟಮಲೆಗೆ ಚಾರಣ ಕೈಗೊಂಡು ಅಲ್ಲಿ ಪರಿಸರ ಅಧ್ಯಯನ ನಡೆಸಲಾಯಿತು.