Advertisement

ಒಂದು ದಿನದ ಗಡಾಯಿಕಲ್‌ ಚಾರಣ

01:48 PM Nov 15, 2018 | |

ನಮ್ಮ ತುಳುನಾಡು ಐತಿಹಾಸಿ ಧಾರ್ಮಿಕ, ಸಂಸ್ಕೃತಿಕವಾಗಿ ಅಪಾರ ಕೀರ್ತಿ ಹಿರಿಮೆಯನ್ನು ಜಗತ್ತಿಗೆ ಸಾರಿದಂತಹ ನಾಡು. ಕಲೆ ಸಾಹಿತ್ಯ ಶಿಕ್ಷಣ ಹೀಗೆ ಎಲ್ಲದರಲ್ಲೂ ಸೈ ಏನಿಸಿಕೊಂಡಿದೆ. ಇನ್ನೂ ನಮ್ಮ ಕರಾವಳಿ ಭಾಗವು ಒಂದೆಡೆ ಪಶ್ಚಿಮಗಟ್ಟಗಳ ಸಾಲಿನಿಂದ ಇನ್ನೊಂದೆಡೆ ಅರಬ್ಬಿಸಮುದ್ರಗಳ ನಡುವೆ ಸುಂದರವಾಗಿ ನೆಲೆನಿಂತಿದ್ದು ಇಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತೆ ಅನೇಕ ಪ್ರವಾಸಿ ತಾಣಗಳನ್ನು ಕಾಣಬಹುದು. ಅಂತಹ ಸ್ಥಳಗಳ ಪೈಕಿ ಜಮಾಲಾಬಾದ್‌ ಕೋಟೆ ಒಂದು, ಆದರೆ ಜಮಾಲಾಬಾದ್‌ ಕೋಟೆ ಎಂದರೆ ಯಾರಿಗೆ ತಿಳಿಯದು ಎಲ್ಲರೂ ಈ ಚಾರಣ ಸ್ಥಳವನ್ನು ಗಡಾಯಿಕಲ್ಲು ಎಂದೇ ಗುರುತಿಸುತ್ತಾರೆ. ಈ ಬಾರಿ ನಮ್ಮ ಹಳೆ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳನ್ನು ಒಳಗೊಂಡ ಹನ್ನೊಂದು ಮಂದಿಯ ತಂಡ ಗಡಾಯಿಕಲ್ಲಿಗೆ ಒಂದು ದಿನದ ಚಾರಣಕ್ಕೆ ತೆರಳುವ ಯೋಜನೆ ರೂಪಿಸಿದೆವು.

Advertisement

ಈ ಕೋಟೆಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ 6 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಈ ಕೋಟೆಯು, ಬೃಹದಾಕಾರದ ಗ್ರಾನೈಟ್‌ ಕಲ್ಲಿನ ತುದಿಯಲ್ಲಿದೆ. ಹಿಂದೆ ಇಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕೋಟೆ ಇತ್ತಂತೆ. 1794ರಲ್ಲಿ, ಟಿಪ್ಪು ಸುಲ್ತಾನನು ಇದನ್ನು ನವೀಕರಿಸಿ ತನ್ನ ತಾಯಿಯಾದ ಜಮಾಲಬಿಯ ನೆನಪಿಗಾಗಿ ‘ಜಮಾಲಾಬಾದ್‌’ ಎಂಬ ಹೆಸರಿಟ್ಟಂತೆ.

ಸ್ವಲ್ಪ ವಿಶ್ರಾಂತಿ
ಅಲ್ಲಿ ಸ್ವಲ್ಪ ವಿಶ್ರಾಮಿಸಿ ಮತ್ತೆ ಚಾರಣ ಮುಂದುವರೆಸಿದೆವು. ಅಲ್ಲಿ ನಮ್ಮಗೇ ಎಡ ಹಾಗೇ ಬಲಕ್ಕೆ ಎರಡು ದಾರಿಯ ಸೂಚನ ಫ‌ಲಕವಿತ್ತು. ನಮ್ಮ ತಂಡ ಎಡ ಭಾಗವಗಿ ಮುನ್ನಡೆಯಿತು. ಎಡಕ್ಕೆ ಸ್ವಲ್ಪ ಕಾಡಿದಾದ ದಾರಿ ಹಾಗೇ ಬಲಕ್ಕೆ ಸುಲಭವಾಗಿ ಹತ್ತಬಹುದಾದ ಅಗಲವಾದ ಮೆಟ್ಟಿಲುಗಳ ದಾರಿ ನಮ್ಮ ಆಯ್ಕೆ ಕಡಿದಾದ ದಾರಿಯಾಗಿತ್ತು. ಎಡ ಭಾಗವಾಗಿ ತೆರಳಿದ ಮಾರ್ಗ ಸ್ವಲ್ಪ ಅಪಾಯಕಾರಿಯಾಗಿದ್ದರು ನಿಧಾನವಾಗಿ ಮುಂದುವರೆದವೆ. ಹೀಗೆ ಕ್ರಮಿಸಿದ ನಮ್ಮಗೇ ಸ್ವಲ್ಪದರಲ್ಲೇ ವಿಶಾಲವಾದ ಭೂ ಪ್ರದೇಶ ಕಣ್ಣಸಿದ್ದರಿಂತ ಸ್ವಲ್ಪ ಮಟ್ಟಿಗೆ ನಿಟ್ಟಿಸುರು. ಅಲ್ಲೇ ಪಕ್ಕದಲ್ಲಿ ಆ ಸಮಯದಲ್ಲಿ ಇದ್ದ ಬೃಹದ್‌ ಗಾತ್ರದ ಮುರಿದು ಬಿದ್ದ ಫಿರಂಗಿ ಕಂಡುಬಂತು. ಇತಿಹಾಸಗಳ ಮಾಹಿತಿ ಪ್ರಕಾರ ಕೋಟೆಯ ಮೇಲೆ ಮದ್ದುಗುಂಡುಗಳನ್ನು ಇಡುತ್ತಿದ್ದ ಕೋಣೆ ಇದೆ ಎಂಬ ಮಾಹಿತಿ ಇವೆ.

ಹಚ್ಚ ಹಸುರು
ಅಂತು ನಾವು ಗಾಡಾಯಿ ಕಲ್ಲಿನ ಶೀರ ಭಾಗಕ್ಕೆ ಲಗ್ಗೆ ಇಟ್ಟಾಯಿತು. ಈ ಕೋಟೆಯ ಮೇಲ್ಪಾಗವು ಸುತ್ತಲು ಹಸಿರಿನಿಂದ ಕಂಗೊಳಿಸುವ ಪ್ರದೇಶದಿಂದ ಕೂಡಿದೆ. ಒಟ್ಟಾರೆಯಾಗಿ ಈ ಕೋಟೆ ಹತ್ತಲು ಶ್ರಮ ಹಾಗೂ 3-4 ತಾಸು ಸಮಯ ತೆಗೆದುಕೊಂಡೆವು. ಬಳಿಕ ಸ್ನೇಹಿತ ತಂದಿದ್ದ ಜೋಳದ ರೋಟ್ಟಿ ಚಟ್ನಿ ಹುಡಿಯೆ ಮಧ್ಯಾಹ್ನದ ಊಟ. ಒಟ್ಟಾರೆ ಕೈಕಾಲು ನೋವಿನ ಮಧ್ಯವು ಈ ಪರ್ವತ ಏರಿದಾಗ ಅಲ್ಲಿನ ಸುಂದರ ಪರಿಸರ ನೋಡಿದಾಗ ಎಲ್ಲವೂ ಮರೆಯಾಗಿ ಪ್ರಕೃತಿಯ ಸೋಬಗೆ ನಲಿವಾಯಿತು. ಕೋಟೆಯ ಕೆಳಭಾಗದಲ್ಲಿ ಒಂದು ಸಣ್ಣ ಅಂಗಡಿ ಇದ್ದು, ಅದರಲ್ಲಿ ನೀರು, ಜ್ಯೂಸ್‌ ಇತ್ಯಾದಿ ಸಿಗುತ್ತದೆ. ಆದರೆ ಊಟ ಸಿಗುವುದಿಲ್ಲ. ಹಾಗಾಗಿ, ನಮಗೆ ಊಟ ಬೇಕಿದ್ದರೆ ನಾವೇ ಒಯ್ಯಬೇಕು ಅಥವಾ ಬೆಳ್ತಂಗಡಿ -ಉಜಿರೆಗೆ ಹೋಗಬೇಕು.

ಬೆಳಗ್ಗಿನ ಪ್ರಯಾಣ
ಗಡಾಯಿಕಲ್ಲು ಬೆಳಗಿನ ಜಾವ ಅಥವಾ ಸಂಜೆ ಸೂಕ್ತವಾದ ಸಮಯ ಹಾಗೇ ನಮ್ಮ ತಂಡ ಬೆಳ್ಳಂಬೆಳಗೆ ಬಂಟ್ವಾಳ ಬೆಳ್ತಂಗಡಿ ಮಾರ್ಗವಾಗಿ ಹೊರಟಿತು. ಸರಿಸುಮಾರು 61 ಕಿ.ಮೀ. ದೂರ ಜಮಾಲಾಬಾದ್‌ ಕೋಟೆಯನ್ನೇರಲು 1876 ಮೆಟ್ಟಿಲು ಹತ್ತಬೇಕು. ಹೀಗಾಗಿ ಸೂರ್ಯನ ತಾಪ ಏರುವ ಮೊದಲೇ ಕೋಟೆ ಏರುವ ಯೋಜನೆ ಮೊದಲೇ ಮಾಡಿಕೊಂಡೇ ಹೊರಟಿದ್ದೆವು. ಆರಂಭದಲ್ಲಿ ಸುಲಭವಾಗಿ ಹತ್ತಬಹುದಾದ ಕಾಲು ದಾರಿ. ಕಾಲು ದಾರಿಯನ್ನು ಮುಗಿಯುತ್ತಿದಂತೆ ನಮ್ಮ ತಂಡದ ಅರ್ಧಕ್ಕೆ ಅರ್ಧ ಬೇವತು ವಿಶ್ರಾಂತಿ ಸ್ಥಿತಿಗೆ ತಲುಪಿತ್ತು. ಗ್ಲೂ ಕೋಸ್‌ಗಳ ಪ್ಯಾಕೆಟ್‌ ಒಂದೊಂದೇ ಖಾಲಿಯಾಯಿತು. 

Advertisement

 ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next