ತಿರುವನಂತಪುರ: ಜಗತ್ತನ್ನೇ ನಿಬ್ಬೆರಗಾಗಿಸಿದ್ದ ಕೇರಳದ ಗರ್ಭಿಣಿ ಆನೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇರಳದ ಅರಣ್ಯ ಸಚಿವ ಕೆ. ರಾಜು, ಘಟನೆಗೆ ಸಂಬಂಧಿಸಿದಂತೆ ವಿಶೇಷ ದಳದಿಂದ ಓರ್ವನನ್ನು ಬಂಧಿಸಲಾಗಿದೆ. ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಪಿ ವಿಲ್ಸನ್ ಎಂಬಾತನನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸಂಜೆಯ ವೇಳೆಗೆ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ವೆಲ್ಲಿಯಾರ್ ನದಿಯ ತಟದಲ್ಲಿ ಬೆಳೆಸಲಾಗಿದ್ದ ಅನನಾಸು ಹಣ್ಣನ್ನು ತಿನ್ನಲು ಹೋಗಿದ್ದ ಗರ್ಭಿಣಿ ಆನೆಯು ಸಾವನ್ನಪ್ಪಿತ್ತು. ದುರುಳರು ಹಣ್ಣಿನ ಒಳಗೆ ಸ್ಪೋಟಕವನ್ನುಇಟ್ಟು ಆನೆಯ ಸಾವಿಗೆ ಕಾರಣವಾಗಿದ್ದರು. ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಎಂಬವರು ಈ ಬಗ್ಗೆ ಮೇ 27ರಂದು ತನ್ನ ಫೇಸ್ ಬುಕ್ ಖಾತೆಯಲ್ಲಿ ಘಟನೆಯ ಬಗ್ಗೆ ಬರೆದಾಗ ಈ ವಿಶ್ವ ಜಗತ್ತಿನ ಮಂದೆ ಬಂದಿತ್ತು.
15 ವರ್ಷದ ಗರ್ಭಿಣಿ ಆನೆಯ ಹತ್ಯೆಯ ಅಮಾನವೀಯ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿತ್ತು.