Advertisement

ಹರೆಯದ ಮನಸ್ಸುಗಳ ಚಿತ್ರ: “ಒಂದ್‌ ಊರಲ್‌ ಒಂದ್‌ ಲವ್‌ ಸ್ಟೋರಿ” ಜೂ.3ಕ್ಕೆ ಬಿಡುಗಡೆ

04:24 PM May 31, 2022 | Team Udayavani |

“ಒಂದ್‌ ಊರಲ್‌ ಒಂದ್‌ ಲವ್‌ ಸ್ಟೋರಿ’ ಎಂಬ ಚಿತ್ರವೊಂದು ತಯಾರಾಗಿದ್ದು, ಜೂ.3ರಂದು ತೆರೆ ಕಾಣುತ್ತಿದೆ. ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. ಮಧ್ಯ ಕರ್ನಾಟಕದ ಗ್ರಾಮೀಣ ಭಾಗದ ಪರಿಸರದಲ್ಲಿ ಇಡೀ ಸಿನಿಮಾದ ಕಥೆ ಸಾಗುತ್ತದೆ. ಲವ್‌, ಸೆಂಟಿಮೆಂಟ್‌, ಕಾಮಿಡಿ ಹೀಗೆ ಹಲವು ಮನರಂಜನಾತ್ಮಕ ಅಂಶಗಳ ಜೊತೆಗೆ ಇಂದಿನ ಯುವಕರು ಮತ್ತು ಪೋಷಕರ ಮನಮುಟ್ಟುವಂಥ ಸಂದೇಶವನ್ನು ಚಿತ್ರದಲ್ಲಿ ಹೇಳಲಾಗಿದೆ. “ಒಂದ್‌ ಊರಲ್‌ ಒಂದ್‌ ಲವ್‌ ಸ್ಟೋರಿ’ ಮುಜುಗರವಿಲ್ಲದ ದೃಶ್ಯಗಳು, ದ್ವಂದ್ವಾರ್ಥದ ಸಂಭಾಷಣೆಗಳಿಲ್ಲದೆ ಇಡೀ ಕುಟುಂಬ ಕುಳಿತು ಆಸ್ವಾಧಿಸಬಹುದಾದಂತಹ ಅಚ್ಚುಕಟ್ಟಾದ ಸಿನಿಮಾ ಎಂಬುದು ಚಿತ್ರತಂಡದ ಮಾತು.

Advertisement

ಯಾವುದೇ ಸ್ಟಾರ್‌ ಕಾಸ್ಟಿಂಗ್‌ ಇಲ್ಲದ ಬಹುತೇಕ ಹೊಸ ಪ್ರತಿಭೆಗಳೆ ತೆರೆಮುಂದೆ, ತೆರೆಹಿಂದೆ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಎಂ. ಪಿ ಅರುಣ್‌ ಅರಕಲಗೋಡು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸುಮಾರು ಮೂರುವರೆ ದಶಕಗಳಿಂದ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಹಲವಾರು ಸಿನಿಮಾ, ನಾಟಕಗಳಲ್ಲಿ ಅಭಿನಯಿಸಿದ ಅನುಭವವಿರುವ ನಟ ಮತ್ತು ನಿರ್ದೇಶಕ, ವೃತ್ತಿಯಲ್ಲಿ ವಕೀಲರೂ ಆಗಿರುವ ಡಾ. ರೇವಣ್ಣ ಬಳ್ಳಾರಿ, “ಶ್ರೀ ವೀರಭದ್ರೇಶ್ವರ ಸಿನಿ ಕಂಬೈನ್ಸ್‌’ ಬ್ಯಾನರ್‌ನಲ್ಲಿ ಹೊಸಬರ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಮುಖ್ಯೋಪಧ್ಯಾಯರಾಗಿ ತೆರೆಮೇಲೂ ಕಾಣಿಸಿಕೊಂಡಿದ್ದಾರೆ.

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಟ-ನಿರ್ಮಾಪಕ ಡಾ. ರೇವಣ್ಣ ಬಳ್ಳಾರಿ, “ಹದಿಹರೆಯದಲ್ಲಿ ಹುಡುಗ-ಹುಡುಗಿಯ ನಡುವೆ ಮೂಡುವುದು ಕೇವಲ ಆಕರ್ಷಣೆಯಷ್ಟೇ ಎಂಬುವುದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಪ್ರೀತಿ ಮತ್ತು ವ್ಯಾಮೋಹದ ನಡುವಿನ ವ್ಯತ್ಯಾಸ, ಕುಟುಂಬಗಳ ಪರದಾಟ, ಜಾತೀಯತೆ ಹೀಗೆ ಹಲವಾರು ವಿಷಯಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ’ ಎಂದು ವಿವರಣೆ ಕೊಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next