Advertisement

ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಗಾಂಧಿ ತಾತ

12:17 PM Oct 02, 2020 | Suhan S |

ದೊಡ್ಡಬಳ್ಳಾಪುರ: ಜಗತ್ತಿನ ಮೇರು ವ್ಯಕ್ತಿಗಳಲ್ಲಿ ಒಬ್ಬರಾದ ಮಹಾತ್ಮಗಾಂಧೀಜಿ ನಮ್ಮೂರಿಗೆ ಬಂದಿದ್ದರು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ. ಅದೆಷ್ಟೋ ದೇಶ ಪ್ರೇಮಿಗಳಿಗೆ ಪ್ರೇರಣೆಯಾಗಿ ರುವ ಮಹಾತ್ಮ ಗಾಂಧೀಜಿಯವರ150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗಾಂಧೀಜಿ ದೊಡ್ಡಬಳ್ಳಾಪುರ ಹಾಗೂ ತಾಲೂಕಿನ ಸಮೀಪದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭಗಳ ಕುರಿತು ಒಂದು ಮೆಲುಕು.

Advertisement

ದೊಡ್ಡಬಳ್ಳಾಪುರದಲ್ಲಿ ಗಾಂಧಿ: 1934ರ ಜನವರಿ 4 ರಂದು ದೊಡ್ಡ ಬಳ್ಳಾಪುರಕ್ಕೆ ಭೇಟಿ ನೀಡಿದ್ದ ಗಾಂಧಿಯನ್ನು ಕಂಡ ಹಿರಿಯರಿಗೆ ಏನೋ ಧನ್ಯತಾಭಾವ. ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ವೇಳೆ ಇಲ್ಲಿನ ಜನತೆಗೆ ದೇಶ ಪ್ರೇಮದ ಭಾಷಣ ಮಾಡಿದ್ದರು ಮಹಾತ್ಮ ಗಾಂಧಿ ಆಗ ದೊಡ್ಡಬಳ್ಳಾಪುದ ಜನಸಂಖ್ಯೆ ಬರೀ 25 ಸಾವಿರ. ಸಿದ್ದಲಿಂಗಯ್ಯ, ರುಮಾಲೆ ಭದ್ರಣ್ಣ, ಮುಗುವಾಳಪ್ಪ ಮೊದಲಾದವರು ಸ್ವಾತಂತ್ರ್ಯ ಹೋರಾಟಗಾರರಾಗಿ ರೂಪಗೊಳ್ಳಲು ಗಾಂಧೀಜಿ ಪ್ರೇರಣೆ.

ಹರಿಜನ ನಿಧಿಗೆ ಸಹಾಯ: ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ,ರುಮಾಲೆ ಚನ್ನಬಸವಯ್ಯ, ರುಮಾಲೆ ಭದ್ರಣ್ಣ, ಎಚ್‌.ಮುಗುವಾಳಪ್ಪ, ನಾ.ನಂಜುಂಡಯ್ಯ ಮುಂತಾದವರೊಂದಿಗೆ ಊರಿನ ಜನ ಹೂ ಮಾಲೆ ಹಾಕಿ ಆತ್ಮೀಯ ಸ್ವಾಗತಕೋರಿದ್ದರು. ಪುರಸಭೆ ವತಿಯಿಂದ ಗಾಂಧೀಜಿಗೆ ಭಿನ್ನವತ್ತಳೆ ನೀಡಿ ಸನ್ಮಾನಿಸಿ, ಹರಿಜನ ನಿಧಿಗಾಗಿ ಅಂದಿನ ಕಾಲದಲ್ಲಿಯೇ 500ರೂ. ಸಂಗ್ರಹಿಸಿ ನೀಡಲಾಗಿತ್ತು. ಅದನ್ನು ಸ್ವೀಕರಿಸಿದ ಗಾಂಧೀಜಿ ಸ್ಥಳೀಕರು ತೋರಿದ ಅಭಿಮಾನಕ್ಕೆ ವಂದಿಸಿದ್ದರು.

ಅಂದು ಗಾಂಧೀಜಿ ಉಪನ್ಯಾಸ ನೀಡಿದ ಸ್ಮರಣಾರ್ಥವಾಗಿ ಆ ಸ್ಥಳಕ್ಕೆ ಗಾಂಧಿನಗರ ಎಂದು ನಾಮಕರಣ ಮಾಡಲಾಗಿತ್ತು. ಅದೇ ಇಂದಿಗೂ ಹಳೇ ಬಸ್‌ ನಿಲ್ದಾಣ ಸಮೀಪದ ಪೇಟೆಗೆ ಗಾಂಧಿನಗರ ಅಂತಾ ಹೆಸರಿದೆ. ಗಾಂಧೀಜಿ ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದಾಗ ರುಮಾಲೆ ಭದ್ರಣ್ಣ ಮತ್ತು ಸಂಗಡಿಗರು ರುಮಾಲೆ ಛತ್ರದಲ್ಲಿ ಖಾದಿ ಬಟ್ಟೆಗಳ ಪ್ರದರ್ಶನ ಏರ್ಪಡಿಸಿದ್ದರು. ಅಂದು ಸಾವಿರಾರು ಗಾಂಧಿ ಟೋಪಿಗಳು ಮಾರಾಟವಾಗಿದ್ದವು ಎನ್ನುವುದು ಗಮನಾರ್ಹ ಸಂಗತಿ.

1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಅಖೀಲ ಭಾರತ ಕಾಂಗ್ರೆಸ್‌ ಅಧಿವೇಶನಕ್ಕೆ ದೊಡ್ಡಬಳ್ಳಾಪುರದಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದರು.1930ರಲ್ಲಿ ನಡೆದದಂಡಿಉಪ್ಪಿನ ಸತ್ಯಾಗ್ರಹದಲ್ಲೂ ದೊಡ್ಡಬಳ್ಳಾಪುರದಿಂದ ರುಮಾಲೆ ಚನ್ನಬಸವಯ್ಯ, ಎಚ್‌.ಮುಗು ವಾಳಪ್ಪ ಭಾಗವಹಿಸಿದ್ದರು. ಇಲ್ಲಿಯೂ ದೇಶಿ ಉಪ್ಪನ್ನು ಮಾರಾಟ ಮಾಡಲಾಯಿತಲ್ಲದೆ, ವರ್ತಕರು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ್ದರು.

Advertisement

ವಿಶ್ರಾಂತಿಗಾಗಿ ನಂದಿಬೆಟ್ಟಕ್ಕೆ ಮಹಾತ್ಮ ಗಾಂಧೀಜಿ …  ತಾಲೂಕಿನ ಸಮೀಪವೇ ಇರುವ ನಂದಿ ಬೆಟ್ಟಕ್ಕೆ1927ರಲ್ಲಿ45 ದಿನ ಹಾಗೂ 1936ರಲ್ಲಿ3 ವಾರ ಗಾಂಧೀಜಿ ತಂಗಿದ್ದರು. ಗಾಂಧೀಜಿ ಅವರಿಗೆ ಅಪೊಪ್ಲಿಕ್ಸ್‌ (ಲಕ್ವಾ)ಗೆ ಸಂಬಂಧಿಸಿದಕಾಯಿಲೆ ಸಂಬಂಧ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದುಕುಟುಂಬ ವೈದರ ಸಲಹೆ ಮೇರೆಗೆ ನಂದಿ ಗಿರಿಧಾಮವೇ ಪ್ರಶಸ್ತ ಸ್ಥಳವೆಂದು ತೀರ್ಮಾನಿಸಿ ಇಲ್ಲಿಗೆ ಬಂದಿದ್ದರು. ಗಿರಿಧಾಮದಲ್ಲಿ ಜನಸಂದಣಿ ಹೆಚ್ಚಾಗಿ ಗಾಂಧೀಜಿ ಅವರ ಆರೋಗ್ಯಕೈಕೊಟ್ಟಿದ್ದೂ ಉಂಟು. ಆದರೆ ವೈದ್ಯರಕಟ್ಟುನಿಟ್ಟಿನ ನಿಗಾದಿಂದ ಅವರು ಬಹುಬೇಗ ಚೇತರಿಸಿಕೊಂಡರು. 1936ರಲ್ಲಿ ಹಠಾತ್ತನೆ ರಕ್ತದೊತ್ತಡ ಅಧಿಕವಾಗಿ ನಂದಿಗಿರಿಧಾಮವೇ ಪ್ರಶಸ್ತ ಸ್ಥಳವೆಂದು ಮತ್ತೂಮ್ಮೆ ಇಲ್ಲಿಗೆ ಆಗಮಿಸಿದ್ದರು. ಇದೇ ವೇಳೆ ಖ್ಯಾತ ವಿಜ್ಞಾನಿ ಭಾರತರತ್ನ ಸರ್‌ ಸಿ.ವಿ.ರಾಮನ್‌ಕೂಡ ಬೆಟ್ಟಕ್ಕೆ ಬಂದು ಮಹಾತ್ಮರೊಡನೆಕೆಲ ದಿನ ತಂಗಿದ್ದರು.

 

ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next