ಕಾಸರಗೋಡು: ಓಣಂ ಪರ್ವ ಆರಂಭವಾದ ದಿನದಿಂದ ತಿರುವೋಣಂ ತನಕ ರಾಜ್ಯದಲ್ಲಿ 484.22 ಕೋಟಿ ರೂ. ಮದ್ಯ ಮಾರಾಟವಾಗಿದೆ. ಕಳೆದ ವರ್ಷ 450 ಕೋಟಿ ರೂ.ಮದ್ಯ ಮಾರಾಟವಾಗಿತ್ತು.
ಕೇರಳ ಅಬಕಾರಿ ಇಲಾಖೆಯ ಅಧಿಕೃತ ಮದ್ಯ ಮಾರಾಟ ಸಂಸ್ಥೆ ಬಿವರೇಜಸ್ ಕಾರ್ಪೋ ರೇಶನ್ ಲಿಮಿಟೆಡ್ ಮೂಲಕ ಅತೀ ಹೆಚ್ಚಿನ ಮದ್ಯ ಮಾರಾಟವಾಗಿದೆ.
ರಾಜ್ಯದ ಬಾರ್ ಹಾಗೂ ಕನ್ಸೂ éಮರ್ ಫೆಡ್ ಮೂಲಕ ಮಾರಾಟವಾದ ಮದ್ಯ ಸೇರಿದರೆ ಒಟ್ಟಾರೆ ಮದ್ಯ ಮಾರಾಟವು 600 ಕೋಟಿ ರೂ. ಗಡಿದಾಟಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುವೋಣಂ ದಿನವಾದ ಸೆ. 4ರಂದು ಬಿವರೇಜಸ್ ಮಳಿಗೆಗಳ ಮೂಲಕ ಒಂದು ದಿನದಲ್ಲಿ 43.12 ಕೋಟಿ ರೂ. ಮದ್ಯ ಮಾರಾಟ ವಾಗಿದೆ. ಕಳೆದ ಬಾರಿ 38.86 ಕೋಟಿರೂ.ಆಗಿತ್ತು.
ಉತ್ತರಾಡಂ ದಿನದಂದು 71 ಕೋಟಿ ಮದ್ಯ ಮಾರಾಟವಾಗಿದೆ. ಕಳೆದ ವರ್ಷದಲ್ಲಿ 37.62 ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ತ್ರಿಶೂರು ಜಿಲ್ಲೆಯ ಇರಿಂಗಲಾಕುಡದಲ್ಲಿ ಅತಿ ಹೆಚ್ಚಿನ 29.46 ಕೋಟಿ ರೂ.ಮದ್ಯ ಮಾರಾಟವಾಗಿದೆ. ರಾಜ್ಯದಲ್ಲಿ 245 ಮದ್ಯ ಮಾರಾಟ ಮಳಿಗೆಗಳಿದ್ದು, ಓಣಂ ಉತ್ತರಾಡಂನಲ್ಲಿ ಅತಿ ಹೆಚ್ಚಿನ ಮದ್ಯ ಮಾರಾಟವಾಗಿದೆ.
ಕಳೆದ ವರ್ಷ ರಾ.ಹೆದ್ದಾರಿ ಸಮೀಪದ 25 ಮದ್ಯ ಮಾರಾಟ ಮಳಿಗೆಗಳನ್ನು ಸ್ಥಳಾಂತರಿಸಿದ್ದರೂ ಬಿವರೇಜಸ್ ಮಳಿಗೆಗಳ ಮೂಲಕ ಮದ್ಯ ಮಾರಾಟ ದುಪ್ಪಟ್ಟಾಗಿದೆ. ಮದ್ಯ ಮಾರಾಟಕ್ಕೆ ದೊಡ್ಡ ಕಟ್ಟಡಗಳನ್ನು ಆಶ್ರಯಿಸಿ ಮದ್ಯದ ಮೌಲ್ಯ ಹೆಚ್ಚಿಸಿದರೂ ವಿಕ್ರಯದಲ್ಲಿ ಹೆಚ್ಚಳ ಕಂಡಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.