Advertisement

Onake Obavva ಧೈರ್ಯ, ಶೌರ್ಯದ ಸಂಕೇತ: ಶಾಸಕ ಜನಾರ್ದನ ರೆಡ್ಡಿ

01:09 PM Nov 11, 2023 | Team Udayavani |

ಗಂಗಾವತಿ: ಚಿತ್ರದುರ್ಗದ ಕೋಟೆಯನ್ನು ಶತ್ರು ಸೈನ್ಯದಿಂದ ಸಂರಕ್ಷಣೆ ಮಾಡುವ ಮೂಲಕ ಒನಕೆ ಓಬವ್ವ ಧೈರ್ಯ, ಶೌರ್ಯ ಮೆರೆದಿದ್ದಾರೆ. ಮಕ್ಕಳಲ್ಲಿ ಒನಕೆ ಓಬವ್ವನ ಗುಣಗಳು ಬರುವಂತೆ ಪಾಲಕರು ಪ್ರೇರಣೆ ನೀಡಬೇಕು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

Advertisement

ಅವರು ಹೊಸಳ್ಳಿ ರಸ್ತೆಯಲ್ಲಿರುವ ಒನಕೆ ಓಬವ್ವ ವೃತ್ತದಲ್ಲಿ 364ನೇ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶ ಭಕ್ತಿ ಯಾರೊಬ್ಬರ ಸ್ವತ್ತಲ್ಲ. ಧೈರ್ಯ, ಶೌರ್ಯದ ಈ ನೆಲ ಮೂಲದವರಿಗೆ ಸದಾ ಇರುತ್ತದೆ. ಓಬವ್ವನ ಇತಿಹಾಸ ಇನ್ನಷ್ಟು ಶೋಧಿಸಿ ಯುವಜನರಿಗೆ ತಿಳಿಸುವ ಕಾರ್ಯ ಮಾಡಬೇಕಿದೆ. ನಗರದಲ್ಲಿ ಒನಕೆ ಓಬವ್ವನ ಪುತ್ಥಳಿ ನಿರ್ಮಿಸಲಾಗುತ್ತದೆ ಎಂದರು.

ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಹೊಲೆಯರು, ಮಾದಿಗರ ದಾಖಲೆಗಳಿವೆ. ವಿಜಯನಗರ ಸಾಮ್ರಾಜ್ಯಕ್ಕಾಗಿ ಇವರೆಲ್ಲರೂ ರಕ್ತ ಹರಿಸಿದ್ದಾರೆ. ಒನಕೆ ಓಬವ್ವನನ್ನು ಹೈದರಾಲಿ ಸೈನ್ಯವನ್ನು ಸದೆಬಡಿದ ವಿಷಯವನ್ನು ಮಾತ್ರ ಇತಿಹಾಸಕಾರರು ದಾಖಲಿಸಿದ್ದಾರೆ. ಓಬವ್ವನ ಚರಿತ್ರೆ ಮತ್ತು ಪೌರುಷದ ಕುರಿತು ವೀರಗಲ್ಲು, ಶಾಸನಗಳು ಯಾಕೆ ಇಲ್ಲ ಎಂದು ಪ್ರಶ್ನಿಸಿದರು.

ಇತಿಹಾಸ ಬರೆಯುವವರು ಬೇಧ-ಭಾವ ಮಾಡಿದ್ದಾರೆ. ಮೇಲ್ವರ್ಗದವರಿಗೆ ವಿಜಯನಗರದ ಅರಸರು ಕೊಟ್ಟ ಭೂಮಿ, ಮನೆ, ಇನಾಂಗಳು ಇನ್ನೂ ಇವೆ. ಒನಕೆ ಓಬವ್ವಳಿಗೆ ಕೊಟ್ಟ ಭೂಮಿ ಇನಾಂಗಳು ಯಾಕೆ ಇಂದು ಇಲ್ಲ. ಅವರ ವಂಶಸ್ಥರು ಈಗಲೂ ಬಡತನದಲ್ಲಿದ್ದಾರೆ ಎನ್ನುವ ಕುರಿತು ಸಮಾಜದವರು ಕೇಳಬೇಕಿದೆ ಎಂದರು.

Advertisement

ನಮ್ಮ ಚರಿತ್ರೆಯಲ್ಲಿ ಪೌರಾಣಿಕ ಅಳಿಸುತ್ತಿರುವುದು ಅಪಾಯಕಾರಿಯಾಗಿದೆ. ವೀರತ್ವದ ವೀರ ಚರಿತ್ರೆಯನ್ನು ಕಟ್ಟಬೇಕು. ಶ್ರಮ ಸಿದ್ದಾಂತದಲ್ಲಿ ನೆಲ ಮೂಲದ ಜನರು ನಂಬಿಕೆ ಇಟ್ಟವರು. ಬಂಧುತ್ವ ಬೆಸೆಯುವ ಕಾರ್ಯ ಮೂಲ ನಿವಾಸಿಗಳು ಸದಾ ಮಾಡುತ್ತಾರೆಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ, ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಉಪನ್ಯಾಸಕ ಡಾ.ಎನ್.ಚಿನ್ನಸ್ವಾಮಿ ಸೊಸೆಲೆ, ಕೆ.ಆರ್.ಪಿ. ಪಾರ್ಟಿಯ ಮುಖಂಡರಾದ ಅಮರಜ್ಯೋತಿ ನರಸಪ್ಪ, ಮನೋಹರಗೌಡ, ಯಮನೂರ ಚೌಡ್ಕಿ, ಮಲ್ಲಿಕಾರ್ಜುನ ನಂದಾಪೂರ, ದಲಿತ ಸಂಘಟನೆಗಳ ಮುಖಂಡರಾದ ಕುಂಟೋಜಿ ಮರಿಯಪ್ಪ, ದೊಡ್ಡಭೋಜಪ್ಪ, ಹುಲುಗಪ್ಪ ಮಾಸ್ತರ್, ಹುಲುಗಪ್ಪ ಮಾಗಿ, ಸಂಜೀವಪ್ಪ, ರಾಮಚಂದ್ರಪ್ಪ, ಹುಸೇನಪ್ಪ ಹಂಚಿನಾಳ ವಕೀಲರು ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next