Advertisement
ಇವುಗಳಿಗೆ ನಿತ್ಯ ನೀರು ಣಿಸುವುದು ಅನಿವಾರ್ಯವಾಗಿದ್ದು, ಬೇಸಿಗೆ ವೇಳೆ ನೀರುಣಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಬಹುತೇಕ ಉದ್ಯಾನಗಳಿಗೆ ಸಮಸ್ಯೆ ಉಂಟಾಗಲಿದೆ ಎಂದು ಸ್ವತಃ ಪಾಲಿಕೆಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ.
Related Articles
Advertisement
290 ಕಡೆ ಮಳೆ ನೀರು ಕೊಯ್ಲು: ಪ್ರತಿ ವರ್ಷವೂ ಬೇಸಿಗೆಯಲ್ಲಿ ಉದ್ಯಾನವನಗಳ ನಿರ್ವಹಣೆ ಕಷ್ಟವಾಗುತ್ತಿದೆ. ಇದಕ್ಕಾಗಿಯೇ ಡಿ.ವೆಂಕಟೇಶಮೂರ್ತಿ ಮೇಯರ್ ಆಗಿದ್ದ ಅವಧಿಯಲ್ಲಿ ಪಾಲಿಕೆಯ ಬಹುತೇಕ ಉದ್ಯಾನಗಳಲ್ಲಿ ಮಳೆ ನೀರಿನ ಇಂಗುಗುಂಡಿ ನಿರ್ಮಾಣ ಮಾಡಲಾಯಿತು. ಆದರೆ, ಕಾಲಕ್ರಮೇಣ ನಿರ್ವಹಣೆ ಲೋಪದಿಂದಾಗಿ ಬಹುತೇಕ ಕಡೆ ಗುಂಡಿಗಳು ಮುಚ್ಚಿಹೋಗಿವೆ.
ಇದರ ಬದಲು ಎಲ್ಲಾ ಉದ್ಯಾನವನಗಳಲ್ಲಿ ಮಳೆ ನೀರಿನ ಕೊಯ್ಲು ಪದ್ಧತಿ ಅಳವಡಿಸಿ ಮಳೆ ನೀರು ಸಂರಕ್ಷಿಸಲಾಗುವುದು. ಬಳಿಕ ನೀರಿನಿಂದ ಅಂತರ್ಜಲ ಮಟ್ಟ ವೃದ್ಧಿಸುವ ಜತೆಗೆ ಅಭಾವವಿರುವಾಗ ನೀರಿನ ಬಳಕೆ ಮಾಡಿಕೊಳ್ಳಲಾಗುವುದು. ಈಗಾಗಲೇ 290 ಉದ್ಯಾನಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಉಳಿದ ಕಡೆಗಳಲ್ಲೂ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರತಿ ಉದ್ಯಾನಗಳಲ್ಲೂ ಮಳೆ ನೀರು ಶೇಖರಣೆಗೆ ಬೃಹತ್ ತೊಟ್ಟಿಯನ್ನು ನಿರ್ಮಿಸ ಲಾಗುತ್ತಿದ್ದು, ಪ್ರತಿ ತೊಟ್ಟಿಯೂ 8 ಸಾವಿರದಿಂದ 15 ಸಾವಿರ ಲೀ. ನೀರು ಶೇಖರಣೆಯ ಸಾಮರ್ಥ್ಯ ಹೊಂದಿರಲಿದೆ. ಆಮೂಲಕ ಉದ್ಯಾನಗಳಿಗೆ ನೀರು ಹಾಯಿಸುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಶುದ್ಧೀಕರಿಸಿದ ತ್ಯಾಜ್ಯ ನೀರು ಪೂರೈಕೆಈಗಾಗಲೇ ನೀರಿನ ಅಭಾವ ಗಮನಕ್ಕೆ ಬಂದಿದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸಲು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಪ್ರತಿ ವಲಯದಲ್ಲಿ ಆಯಾ ಭಾಗದ ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಕೇಂದ್ರದಿಂದ ಶುದ್ಧೀಕರಿಸಿದ ತ್ಯಾಜ್ಯ ನೀರು ಪಡೆದು ಉದ್ಯಾನದಲ್ಲಿನ ಮರ, ಗಿಡ, ಹುಲ್ಲು ಹಾಸಿಗೆ ಉಣಿಸಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲು ಆಯುಕ್ತರಿಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಹೇಳಿದ್ದಾರೆ. * ವಿಶೇಷ ವರದಿ