Advertisement

ಸರಕಾರದಿಂದ 2.50 ರೂ.ಗೆ ನ್ಯಾಪ್ಕಿನ್‌

07:30 AM Mar 09, 2018 | |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜೈವಿಕ ಸ್ಯಾನಿಟರಿ ನ್ಯಾಪ್‌ಕಿನ್‌ಗ ಳನ್ನು ಬಿಡುಗಡೆ ಮಾಡಿದ್ದು, ಒಂದು ಪ್ಯಾಡ್‌ ಕೇವಲ 2.50 ರೂ.ಗೆ ದೊರೆಯಲಿದೆ. ಇದು ದೇಶದೆಲ್ಲೆಡೆ ಇರುವ 3,200 ಜನೌಷಧಿ ಕೇಂದ್ರಗಳಲ್ಲಿ ಲಭ್ಯವಾಗಲಿದೆ.

Advertisement

ಒಂದು ಪ್ಯಾಕ್‌ನಲ್ಲಿ ನಾಲ್ಕು ಪ್ಯಾಡ್‌ಗಳು ಇರಲಿದ್ದು, ಪ್ಯಾಕ್‌ಗೆ 10 ರೂ. ಆಗಿರಲಿದೆ. ಮೇ. 28ರಿಂದ ನ್ಯಾಪ್‌ಕಿನ್‌ಗಳು ಲಭ್ಯವಾಗಲಿವೆ. ಇದಕ್ಕೆ ಸುವಿಧಾ ಎಂದು ಹೆಸರಿಡಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್‌ ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗೆ ರೂ. 32 ಆಗಿದ್ದು, ಜೈವಿಕವೂ ಅಲ್ಲ. ಆದರೆ ಸರಕಾರ ಬಿಡುಗಡೆ ಮಾಡಲಿರುವ ಈ ನ್ಯಾಪ್‌ಕಿನ್‌ಗಳು ಜೈವಿಕವಾಗಿದ್ದು, ಮಣ್ಣಿ ನಲ್ಲಿ ಸುಲಭವಾಗಿ ಕೊಳೆಯುತ್ತದೆ. ಇದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವಿಶೇಷವಾಗಿ ಅನುಕೂಲಕರವಾಗಿರಲಿದೆ.

ಈ ಹಿಂದೆ ಜಿಎಸ್‌ಟಿ ವ್ಯಾಪ್ತಿಯಿಂದ ನ್ಯಾಪ್‌ಕಿನ್‌ಗಳನ್ನು ಹೊರಗಿಡುವುದಕ್ಕೆ ಸಂಬಂಧಿ ಸಿದ ಭಾರೀ ಪ್ರತಿಭಟನೆ, ಆಕ್ರೋಶ ವ್ಯಕ್ತ ವಾಗಿತ್ತು. ಜಿಎಸ್‌ಟಿಗೂ ಮೊದಲು ಶೇ. 16ರಷ್ಟಿದ್ದ ತೆರಿಗೆಯನ್ನು ಜಿಎಸ್‌ಟಿಯಲ್ಲಿ ಶೇ. 12ಕ್ಕೆ ಇಳಿಸಲಾಗಿತ್ತು. ಆದರೆ ಇದಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೇ ಜೈವಿಕ ನ್ಯಾಪ್‌ಕಿನ್‌ಗಳನ್ನು ಬಿಡುಗಡೆ ಮಾಡಿ ಆಕ್ರೋಶಕ್ಕೆ ಉತ್ತರಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next