ಮುಂಬೈ: ಆಗಸ್ಟ್ 15, 2020. ದೇಶ ಸ್ವಾತಂತ್ರ್ಯದ ಸಂಭ್ರಮದಲ್ಲಿತ್ತು. ಸಂಜೆ ಏಳೂವರೆ ಸುಮಾರಿಗೆ ದೇಶಕ್ಕೆ ಆಘಾತ ಕಾದಿತ್ತು. ಅದಕ್ಕೆ ಕಾರಣ ಒಂದು ಇನ್ಸ್ಟಾಗ್ರಾಮ್ ಪೋಸ್ಟ್. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಪೋಸ್ಟ್. ಇಂದು 19.29 ಗಂಟೆಯಿಂದ ನನನ್ನು ನಿವೃತ್ತ ಎಂದು ಪರಿಗಣಿಸಿ ಎಂದು ಧೋನಿ ಬರೆದುಕೊಂಡಿದ್ದರು.
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿಯಾಗಿ ಇಂದಿಗೆ ಒಂದು ವರ್ಷ. ಅಮಿತಾಭ್ ಬಚ್ಚನ್ ಅವರ ‘ಕಭೀ ಕಭಿ’ ಚಿತ್ರದ ‘ಮೈ ಪಲ್ ದೋ ಪಲ್ ಕಾ ಶಾಯರ್ ಹೂ’ ಎಂದು ಹಾಡಿನ ಸಾಲಿನೊಂದಿಗೆ ತನ್ನ ಕ್ರಿಕೆಟ್ ಜೀವನದ ಪ್ರಮುಖ ಘಟ್ಟಗಳ ವಿಡಿಯೋ ಹಂಚಿಕೊಂಡಿದ್ದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಸುರೇಶ್ ರೈನಾ ಕೂಡಾ ನಿವೃತ್ತಿ ಘೋಷಣೆ ಮಾಡಿದ್ದರು.
ಇದನ್ನೂ ಓದಿ:ಮಲ್ಯ ಕಿಂಗ್‌ಫಿಷರ್ ಹೌಸ್ 52 ಕೋಟಿ ರೂ.ಗೆ ಮಾರಾಟ
2004ರಲ್ಲಿ ಟೀಂ ಇಂಡಿಯಾ ಗೆ ಕಾಲಿಟ್ಟ ಮಹೇಂದ್ರ ಸಿಂಗ್ ಧೋನಿ ಮೂರು ಮಾದರಿಯಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ.
2019ರ ವಿಶ್ವಕಪ್ ಸೆಮಿ ಫೈನಲ್ ಎಂ.ಎಸ್.ಧೋನಿ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯ. ಈ ಪಂದ್ಯದಲ್ಲಿ ಧೋನಿ ರನ್ ಔಟ್ ಆಗಿದ್ದರು