Advertisement

1994 ರ ದರೋಡೆ ಕೇಸ್: 28 ವರ್ಷಗಳ ಬಳಿಕ ಛೋಟಾ ರಾಜನ್ ಗ್ಯಾಂಗ್ ಸದಸ್ಯ ಅರೆಸ್ಟ್

05:10 PM Oct 07, 2023 | Team Udayavani |

ಮುಂಬಯಿ: 1994 ರ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 28 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯನನ್ನು ಮುಂಬೈ ಪೊಲೀಸರು ಶನಿವಾರ ಗುಜರಾತ್‌ನ ಸೂರತ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ, 59 ವರ್ಷದ ಸಬೀರ್ ಬರ್ಕತಲಿ ಲಖಾನಿ ಎಂಬಾತನಾಗಿದ್ದು, ನಗರದ ಆಂಟೊಪ್ ಹಿಲ್ ಪ್ರದೇಶದಲ್ಲಿ ನೆಲೆಸಿದ್ದು, ಮುಂಬೈ ಪೊಲೀಸರ ಅಪರಾಧ ವಿಭಾಗವು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

“1994 ರಲ್ಲಿ, ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯನಾಗಿದ್ದ ಸಬೀರ್, ತನ್ನ ನಾಲ್ವರು ಸಹಚರರೊಂದಿಗೆ ಚೆಂಬೂರಿನ ಸಿಂಧಿ ಕ್ಯಾಂಪ್‌ನಲ್ಲಿರುವ ರಿಯಲ್ ಎಸ್ಟೇಟ್ ದಲ್ಲಾಳಿ ಕಚೇರಿ ದರೋಡೆ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರಗಳ ಸಮೇತ ದಾಳಿ ನಡೆಸಿದ್ದ. ಘಟನೆಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಪರಾಧ ವಿಭಾಗದ ಅಧಿಕಾರಿಯ ಮೇಲೂ ಹಲ್ಲೆ ನಡೆಸಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು, ಸ್ಥಳೀಯ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಂಧಿತ ಐವರು ಆರೋಪಿಗಳಲ್ಲಿ ಮೂವರು ಪೊಲೀಸರ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದು, ಲಖಾನಿ ಸೇರಿದಂತೆ ಇಬ್ಬರು ಆರೋಪಿಗಳು ಒಂದು ವರ್ಷದ ನಂತರ 1995 ರಲ್ಲಿ ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಲಖಾನಿ ಸೂರತ್‌ನಲ್ಲಿದ್ದಾನೆ ಎಂಬ ಸುಳಿವು ಇತ್ತೀಚೆಗೆ ಅಪರಾಧ ವಿಭಾಗಕ್ಕೆ ಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿ ಶನಿವಾರ ಬಲೆ ಬೀಸಿ ಬಂಧಿಸಲಾಯಿತು. ದರೋಡೆಕೋರ ಛೋಟಾ ರಾಜನ್ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next