ವಿದ್ಯಾಗಿರಿ, ಮೂಡಬಿದಿರೆ: ಆಳ್ವಾಸ್ ನುಡಿಸಿರಿ ಸಮ್ಮೇಳನದ ಮೊದಲ ದಿನ ವಾದ ಶುಕ್ರವಾರ 70 ಸಾವಿರ ಮಂದಿ ಭರ್ಜರಿ ಭೋಜನದ ಸವಿ ಉಂಡಿದ್ದಾರೆ. ಇಡೀ ದಿನ ಲಕ್ಷದಷ್ಟು ಮಂದಿ ಆಗಮಿಸಿದ್ದರು. ಬೆಳಗ್ಗಿನ ಉಪಾ ಹಾರಕ್ಕೆ ಸುಮಾರು 18,000 ಮಂದಿ ಆಗ ಮಿಸಿದ್ದರೆ ಮಧ್ಯಾಹ್ನ 70 ಸಾವಿರ ಮಂದಿ ಆಗಮಿಸಿದ್ದಾರೆ.
ಮುಂಜಾನೆ ಉಪಾಹಾರದ ಮೆನುವಿನಲ್ಲಿ ಅವಲಕ್ಕಿ, ಸಜ್ಜಿಗೆ, ಜೈನ್ ಕೇಕ್, ಶ್ಯಾವಿಗೆ, ಇಡ್ಲಿ ಸಾಂಬಾರ್, ಕಾಫಿ/ಚಹಾ ಇತ್ತು. ಮಧ್ಯಾಹ್ನದ ಭೋಜನಕ್ಕೆ ಬೆಳ್ತಿಗೆ ಮತ್ತು ಕುಚ್ಚಿಗೆ ಅನ್ನ, ಸಾಂಬಾರು, ಪಲ್ಯ, ವೆಜ್ ಕೂರ್ಮ, ಚಪಾತಿ, ಹುಣಸೆ ಹುಳಿ ಉಪ್ಪಿನ ಕಾಯಿ, ದಾಲ್‌ಫ್ತೈ , ಪಾಯಸ, ಹೋಳಿಗೆ, ಮೊಸರು ಇವುಗಳ ಜತೆಗೆ ಉತ್ತರ ಕರ್ನಾಟಕದವರು ಭಾರೀ ಸಂಖ್ಯೆಯಲ್ಲಿ ಆಗಮಿಸಿರುವುದನ್ನು ಲಕ್ಷಿಸಿ ಜೋಳದ ರೊಟ್ಟಿ , ಚಟ್ನಿ ಪುಡಿಯ ಸೊಗಸು ಇತ್ತು. ನಿತ್ಯಾಹಾರವಾಗಿ ಜೋಳದ ರೊಟ್ಟಿ ಸೇವಿಸುವವರು ಈ ಆತಿಥ್ಯದಿಂದ ಅಚ್ಚರಿ ಗೊಂಡು, ಖುಷಿ ಪಟ್ಟರೆ, ಕರಾವಳಿಗೂ “ನೋಡೋಣ.. ರುಚಿ’ ಎಂದು ಸೇವಿಸಿ ದರು. ಎರಡು ಪಾಕ ಶಾಲೆ ಸಮೀಪವೇ ಊಟೋ ಪ ಚಾರ ಏರ್ಪ ಡಿಸ ಲಾಗಿತ್ತು. ಕಳೆದ ಬಾರಿ ಯಂತೆ ಈ ಬಾರಿಯೂ ನೇತ್ರಾವತಿ, ಭಾಗೀ ರತಿ, ಹೇಮಾವತಿ ವಿದ್ಯಾರ್ಥಿ ನಿಲಯ ಗಳ ಪರಿಸರ ದಲ್ಲಿ 26 ಕೌಂಟರ್ ಗಳನ್ನು ಹಾಕಿದ್ದರೆ, ಕೃಷಿ ಸಿರಿಯ ಆವರಣದಲ್ಲಿ 12 ಕೌಂಟರ್‌ಗಳಿದ್ದವು.
250 ಬಾಣಸಿಗರು
ಡಾ| ಮೋಹನ ಆಳ್ವರ ಮಾರ್ಗದರ್ಶನದಂತೆ, ಪ್ರಮೋದ್ ಹೆಗ್ಡೆ ಅವರ ಮೇಲುಸ್ತುವಾರಿಯಲ್ಲಿ ಮೂಡಬಿದಿರೆಯ ಸನತ್ ಕುಮಾರ್ ಮತ್ತು ಬೆಳುವಾಯಿಯ ರಾಜೇಂದ್ರ ಮತ್ತು ಬಳಗದ 250 ಮಂದಿ ಬಾಣಸಿಗರು ಎರಡೂ ಕಡೆ ಅಡುಗೆ ಮನೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಿದ್ದಾರೆ. ಶನಿವಾರ ಮತ್ತದೇ ಮೆನು. ಆದರೆ ಬೆಳಗಿನ ಉಪಾಹಾರದಲ್ಲಿ ಜೈನ್ ಕೇಕ್ ಬದಲಾಗಿ ಶೀರಾ ಮಧ್ಯಾಹ್ನದೂಟದಲ್ಲಿ ದಾಲ್‌ಫ್ತೈ ಬದಲು ತೋವೆ , ಹೋಳಿಗೆ ಬದಲು ಲಾಡು ಇರುವುದು.