Advertisement

ಮಸೀದಿ ಉರುಳಿದ ಮೇಲೆ…

09:37 PM Nov 09, 2019 | Lakshmi GovindaRaju |

1992ರ ಡಿ.6ರಂದು ರಾತ್ರಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ ಮಾತನಾಡುತ್ತಾ, “ಮಸೀದಿ ಉರುಳಿಸಿದ್ದು ರಾಷ್ಟ್ರೀಯ ಅವಮಾನ. ಅದೇ ಸ್ಥಳದಲ್ಲಿ ಪುನಃ ಮಸೀದಿ ನಿರ್ಮಿಸಲಾಗುವುದು’ ಎಂದು ಹೇಳಿದರು. ಕುತೂಹಲದ ಸಂಗತಿ ಎಂದರೆ, ಕಲ್ಯಾಣ ಸಿಂಗ್‌ ರಾಜೀನಾಮೆ ಬಳಿಕ ಅದೇ ದಿನ (ಡಿ. 6ರಂದು ) ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತಿದ್ದಂತೆ ಕರ ಸೇವಕರು ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತೊಡಗಿ, 1992ರ ಡಿ. 8ರಂದು ಬೆಳಗ್ಗೆ ತಾತ್ಕಾಲಿಕ ಮಂದಿರ ನಿರ್ಮಿಸಿ, ರಾಮನ ಮೂರ್ತಿ ಪ್ರತಿ ಷ್ಠಾಪಿಸಿ ಪೂಜೆ ನಡೆಸಿ ಪ್ರಸಾದ ವಿತರಣೆ ಮಾಡಿದರು.

Advertisement

ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ, ತಾತ್ಕಾಲಿಕ ರಾಮ ಮಂದಿರ ನಿರ್ಮಾಣ ಪೂರ್ತಿಯಾದ ಅನಂತರ ಡಿ. 8ರಂದು ಕೇಂದ್ರ ಪೊಲೀಸ್‌ ಪಡೆ ರಾಮ ಜನ್ಮಭೂಮಿ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ರಾಮನ ತಾತ್ಕಾಲಿಕ ಮಂದಿರ ನಿರ್ಮಾಣವಾದ ಎರಡೇ ದಿನಗಳಲ್ಲಿ (ಡಿ. 10) ಆರ್‌ಎಸ್ಸೆಸ್‌, ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಜಮಾತ್‌-ಎ-ಇಸ್ಲಾಮಿ ಹಿಂದ್‌ ಹಾಗೂ ಇಸ್ಲಾಮಿಕ್‌ ಸೇವಕ ಸಂಘಗಳನ್ನು ಕೇಂದ್ರ ಸರಕಾರ ನಿಷೇಧಿಸಿತು. ಜತೆಗೆ ಡಿಸೆಂಬರ್‌ 15ರಂದು ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರಗಳನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಘೋಷಿಸಲಾಯಿತು.

ಅದರ ಮರುದಿನವೇ ಅಂದರೆ ಡಿ.16ರಂದು ರಾಮ ಜನ್ಮ ಭೂಮಿಯಲ್ಲಿದ್ದ ವಿವಾದಾತ್ಮಕ ಕಟ್ಟಡ ಉರುಳಲು ಕಾರಣವಾದ ಘಟನೆಗಳ ತನಿಖೆ ನಡೆಸಲು ಕೇಂದ್ರ, ಲಿಬರ್ಹಾನ್‌ ಆಯೋಗ ನೇಮಿ ಸಿತು. ಇವೆಲ್ಲ ಬೆಳವಣಿಗೆಗಳ ನಡುವೆ ಅಯೋಧ್ಯೆಯಲ್ಲಿ ಕರ ಸೇವಕ ರಿಂದ ನಿರ್ಮಾಣಗೊಂಡ ರಾಮ ಮಂದಿರದಲ್ಲಿ ಪ್ರತಿಷ್ಠಾಪಿತ ರಾಮ ಲಲ್ಲಾನ ದರ್ಶನ ಪಡೆಯಲು ವಿವಿಧ ಭಾಗಗಳಿಂದ ಭಕ್ತರು ಬರಲಾ ರಂಭಿಸಿದರು. ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚುತ್ತ ಹೋಯಿತು. ಸ್ಥಳೀಯ ಆಡಳಿತ ಭಕ್ತರಿಗೆ ರಾಮನ ದರ್ಶನಕ್ಕೆ ಅನು ಮತಿ ನೀಡಿತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ತಡೆಯೊಡ್ಡಿತು. ಇದ ರಿಂದ ಜನರಲ್ಲಿ ಅಸಂತೋಷ ಹೆಚ್ಚಾಗಿ ವಾತಾವರಣ ಪ್ರಕ್ಷುಬ್ಧವಾಯಿತು.

ಭಕ್ತರಿಗೆ ರಾಮ ದರ್ಶನಕ್ಕೆ ತಡೆಯೊಡ್ಡಬಾರದೆಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದ ಬಳಿಕ ವಾತಾವರಣ ತಿಳಿಯಾಯಿತು. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಮನಗಂಡ ಸರ್ಕಾರ ಉಭಯ ಸಮುದಾಯಗಳನ್ನು ತೃಪ್ತಿಪಡಿಸುವ ಇನ್ನೊಂದು ಪ್ರಯತ್ನ ನಡೆಸಿತು. ನರಸಿಂಹರಾವ್‌ ಸರ್ಕಾರ 1993ರ ಜ.8ರಂದು ವಿಶೇಷ ಆಜ್ಞೆ ಮೂಲಕ ರಾಮ ಜನ್ಮಭೂಮಿ ಪ್ರದೇಶವನ್ನು ತನ್ನ ವಶಕ್ಕೆ ತೆಗೆದು ಕೊಂಡಿತು. ಜತೆಗೆ, ಒಂದು ಟ್ರಸ್ಟ್‌ ಮೂಲಕ ರಾಮ ಮಂದಿರ ಹಾಗೂ ಇನ್ನೊಂದು ಟ್ರಸ್ಟ್‌ನಿಂದ ಮಸೀದಿ ನಿರ್ಮಿಸುವ ಪ್ರಸ್ತಾವ ಮಂಡಿಸಿತು. ಆದರೆ, ಉಭಯ ಸಮುದಾಯದ ಮುಖಂಡರು ತಿರಸ್ಕರಿಸಿದರು.

ಮಸೀದಿ ಬಿತ್ತು, ಸರ್ಕಾರಗಳೂ ಬಿದ್ದವು!
* ಅಯೋಧ್ಯೆಯ ವಿವಾದಿತ ಕಟ್ಟಡದ ಕೊನೆಯ ಗುಮ್ಮಟ ಉರುಳಿದ ಒಂದು ತಾಸಿನಲ್ಲಿ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣ ಸಿಂಗ್‌ ಸಂಜೆ 5.30ಕ್ಕೆ ರಾಜೀನಾಮೆ ನೀಡಿದರು.

Advertisement

* ಇದರ ಬೆನ್ನಿಗೆ ಕೇಂದ್ರ ಸರ್ಕಾರ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರ ಪತಿ ಆಡಳಿತ ಜಾರಿಗೊಳಿಸಿತು.

* ಡಿ.7ರಿಂದ 11ರ ವರೆಗೆ ದೇಶದ ವಿವಿಧ ಕಡೆಗಳಲ್ಲಿ ಕೋಮು ಗಲಭೆ ನಡೆದು, ಸುಮಾರು 900 ಮಂದಿ ಬಲಿಯಾದರು.

* ಇದನ್ನು ಆಧಾರವಾಗಿಟ್ಟುಕೊಂಡ ಕೇಂದ್ರ ಸರ್ಕಾರ‌, ಕೋಮು ಗಲಭೆ ನಿಯಂ ತ್ರಿಸುವಲ್ಲಿ ವಿಫಲವಾದವು ಎಂಬ ಕಾರಣ ನೀಡಿ, ಡಿ.15ರಂದು ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರಗಳನ್ನು ವಜಾಗೊಳಿಸಿ, ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದಿತು.

* ಇದಾದ ಒಂದು ವರ್ಷದಲ್ಲಿ ಅಂದರೆ 1993ರ ನವೆಂಬರ್‌ನಲ್ಲಿ ಈ ನಾಲ್ಕೂ ರಾಜ್ಯಗಳಲ್ಲಿ ಚುನಾವಣೆ ನಡೆದು ರಾಜಸ್ಥಾನದಲ್ಲಿ ಮಾತ್ರ ಬಿಜೆಪಿ ಪುನಃ ಅಧಿಕಾರ ಹಿಡಿಯಿತು. ಮೇಲ್ನೋಟಕ್ಕೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಎಂಬಂತೆ ಕಂಡುಬಂದರೂ ಹಿಂದೂ ಮತಗಳ ಕ್ರೋಡೀಕರಣ, ಹಾಗೆಯೇ ಕಾಂಗ್ರೆಸ್‌ನಿಂದ ಮುಸ್ಲಿಂ ಸಮುದಾಯ ದೂರ ಸರಿಯುತ್ತಿರುವ ಸೂಚನೆಗಳು ಕಂಡುಬಂದವು. ಇದು ಮುಂದೆ ರಾಜ ಕೀ ಯವಾಗಿ ಬಿಜೆಪಿಗೆ ಅನುಕೂಲವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next