Advertisement

4ರಂದು ಕರ್ನಾಟಕ ವಿಶ್ವವಿದ್ಯಾಲಯದ 67ನೇ ಘಟಿಕೋತ್ಸವ

03:11 PM Mar 01, 2017 | |

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ 67ನೇ ವಾರ್ಷಿಕ ಘಟಿಕೋತ್ಸವ ಮಾ.4ರಂದು ಬೆಳಿಗ್ಗೆ 11ಗಂಟೆಗೆ ವಿಶ್ವವಿದ್ಯಾಲಯದ ಗಾಂಧಿಧಿ ಭವನದಲ್ಲಿ ಜರುಗಲಿದೆ ಎಂದು ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಹೇಳಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಧ್ಯಕ್ಷತೆಯಲ್ಲಿ ಜರುಗುವ ಘಟಿಕೋತ್ಸವದಲ್ಲಿ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ಕುಲಪತಿ ಡಾ|ಎಂ. ಜಗದೇಶ ಕುಮಾರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ವಿಶ್ವವಿದ್ಯಾಲಯದ ಆಡಳಿತ ಭವನದಿಂದ ಗಣ್ಯರು, ಸಿಂಡಿಕೇಟ್‌, ವಿದ್ಯಾ ವಿಷಯಕ ಪರಿಷತ್‌ ಸದಸ್ಯರು, ರ್‍ಯಾಂಕ್‌ ವಿಜೇತರು, ಪದವೀಧರರು, ಪಿಎಚ್‌ಡಿ ಪದವೀಧರರು ಒಳಗೊಂಡ ಘಟಿಕೋತ್ಸವ ಮೆರವಣಿಗೆ ಸಾಗಿ 10:50 ಗಂಟೆಗೆ ಗಾಂಧಿಭವನ ತಲುಪಲಿದೆ ಎಂದರು.

ಬಳಿಕ ಜರುಗುವ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಷಯಗಳ ಪದವಿಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಹೆಚ್ಚು ಅಂಕ ಗಳಿಸಿದ ರ್‍ಯಾಂಕ್‌ ವಿಜೇತರಿಗೆ ಚಿನ್ನದ ಪದಕ ಹಾಗೂ ಪಿಎಚ್‌ಡಿ ಪದವೀಧರರಿಗೆ ಉನ್ನತ ಶಿಕ್ಷಣ ಸಚಿವರು ಪದವಿ ಪ್ರಮಾಣಪತ್ರ ನೀಡಲಿದ್ದಾರೆ.

ಈ ಘಟಿಕೋತ್ಸವದಲ್ಲಿ  ಒಟ್ಟು 213 ಸುವರ್ಣ ಪದಕಗಳು, 1ಉತ್ತಮ ಸಂಶೋಧನಾ ಶಿಕ್ಷಕ ಸುವರ್ಣ ಪದಕ, 45 ಪಾರಿತೋಷಕಗಳು, 25 ಶಿಷ್ಯವೇತನಗಳು, 54 ರ್‍ಯಾಂಗಲರ್‌ ಡಿ.ಸಿ. ಪಾವಟೆ ವಜ್ರಮಹೋತ್ಸವಆಚರಣಾ ಶಿಷ್ಯವೇತನಗಳು, ಪದವಿ   ಮತ್ತು ಸ್ನಾತಕೋತ್ತರ ಪದವಿಯ 69 ರ್‍ಯಾಂಕ್‌ ವಿತರಣೆ ಹಾಗೂ ಒಟ್ಟು ವಿವಿಧ ನಿಖಾಯಗಳ 130 ಪಿಎಚ್‌ಡಿ ಪದವೀಧರರು ಪ್ರಮಾಣಪತ್ರ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು. 

ಐರಸಂಗರ ಹೆಸರು ಅನುಮೋದನೆ: ಕಳೆದ ಎರಡು ಬಾರಿ ವಿಶ್ವವಿದ್ಯಾಲಯ ಅನಿವಾರ್ಯ ಕಾರಣಗಳಿಂದ ಗೌರವ ಡಾಕ್ಟರೇಟ್‌ ನೀಡಿರಲಿಲ್ಲ. ಈ ಬಾರಿ ವಿವಿಗೆ ಬಂದ 21ಅರ್ಜಿಗಳ ಪೈಕಿ ಸಿಂಡಿಕೇಟ್‌ ಸದಸ್ಯರು ಒಂಭತ್ತು ಜನರನ್ನು ಆಯ್ಕೆ ಮಾಡಿ ರಾಜ್ಯಪಾಲರು ನೇಮಿಸಿದ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು.

Advertisement

ಆಯ್ಕೆ ಸಮಿತಿ ಸದಸ್ಯರು ಒಂಭತ್ತು ಸಾಧಕರ ಪೈಕಿ ಮೂವರ ಹೆಸರನ್ನು ರಾಜ್ಯಪಾಲರಿಗೆ ನೀಡಿದ್ದು, ರಾಜ್ಯಪಾಲರು ಈ ಪೈಕಿ ಧಾರವಾಡದವರೇ ಆದ ಕವಿ ಐರಸಂಗ ಅವರ ಹೆಸರನ್ನು ಅನುಮೋದಿಸಿದ್ದಾರೆ ಎಂದರು.  ವಿಶ್ವವಿದ್ಯಾಲಯ ಬಹುತೇಕ ಯುಜಿಸಿ ಅನುದಾನ ನೆಚ್ಚಿಕೊಂಡಿದೆ.

ಕಳೆದ ಹತ್ತು ತಿಂಗಳಿಂದ 15 ಕೋಟಿ ರೂ.ಯುಜಿಸಿಯಿಂದ ಅನುದಾನ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಸೇರಿದಂತೆ ಆಡಳಿತಾತ್ಮಕವಾಗಿ ಕೆಲಸಗಳು ವಿಳಂಬವಾಗುತ್ತಿವೆ. ನಕಲಿ ಅಂಕಪಟ್ಟಿ ಕುರಿತು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಅವರು ಓರಿಸ್ಸಾ ಹಾಗೂ ಚೆನ್ನೈಗೆ ಹೋಗಿರುವ ಮಾಹಿತಿ ಮಾತ್ರ ತಿಳಿದಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next