Advertisement

ಪೋಖ್ರಾನ್‌ ಪರೀಕ್ಷೆ: ಅಟಲ್‌ ಕೊಂಡಾಡಿದ ಮೋದಿ

01:14 AM May 12, 2017 | Team Udayavani |

ಹೊಸದಿಲ್ಲಿ: ಪೋಖ್ರಾನ್‌ ಪರಮಾಣು ಪರೀಕ್ಷೆ ನಡೆಸಿದ ಹಿಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕೆಚ್ಚೆದೆಯ ನಿರ್ಧಾರವನ್ನು ಪ್ರಧಾನಿ ಮೋದಿ ಅವರು ಪ್ರಶಂಸಿಸಿದ್ದಾರೆ. ಕಳೆದ 1998ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಿದ ಮೇಲೆ ಅದರ ನೆನೆಪಿಗಾಗಿ ಪ್ರತಿವರ್ಷ ಮೇ 11ರ ದಿನವನ್ನು ‘ರಾಷ್ಟ್ರೀಯ ತಂತ್ರಜ್ಞಾನ ದಿನ’ವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಪಿಎಂ ತಮ್ಮ ಟ್ವೀಟ್‌ ಸಂದೇಶದಲ್ಲಿ ತಿಳಿಸಿದ್ದಾರೆ. 

Advertisement

ಪರೀಕ್ಷೆ ಮೂಲಕ ನಮ್ಮ ವಿಜ್ಞಾನಿಗಳು ಮತ್ತು ರಾಜಕೀಯ ನಾಯಕರು ತೋರಿದ ಎದೆಗಾರಿಕೆಗೆ ನಾವೆಲ್ಲ ಚಿರಋಣಿಯಾಗಿರಬೇಕು. 5 ಪರಮಾಣು ಪರೀಕ್ಷೆಗಳನ್ನು ಬಹಳ ಯಶಸ್ವಿಯಾಗಿ ಮಾಡುವ ಮೂಲಕ ವಿಶ್ವಕ್ಕೆ ಭಾರತದ ಶಕ್ತಿಯೇನು ಎಂಬುದನ್ನು ತೋರಿಸಿಕೊಡಲಾಯಿತು ಎಂದು ಎರಡು ದಶಕಗಳ ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡು ಅಟಲ್‌ ಅವರ ನಿರ್ಧಾರವನ್ನು ಮನಸಾರೆ ಹೊಗಳಿದರು. ವಿಶ್ವ ಸಮುದಾಯ ಭಾರತದ  ಮೇಲೆ ದಿಗ್ಬಂಧನ ವಿಧಿಸಲಿದೆ ಎಂಬ ಅರಿವಿದ್ದರೂ ಅದಕ್ಕೆ ಹೆದರದೆ ವಿಭಿನ್ನ ಸಂದೇಶ ರವಾನೆ ಮಾಡಿದರು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next