Advertisement

22ರಂದು ಬಾನಳ್ಳಿ ಉಣ್ಣಕ್ಕಿ ಜಾತ್ರೆ

05:20 PM Nov 20, 2018 | Team Udayavani |

ಮೂಡಿಗೆರೆ: ಅಲುಗಾಡುವ ಚಮತ್ಕಾರಿ ಹುತ್ತ ಎಂದೆ ಪ್ರಖ್ಯಾತವಾಗಿರುವ ಬಾನಳ್ಳಿ ಉಣ್ಣಕ್ಕಿ ಜಾತ್ರೆ ನ.22ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪ್ರತಾಪ್‌ ಬಾನಳ್ಳಿ ತಿಳಿಸಿದ್ದಾರೆ. ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ದೇವರು ಹಲವು ವೈಶಿಷ್ಟÂಗಳಿಂದ ಕೂಡಿದೆ ಎಂದಿದ್ದಾರೆ. ಅಂದು ಬೆಳಗ್ಗಿನಿಂದ ವಿವಿಧ ಪೂಜಾ ಕಾರ್ಯಗಳು ನೆರವೇರಲಿದೆ. 

Advertisement

ಸಂಜೆ 8.00 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಪುರಾತನ ಕಾಲದಿಂದಲೂ ಬಾನಳ್ಳಿ ಉಣ್ಣಕ್ಕಿ ಜಾತ್ರೆಯನ್ನು ಮಕ್ಕಳ ಜಾತ್ರೆಯಾಗಿ ಅಚರಿಸುತ್ತಾ ಬರಲಾಗುತ್ತಿದೆ. ಈ ಹಿಂದೆ ದನ ಕಾಯುವ ಹುಡುಗರು ಇಲ್ಲಿನ ಚಮತ್ಕಾರಗಳನ್ನು ತಿಳಿದು ಪೂಜಿಸುತ್ತಾ ಕಾಲಕ್ರಮೇಣ ಇದರ ಮಹತ್ವ ತಿಳಿದು ಸುತ್ತಮುತ್ತಲು ಹರಡಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಆಗಮಿಸುತ್ತಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next