Advertisement

ಭಾರತದಲ್ಲಿ, ಭಾರತಕ್ಕಾಗಿ, ವಿಶ್ವಕ್ಕಾಗಿ ಶಸ್ತ್ರಾಸ್ತ್ರ ಉತ್ಪಾದಿಸಿ: ರಾಜನಾಥ್‌ ಸಿಂಗ್‌

12:28 AM Dec 19, 2021 | Team Udayavani |

ಹೊಸದಿಲ್ಲಿ: ಭಾರತ ಅಸಂಖ್ಯಾಕ ಭದ್ರತಾ ಸವಾಲುಗಳನ್ನೆದುರಿಸಲು ಹಲವು ರಾಷ್ಟ್ರಗಳೊಂದಿಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡಿದೆ.

Advertisement

ಅಂತಹ ಎಲ್ಲ ಸ್ನೇಹಿತ ರಾಷ್ಟ್ರಗಳಿಗೆ, ಭಾರತಕ್ಕೇ ಬಂದು, ಭಾರತಕ್ಕಾಗಿ, ವಿಶ್ವದ ಹಿತಕ್ಕಾಗಿ ಶಸ್ತ್ರಾಸ್ತ್ರ ಉತ್ಪಾದಿ ಸಲು ಮನವಿ ಮಾಡಿಕೊಳ್ಳಲಾಗಿದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಅವರು ಫಿಕ್ಕಿ (ಭಾರತ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ) ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದರು. ಭಾರತಕ್ಕೆ ದೇವರು ಕೆಲವು ನೆರೆಯ ದೇಶಗಳನ್ನು ನೀಡಿದ್ದಾನೆ.

ಅವು ಭಾರತೀಯರ ಬೆಳವಣಿಗೆ ಸಹಿ ಸುವುದಿಲ್ಲ. ಭಾರತದಿಂದ ಹೊರ ಹೋಗಿ ಹುಟ್ಟಿದ ಒಂದು ದೇಶ ದಿನೇದಿನೆ ದುರ್ಬಲವಾಗುತ್ತಿದೆ. ಅದಕ್ಕೆ ಭಾರತದ ಅಭಿವೃದ್ಧಿ ಕಂಡು ಆತಂಕವಾಗಿದೆ.

ಇದನ್ನೂ ಓದಿ:ವ್ಯಕ್ತಿಯನ್ನು ಕೊಂದು ಗ್ರಾಮದಲ್ಲೇ ಹೂತಿಟ್ಟರು : ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ

Advertisement

ಆದ್ದರಿಂದಲೇ ಭಾರತ ತನ್ನ ಸ್ನೇಹಿತ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಫ್ರಾನ್ಸ್‌ನಂತಹ ದೇಶಗಳಿಗೆ ಭಾರತದಲ್ಲೇ ಬಂದು ಶಸ್ತ್ರಾಸ್ತ್ರ ಉತ್ಪಾದಿಸುವಂತೆ (ಮೇಕ್‌ ಇನ್‌ ಇಂಡಿಯಾ) ಮನವೊಲಿಸಿದೆ ಎಂದು ರಾಜನಾಥ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next