ನವದೆಹಲಿ : ”ವಿದೇಶಾಂಗ ನೀತಿಗಳಲ್ಲಿ ಮತಬ್ಯಾಂಕ್ ರಾಜಕಾರಣ ಮೇಲುಗೈ ಸಾಧಿಸುವ ದಿನಗಳು ಕಳೆದು ಹೋಗಿವೆ ಮತ್ತು ಇಸ್ರೇಲ್‌ನ ವಿಚಾರದಲ್ಲಿ ಭಾರತದ ಪ್ರಸ್ತುತ ನಿಲುವು ಇದಕ್ಕೆ ಸಾಕ್ಷಿ” ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
‘ದಿ ಇಂಡಿಯಾ ವೇ : ಸ್ಟ್ರೇಟರ್ಜಿಸ್ ಫಾರ್ ಎನ್ ಅನ್ ಸರ್ಟೈನ್ ವರ್ಲ್ಡ್” ಗುಜರಾತಿ ಭಾಷಾಂತರ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೈಶಂಕರ್ ಅವರು ಶೋತೃಗಳ ಪ್ರಶ್ನೆಗಳಿಗೆ ಉತ್ತರಿಸಿದರು.
“ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಯುಗಗಳಿಂದ ನಡೆಯುತ್ತಿದೆ. ನಮಗೆ ಕೆಲವು ರಾಜಕೀಯ ಕಾರಣಗಳಿವೆ, ಇದರಿಂದಾಗಿ ನಾವು ಇಸ್ರೇಲ್‌ನೊಂದಿಗೆ ನಮ್ಮ ಸಂಬಂಧವನ್ನು ಮುಂದುವರಿಸಲಿಲ್ಲ. ನಾವು ನಮ್ಮನ್ನು ನಿರ್ಬಂಧಿಸಿದ್ದೇವೆ. ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಮೊದಲ ಪ್ರಧಾನಿಯಾಗಿದ್ದಾರೆ. ನಾವು ಬಾಂಧವ್ಯದಿಂದ ಪ್ರಯೋಜನ ಪಡೆಯಬಹುದಿತ್ತು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಆದರೆ ಒಮ್ಮೆ ನೀವು ವೋಟ್ ಬ್ಯಾಂಕ್ ರಾಜಕಾರಣದಿಂದ ಹೊರಬಂದರೆ, ನಿಮ್ಮ ವಿದೇಶಾಂಗ ನೀತಿಗಳು ಸಹ ಪರಿಣಾಮ ಬೀರುತ್ತವೆ. ವೋಟ್ ಬ್ಯಾಂಕ್ ರಾಜಕೀಯವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಪ್ರಾಬಲ್ಯ ಸಾಧಿಸಿದ ದಿನಗಳು ಕಳೆದುಹೋಗಿವೆ” ಎಂದು ಜೈಶಂಕರ್ ಹೇಳಿದರು.
ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತುಸಚಿವ ಡಾ ಎಸ್ ಜೈಶಂಕರ್ ಮಾತನಾಡಿ, ”ಬಲವಂತದ ಜನಸಂಖ್ಯಾ ನಿಯಂತ್ರಣದ ಅತ್ಯಂತ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಶಿಕ್ಷಣ, ಸಾಮಾಜಿಕ ಅರಿವು ಮತ್ತು ಸಮೃದ್ಧಿಯ ಕಾರಣದಿಂದಾಗಿ ಭಾರತೀಯ ಜನಸಂಖ್ಯೆಯ ಬೆಳವಣಿಗೆಯ ದರವು ಕ್ಷೀಣಿಸುತ್ತಿದೆ. ನಮ್ಮಲ್ಲಿ ಪ್ರತಿಯೊಬ್ಬರ ಕುಟುಂಬದ ಗಾತ್ರವು ಕಾಲಾನಂತರದಲ್ಲಿ ಚಿಕ್ಕದಾಗುತ್ತಿದೆ. ಬಲವಂತದ ಜನಸಂಖ್ಯೆ ನಿಯಂತ್ರಣವು ತುಂಬಾ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು, ಇದು ಲಿಂಗ ಅಸಮತೋಲನಕ್ಕೆ ಕಾರಣವಾಗಬಹುದು” ಎಂದರು.