ಜೆರುಸಲೇಮ್ : ಪ್ಯಾಲೆಸ್ತೀನ್ ಪ್ರೇರಿತ ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ ಸಮಾರಾ ಸಾರಿದ್ದು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಶನಿವಾರ ಶಪಥಗೈದಿದೆ.
ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಹಮಾಸ್ ಉಗ್ರಗಾಮಿಗಳ ದಾಳಿಗೆ ಒಳಗಾಗಿರುವ ದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ “ಜಾಗರೂಕರಾಗಿರಿ” ಮತ್ತು “ಸ್ಥಳೀಯ ಅಧಿಕಾರಿಗಳು ಸಲಹೆ ನೀಡಿದಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಮನಿಸಿ” ಎಂದು ಹೇಳಿದೆ.
ಇಸ್ರೇಲ್ ಮೇಲಿನ ಹಮಾಸ್ ಭಯೋತ್ಪಾದಕರ ದಾಳಿಯ ಕುರಿತು, ಇಸ್ರೇಲ್ ರಕ್ಷಣಾ ಪಡೆಗಳ ಮಾಜಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಜೊನಾಥನ್ ಕಾನ್ರಿಕಸ್ ಪ್ರತಿಕ್ರಿಯಿಸಿ ”ಇದು ಇಸ್ರೇಲ್‌ನಲ್ಲಿ ಅತ್ಯಂತ ತೀವ್ರತೆಯಿಂದ ಕೂಡಿದ ದಿನವಾಗಿದೆ. ಗಾಜಾದಿಂದ ಇಸ್ರೇಲ್‌ಗೆ ನೂರಾರು ಹಮಾಸ್ ಭಯೋತ್ಪಾದಕರು ನುಸುಳಿ ಇಸ್ರೇಲಿ ನಾಗರಿಕರ ವಿರುದ್ಧ ಅಪ್ರಚೋದಿತ ದಾಳಿ ಆರಂಭಿಸಿದ್ದಾರೆ. ಇಸ್ರೇಲಿ ನಾಗರಿಕರನ್ನು ಅವರ ಮನೆಗಳಿಂದ ಹೊರಗೆಳೆಯುತ್ತಿದ್ದಾರೆ, ಅಪಹರಿಸಿ ಗಲ್ಲಿಗೇರಿಸುತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲಿ ನಾಗರಿಕರನ್ನು ಬಂಧಿಸಿರುವ ವರದಿಗಳನ್ನು ನಾವು ಪಡೆದಿದ್ದೇವೆ. ಸಾವುನೋವುಗಳ ಬಗ್ಗೆ ದೃಢೀಕರಿಸದ ಹಲವು ವರದಿಗಳಿವೆ ಎಂದು ಹೇಳಿದ್ದಾರೆ.
ನಮ್ಮ ರಾಜಧಾನಿ ಜೆರುಸಲೆಮ್ ಮತ್ತು ಟೆಲ್ ಅವಿವ್ ಸೇರಿದಂತೆ ಜನ ವಸತಿ ಇರುವ ಸ್ಥಳಗಳ ಮೇಲೆ 1,000 ಕ್ಕೂ ಹೆಚ್ಚು ರಾಕೆಟ್‌ಗಳು ಈಗಾಗಲೇ ಹಾರಿಸಲ್ಪಟ್ಟಿವೆ. ಇಸ್ರೇಲ್ ಗಾಜಾದಲ್ಲಿ ಹಮಾಸ್‌ಗೆ ಸೇರಿದ ಮಿಲಿಟರಿ ಗುರಿಗಳ ವಿರುದ್ಧ ಪ್ರತೀಕಾರದ ಮೊದಲ ಹಂತವನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಇಸ್ರೇಲಿ ಪ್ರತಿಕ್ರಿಯೆಯು ಈ ಮೊದಲು ನೋಡದ ಮಟ್ಟವನ್ನು ಮೀರುತ್ತದೆ ಎಂದು ನಾನು ಭಾವಿಸುತ್ತೇನೆ, ಹಮಾಸ್ ಅಲ್ಲ ಮತ್ತು ಇತರ ಯಾವುದೇ ದುಷ್ಟ ಶಕ್ತಿಗಳಿಂದ್ ಆಗಲಿ ಇಸ್ರೇಲ್ ಪ್ರತಿಕ್ರಿಯೆಯನ್ನು ವಿಸ್ತರಿಸುತ್ತದೆ. ಪ್ರಸ್ತುತ ಕಾರ್ಯಾಚರಣೆಯ ಪ್ರದೇಶವಾದ ಗಾಜಾ ಪಟ್ಟಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ ಎಂದು ನಾನು ತಳ್ಳಿಹಾಕುವುದಿಲ್ಲ, ಆದರೆ ಇಸ್ರೇಲ್ ನಿಂದ ಪ್ರತೀಕಾರದ ದಾಳಿಗಳನ್ನು ನಾವು ನೋಡಬಹುದು ಎಂದು ಹೇಳಿದ್ದಾರೆ.
ಯುಕೆ ಪ್ರಧಾನಿ ರಿಷಿ ಸುನಾಕ್ ಎಕ್ಸ್ ಪೋಸ್ಟ್ ನಲ್ಲಿ, ಇಸ್ರೇಲಿ ನಾಗರಿಕರ ಮೇಲೆ ಹಮಾಸ್ ಭಯೋತ್ಪಾದಕರ ದಾಳಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಂಪೂರ್ಣ ಹಕ್ಕನ್ನು ಹೊಂದಿದೆ.ನಾವು ಇಸ್ರೇಲಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಇಸ್ರೇಲ್‌ನಲ್ಲಿರುವ ಬ್ರಿಟಿಷ್ ಪ್ರಜೆಗಳು ಪ್ರಯಾಣ ಸಲಹೆಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಇಸ್ರೇಲ್ ವಿರುದ್ಧ ಗಾಜಾ ಉಗ್ರಗಾಮಿಗಳು ನಡೆಸಿದ ರಾಕೆಟ್ ಸುರಿಮಳೆ ಮತ್ತು ದಾಳಿಯು “ವಿವೇಚನಾರಹಿತ ಹಿಂಸಾಚಾರ” ಎಂದು ಸ್ಪೇನ್ ಆಕ್ರೋಶ ಹೊರ ಹಾಕಿದೆ.
ಶನಿವಾರ ದಿಗ್ಬಂಧನಕ್ಕೊಳಗಾಗಿರುವ ಗಾಜಾ ಪಟ್ಟಿಯಿಂದ ಭಾರೀ ಪ್ರಮಾಣದ ರಾಕೆಟ್‌ಗಳನ್ನು ಹಾರಿಸಲಾಗಿದ್ದು ಇಸ್ರೇಲ್‌ನಲ್ಲಿ ಕೆಲ ಸಾವು ನೋವು ಸಂಭವಿಸಿದೆ.
ಪ್ಯಾಲೆಸ್ತೀನ್ ಪರ ಹಮಾಸ್‌ನ ಸಶಸ್ತ್ರ ವಿಭಾಗವು 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿದ್ದು, ನಾವು ಇಸ್ರೇಲ್ ನ ಎಲ್ಲಾ ಆಕ್ರಮಣಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ, ಹೊಣೆಗಾರಿಕೆಯಿಲ್ಲದೆ ಅವರ ಮೇಲೆ ಆಕ್ರಮಣ ಮಾಡುವ ಸಮಯ ಮುಗಿದಿದೆ. ”ಆಪರೇಷನ್ ಅಲ್-ಅಕ್ಸಾ” ವನ್ನು ಘೋಷಿಸುತ್ತೇವೆ ಎಂದು ಹೇಳಿಕೊಂಡಿದೆ.