Advertisement

ಕುಟುಂಬ ಆಧಾರಿತ ಪಕ್ಷಗಳಿಂದ ಪ್ರಜಾಸತ್ತೆಗೆ ಅಪಾಯ

09:01 PM Nov 26, 2021 | Team Udayavani |

ನವದೆಹಲಿ:”ಒಂದು ಕುಟುಂಬಕ್ಕಾಗಿ, ಒಂದು ಕುಟುಂಬದಿಂದ ನಡೆಯುತ್ತಿರುವ ಪಕ್ಷದ ಬಗ್ಗೆ ನಾನು ಏನೂ ಹೇಳಬೇಕಾಗಿಲ್ಲ. ಹಲವು ತಲೆಮಾರುಗಳ ಕಾಲ ಒಂದೇ ಕುಟುಂಬವು ಒಂದು ಪಕ್ಷವನ್ನು ಮುನ್ನಡೆಸುತ್ತಿದ್ದರೆ, ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ.’

Advertisement

ಹೀಗೆಂದು ಕಾಂಗ್ರೆಸ್‌ನ ಹೆಸರೆತ್ತದೇ ಆ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ.

“ಸಂವಿಧಾನ ದಿನ’ದ ಅಂಗವಾಗಿ ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಈ ಮಾತುಗಳನ್ನಾಡಿದ್ದಾರೆ.

ಕಾಂಗ್ರೆಸ್‌ ಸೇರಿದಂತೆ 15 ಪ್ರತಿಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿ ದೂರ ಉಳಿದಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಭಾಷಣದುದ್ದಕ್ಕೂ ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಪ್ರಧಾನಿ ಮೋದಿ, “ಭಾರತವು ಒಂದು ರೀತಿಯ ಬಿಕ್ಕಟ್ಟಿನತ್ತ ಹೊರಳುತ್ತಿದೆ. ಪ್ರಜಾಸತ್ತೆಯ ಸ್ಫೂರ್ತಿಯ ಮೇಲೆ ನಂಬಿಕೆಯಿಟ್ಟವರಿಗೆ ಇದೊಂದು ಕಳವಳಕಾರಿ ವಿಚಾರ’ ಎಂದಿದ್ದಾರೆ.

ಸಂವಿಧಾನವನ್ನು ರಕ್ಷಿಸಬೇಕು ಎಂದು ಬಯಸುವವರಿಗೆ ಈ ವಂಶಾಡಳಿತದ ರಾಜಕೀಯ ಪಕ್ಷಗಳೇ ದೊಡ್ಡ ತಲೆನೋವು. ಒಂದು ಕುಟುಂಬದ ಒಬ್ಬರಿಗಿಂತ ಹೆಚ್ಚು ಮಂದಿ ರಾಜಕೀಯ ಪ್ರವೇಶಿಸಬಾರದು ಎಂದು ನಾನು ಹೇಳುತ್ತಿಲ್ಲ. ಅವರವರ ಅರ್ಹತೆಗೆ ಅನುಗುಣವಾಗಿ, ಜನರ ಆಶೀರ್ವಾದವಿದ್ದರೆ, ಯಾರು ಬೇಕಿದ್ದರೂ ರಾಜಕೀಯ ಪ್ರವೇಶಿಸಬಹುದು. ಆದರೆ, ಒಂದು ರಾಜಕೀಯ ಪಕ್ಷವನ್ನು ಹಲವು ತಲೆಮಾರುಗಳ ಕಾಲ ಒಂದೇ ಕುಟುಂಬ ನಿರ್ವಹಿಸುತ್ತಿದ್ದರೆ, ಅದು ಪ್ರಜಾಸತ್ತೆಗೆ ಅಪಾಯವಾಗಿ ಪರಿಣಮಿಸುತ್ತದೆ ಎನ್ನುವ ಮೂಲಕ ಗಾಂಧಿ ಕುಟುಂಬವನ್ನು ಕುಟುಕಿದ್ದಾರೆ.

Advertisement

ಇದನ್ನೂ ಓದಿ:ನಿನ್ನೆ ಬಿಜೆಪಿ ಅಭ್ಯರ್ಥಿ, ಇಂದು ಕಾಂಗ್ರೆಸ್ ಅಭ್ಯರ್ಥಿಯಿಂದ ಸಂಸದೆ ಸುಮಲತಾ ಭೇಟಿ

15 ಪ್ರತಿಪಕ್ಷಗಳಿಂದ ಬಹಿಷ್ಕಾರ
ಕಾಂಗ್ರೆಸ್‌, ಎಸ್‌ಪಿ, ಆಪ್‌, ಸಿಪಿಐ, ಸಿಪಿಎಂ, ಡಿಎಂಕೆ, ಎಸ್‌ಎಡಿ, ಶಿವಸೇನೆ, ಎನ್‌ಸಿಪಿ, ಟಿಎಂಸಿ ಸೇರಿದಂತೆ ಸುಮಾರು 15 ಪ್ರತಿಪಕ್ಷಗಳು ಸಂವಿಧಾನ ದಿನದ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು. “ಸರ್ಕಾರವು ಸಂವಿಧಾನವನ್ನು ಗೌರವಿಸುತ್ತಿಲ್ಲ, ಬದಲಾಗಿ ಸಂವಿಧಾನಕ್ಕೆ ಅವಹೇಳನ ಮಾಡುತ್ತಿದೆ ಎಂಬುದನ್ನು ದೇಶಕ್ಕೆ ನೆನಪಿಸಬೇಕಿತ್ತು. ಕೇಂದ್ರದ ಬಿಜೆಪಿ ಸರ್ಕಾರವು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತನ್ನಿಷ್ಟಬಂದಂತೆ ಕಾನೂನುಗಳನ್ನು ಅಂಗೀಕರಿಸುತ್ತಿವೆ ಮತ್ತು ಸಂಸದೀಯ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದೆ. ಇದರ ವಿರುದ್ಧ ಪ್ರತಿಭಟನಾರ್ಥವಾಗಿ ನಾವು ಕಾರ್ಯಕ್ರಮ ಬಹಿಷ್ಕರಿಸಿದ್ದೇವೆ’ ಎಂದು ಕಾಂಗ್ರೆಸ್‌ ವಕ್ತಾರ ಆನಂದ್‌ ಶರ್ಮಾ ಹೇಳಿದ್ದಾರೆ.

ಪ್ರತಿಪಕ್ಷಗಳ ನಡೆಗೆ ಸ್ಪೀಕರ್‌ ಅಸಮಾಧಾನ
ಸಂವಿಧಾನ ದಿನದ ಕಾರ್ಯಕ್ರಮವನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದ್ದಕ್ಕೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ನಿಷ್ಪಕ್ಷ ಕಾರ್ಯಕ್ರಮಗಳಿಂದ ದೂರವುಳಿಯುವುದು ಪ್ರಜಾಸತ್ತೆಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next