Advertisement
ಹಿಮಾಚಲ ಪ್ರದೇಶದ ಟಿಂಕು ನಲ್ಲಾಹ್ ಸಮೀಪದ ಪೂಹ್ ಎಂಬಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೋ ಜನವರಿ ಆರಂಭದಲ್ಲಿಯೇ ಆನ್ ಲೈನ್ ನಲ್ಲಿ ಪ್ರಕಟವಾಗಿದ್ದು, ಇದೀಗ ಐಆರ್ ಎಸ್ ಅಧಿಕಾರಿ ನಾವೀದ್ ಟ್ರುಮ್ ಬೂ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಮದ ಬಂಡೆ ಕುಸಿದು ರಸ್ತೆ ಮೇಲೆ ಬೀಳುತ್ತಿದ್ದು, ನಂತರ ಇಡೀ ಹಿಮರಾಶಿ ರಸ್ತೆ ಮೇಲೆ ನಿಧಾನಕ್ಕೆ ಚಲಿಸುತ್ತಾ ಬರುತ್ತಿದೆ. ಇದನ್ನು ಕೆಲವು ಪ್ರವಾಸಿಗರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಆದರೆ ಹಿಮರಾಶಿ ಜಾರುತ್ತಾ ಬಂದಂತೆ ಪ್ರವಾಸಿಗರು ಗೋ ಬ್ಯಾಕ್ , ಗೋ ಬ್ಯಾಕ್ ಎಂದು ಕೂಗುತ್ತಾ ಹಿಂದಡಿ ಇಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕೆಲವು ಪ್ರವಾಸಿಗರು ತಮ್ಮ ಕಾರುಗಳನ್ನು ಹಿಂದಕ್ಕೆ ಎಳೆಯುತ್ತಿರುವುದು ವಿಡಿಯೋದಲ್ಲಿದೆ.