ಪಾಟ್ನಾ: ಹುಟ್ಟೂರು ಭಕ್ತಿಯಾರ್ಪುರದಲ್ಲಿ ಭಾನುವಾರ ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ಯುವಕನೊಬ್ಬ ದಾಳಿ ಮಾಡಿದ ಘಟನೆ ನಡೆದಿದೆ.
ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ವೇಳೆ, ಏಕಾಏಕಿ ಓಡಿ ಬಂದ ಯುವಕ ಸಿಎಂ ನಿತೀಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಅದೇ ಊರಿನ ಶಂಕರ್ ಅಲಿಯಾಸ್ ಚೋಟು(25) ಎಂದು ಗುರುತಿಸಲಾಗಿದೆ.
ಆತ ಊರಿನಲ್ಲಿ ಸಣ್ಣ ಆಭರಣದ ಅಂಗಡಿಯನ್ನು ಇಟ್ಟುಕೊಂಡಿದ್ದಾನೆ. ಆದರೆ ಆತ ಏಕೆ ಈ ಕೃತ್ಯವೆಸಗಿದ ಎಂಬುದು ತಿಳಿದುಬಂದಿಲ್ಲ. ಸಿಎಂ ಮೇಲೆ ನಡೆದ ದಾಳಿಯನ್ನು ಬಿಜೆಪಿ ಹಾಗೂ ಪ್ರತಿಪಕ್ಷ ಆರ್ಜೆಡಿ ಖಂಡಿಸಿದೆ.