ಟೋಕಿಯೋ: ಜಪಾನ್ ಖಾಸಗಿ ಕಂಪನಿಯೊಂದು ಪ್ರಥಮ ಬಾರಿಗೆ ತಯಾರಿಸಿದ್ದ ರಾಕೆಟ್ ಉಡಾವಣೆಗೊಂಡ ಬೆನ್ನಲ್ಲೇ ಸ್ಫೋಟಗೊಂಡಿರುವ ಘಟನೆ ನಡೆದಿದ್ದು, ರಾಕೆಟ್ ಉಡಾವಣೆ ವಿಫಲವಾಗಿರುವ ದೃಶ್ಯವನ್ನು ಎನ್ ಎಚ್ ಕೆ ಬ್ರಾಡ್ ಕಾಸ್ಟ್ ಪ್ರಸಾರ ಮಾಡಿದೆ.
ಇದನ್ನೂ ಓದಿ:Sidhu Moosewala: ಸಿಧು ಮೂಸೆವಾಲ ಅವರ ತಾಯಿ ಗರ್ಭಿಣಿ ಅಲ್ವಂತೆ… ತಂದೆ ಹೇಳಿದ್ದೇನು ?
ಟೋಕಿಯೋ ಮೂಲದ ಮೊದಲ ಖಾಸಗಿ ಸ್ಟಾರ್ಟ್ ಅಪ್ ಸ್ಪೇಸ್ ಒನ್ ಸಂಸ್ಥೆ ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಗುರಿ ಹೊಂದಿತ್ತು.
18 ಮೀಟರ್ (60ಅಡಿ) ಎತ್ತರದ ಘನ ಇಂಧನ ಕೈರೋಸ್ ರಾಕೆಟ್ ಪಶ್ಚಿಮ ಜಪಾನ್ ನ ವಕಯಾಮಾ ಪ್ರಿಫೆಕ್ಚರ್ ನಲ್ಲಿರುವ ಸ್ಟಾರ್ಟ್ ಅಪ್ ನ ಸ್ವಂತ ಲಾಂಚ್ ಪ್ಯಾಡ್ ನಲ್ಲಿ ಪರೀಕ್ಷಾರ್ಥ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.
ಆದರೆ ಉಡಾವಣೆಗೊಂಡ ಬೆನ್ನಲ್ಲೇ ರಾಕೆಟ್ ಸ್ಫೋಟಗೊಂಡು ಬೆಂಕಿ ಉಂಡೆಯಂತೆ ಉರಿದು ಲಾಂಚ್ ಪ್ಯಾಡ್ ಸುತ್ತಲೂ ದಟ್ಟ ಹೊಗೆ ಆವರಿಸಿಕೊಂಡಿತ್ತು ಎಂದು ವರದಿ ವಿವರಿಸಿದೆ. ಸುಟ್ಟು ಕರಕಲಾದ ಅವಶೇಷ ಸುತ್ತಲಿನ ಪರ್ವತ ಪ್ರದೇಶದ ಇಳಿಜಾರಿನಲ್ಲಿ ಉದುರಿ ಬಿದ್ದಿರುವುದಾಗಿ ವರದಿ ತಿಳಿಸಿದೆ.
ರಾಕೆಟ್ ಉಡ್ಡಾಯನ ಸಂದರ್ಭದಲ್ಲಿ ಸ್ಫೋಟಗೊಂಡ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ನಮ್ಮ ವೈಫಲ್ಯತೆಯಿಂದ ಜಪಾನ್ ನ ಸೆಟಲೈಟ್ ಉಡಾವಣೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಸ್ಪೇಸ್ ಒನ್ ಅಭಿಪ್ರಾಯವ್ಯಕ್ತಪಡಿಸಿದೆ.